ಕಾಗವಾಡ ತಾಲೂಕಿನಲ್ಲಿ ವರುಣನ ಆರ್ಭಟ: ದೇವಸ್ಥಾನ ಜಲಾವೃತ - Flooding in Belgaum District
🎬 Watch Now: Feature Video
ಚಿಕ್ಕೋಡಿ: ಕಾಗವಾಡ ತಾಲೂಕಿನಲ್ಲಿ ನಿರಂತರವಾಗಿ ಮಳೆ ಬೀಳುತ್ತಿದ್ದು ಕೆಂಪವಾಡ ಗ್ರಾಮಕ್ಕೆ ಜಲ ದಿಗ್ಭಂಧನವಾಗಿದೆ. ಮೋಳೆ ಗ್ರಾಮದ ಸೇತುವೆ ಮುಳುಗಡೆಯಾಗಿದ್ದು ಅಥಣಿ-ಮೋಳೆ ಸಂಚಾರ ಬಂದ್ ಆಗಿದೆ. ಕೆಂಪವಾಡ, ಮೋಳೆ ಗ್ರಾಮದ ಹಳ್ಳಗಳು ಉಕ್ಕಿ ಹರಿಯುತ್ತಿದೆ. ಕೆಂಪವಾಡ ಗ್ರಾಮದ ಯಲ್ಲಮ್ಮ ದೇವಸ್ಥಾನ ನೀರನಲ್ಲಿ ಮುಳುಗಿದೆ. ನವಲಿಹಾಳ ಗ್ರಾಮದಲ್ಲಿ ಉಕ್ಕಿ ಹರಿಯುತ್ತಿರುವ ಹಳ್ಳದಿಂದಾಗಿ ದೇವಸ್ಥಾನ ಜಲಾವೃತಗೊಂಡಿದೆ.