ಪುಷ್ಪನಮನ ವೇಳೆ ಮಗಳ ನೆನೆದು ಕಣ್ಣೀರಿಟ್ಟ ತಾಯಿ - ಚಿಕ್ಕಮಗಳೂರು ಪೊಲೀಸ್ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9254927-thumbnail-3x2-gng.jpg)
ಚಿಕ್ಕಮಗಳೂರು: ಪೊಲೀಸ್ ಹುತಾತ್ಮ ದಿನಾಚರಣೆಯಂದು ಪುಷ್ಪ ಸಮರ್ಪಣೆ ವೇಳೆ ಪೊಲೀಸ್ ಸಿಬ್ಬಂದಿಯಾಗಿದ್ದ ಮಗಳನ್ನು ನೆನೆದು ತಾಯಿ ಕಣ್ಣೀರು ಇಟ್ಟಿರುವ ಘಟನೆ ಚಿಕ್ಕಮಗಳೂರಿನ ಡಿ.ಎ.ಆರ್. ಮೈದಾನದಲ್ಲಿ ನಡೆದಿದೆ. ತರೀಕೆರೆ ತಾಲೂಕಿನ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಮುಖ್ಯ ಪೊಲೀಸ್ ಸಿಬ್ಬಂದಿ ಶಕುಂತಲಾ ಎಂಬುವರು ಕೊರೊನಾದಿಂದ ಸಾವನ್ನಪ್ಪಿದ್ದರು. ಇನ್ನು ಹುತಾತ್ಮ ಪೊಲೀಸ್ ಪುತ್ಥಳಿಗೆ ಪುಷ್ಪ ಸಮರ್ಪಣೆ ವೇಳೆ ಮಗಳ ನೆನೆದು ತಾಯಿ ಕಮಲಮ್ಮ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.