ಗ್ರಾಮೀಣ ಭಾಗದಲ್ಲಿ ಕೊರೊನಾ ಜಾಗ್ರತಿ ಮೂಡಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕಾರ್ - ಹಿಂಡಲಗಾ ಭಾಗದಲ್ಲಿ ಕೊರೊನಾ ವೈರಸ್ ಕುರಿತು ಜಾಗೃತಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6566434-thumbnail-3x2-hhbfd.jpg)
ಬೆಳಗಾವಿ: ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಇಂದು ಕ್ಷೇತ್ರದ ಹಿಂಡಲಗಾ ಭಾಗದಲ್ಲಿ ಕೊರೊನಾ ವೈರಸ್ ಕುರಿತು ಜಾಗೃತಿ ಅಭಿಯಾನ ಮೂಡಿಸಿದರು. ಅಲ್ಲದೇ ಇದೇ ವೇಳೆ, ಗ್ರಾಮದಲ್ಲಿ ಔಷಧ ಸಿಂಪಡಿಸಿ ತಿಳಿವಳಿಕೆ ಮೂಡಿಸಿದರು. ಕಾರ್ಯಕರ್ತರು ಹಾಗೂ ಅಧಿಕಾರಿಗಳ ಜೊತೆ ಗ್ರಾಮಕ್ಕೆ ತೆರಳಿದ ಹೆಬ್ಬಾಳಕರ್, ಗ್ರಾಮದಲ್ಲೆಲ್ಲ ಸ್ವತಃ ಔಷಧಗಳನ್ನು ಸಿಂಪಡಿಸಿದರು. ಜೊತೆಗೆ ಗ್ರಾಮಸ್ಥರಿಗೆ ಕೊರೊನಾ ಕುರಿತು ಭಯ ಬಡ, ಆದರೆ, ಜಾಗ್ರತೆ ಇರಲಿ ಎಂದು ತಿಳಿವಳಿಕೆ ನೀಡಿದರು. ಪ್ರಧಾನ ನರೇಂದ್ರ ಮೋದಿ ತಿಳಿಸಿರುವಂತೆ ನಾವೆಲ್ಲ 21 ದಿನ ಮನೆಯಲ್ಲೇ ಇದ್ದು ಕೊರೋನಾ ಹರಡದಂತೆ ಎಚ್ಚರ ವಹಿಸೋಣ ಎಂದು ಲಕ್ಷ್ಮಿ ಹೆಬ್ಬಾಳಕರ್ ವಿನಂತಿಸಿದರು.