ಚಿಂಚೋಳಿ: ತೆರೆದ ಬಾವಿಯಲ್ಲಿ ಬಿಸಿ ನೀರು! - ಬಾವಿಯಲ್ಲಿ ಬಿಸಿ ನೀರು
🎬 Watch Now: Feature Video

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದ ಮನೆಯೊಂದರ ಬಾವಿಯಲ್ಲಿ ಬಿಸಿ ನೀರು ಬರುವ ಮೂಲಕ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಸುಲೇಪೇಟ್ ಗ್ರಾಮದ ಶಕುಂತಲಾ ಸಜ್ಜನ್ ಎಂಬುವರ ಮನೆಯಲ್ಲಿ ಸುಮಾರು 50 ಅಡಿ ಆಳದ ತೆರೆದ ಬಾವಿ ಇದೆ. ಇದರಲ್ಲಿ ಕಳೆದ 15 ದಿನಗಳಿಂದ ಬಿಸಿ ನೀರು ಬರುತ್ತಿದೆ. ಬಾವಿಗಳಲ್ಲಿ ತಂಪು ನೀರು ಬರುವುದು ಸಾಮಾನ್ಯ. ಆದ್ರೆ ಈ ಬಾವಿಯಲ್ಲಿ ಮಾತ್ರ ಬಿಸಿ ನೀರು ಬರುತ್ತಿದೆ. ಇದು ಸಾರ್ವಜನಿಕರಲ್ಲಿ ಆಶ್ಚರ್ಯದ ಜೊತೆಗೆ ಆತಂಕ ಮೂಡಿಸಿದೆ. ಈ ವಿಷಯ ಈಗಾಗಲೇ ಅಧಿಕಾರಿಗಳ ಗಮನಕ್ಕೂ ಬಂದಿದ್ದು, ಅವರು ಸಹ ಸ್ಥಳಕ್ಕೆ ಭೇಟಿ ನೀಡಿ ನೀರನ್ನು ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.