ಸಿಲಿಕಾನ್ ಸಿಟಿಯ ಹಲವೆಡೆ ಗುಡುಗು ಸಹಿತ ಮಳೆಯ ಅಬ್ಬರ...
🎬 Watch Now: Feature Video
ಬೆಂಗಳೂರು: ಸುಡು ಬಿಸಿಲಿನಿಂದ ಬೇಸತ್ತಿದ್ದ ಉದ್ಯಾನ ನಗರಿ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ನಗರದ ಹಲವೆಡೆ ಗುಡುಗು ಸಹಿತ ಮಳೆಯ ಅಬ್ಬರ ಜೋರಾಗಿತ್ತು. ಶನಿವಾರ ರಾತ್ರಿ 9:30 ಕ್ಕೆ ಶುರುವಾದ ಮಳೆ ತಡರಾತ್ರಿವರೆಗೂ ಸುರಿದಿದೆ. ನಗರದ ಮೆಜೆಸ್ಟಿಕ್, ಕಾಟನ್ ಪೇಟೆ, ಆನಂದರಾವ್ ಸರ್ಕಲ್, ಶಿವಾನಂದ, ಮೌರ್ಯ ಸರ್ಕಲ್, ಓಕಳಿಪುರಂ, ಕೆ ಆರ್ ಮಾರ್ಕೆಟ್ ಸೇರಿದಂತೆ ಯಶವಂತಪುರ, ರಾಜಾಜಿನಗರ, ಸುಜಾತ, ಬಸವೇಶ್ವರ ನಗರ, ವಿಜಯನಗರದಲ್ಲೂ ಬಿಡದೇ ಮಳೆರಾಯ ಅಬ್ಬರಿಸಿದ್ದಾನೆ.