ಯಲಬುರ್ಗಾ ತಾಲೂಕಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ- ತುಂಬಿ ಹರಿದ ಹಳ್ಳ-ಕೊಳ್ಳಗಳು - ಯಲಬುರ್ಗಾ ಮಳೆ

🎬 Watch Now: Feature Video

thumbnail

By

Published : May 8, 2021, 7:03 AM IST

ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ಶುಕ್ರವಾರ ಸಂಜೆ ಭಾರಿ ಮಳೆಯಾಗಿದೆ. ತಾಲೂಕಿನ ಕೊನಸಾಗರ ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದಿದೆ. ಶುಕ್ರವಾರ ಸಂಜೆ 4:30 ರ ಹೊತ್ತಿಗೆ ಪ್ರಾರಂಭವಾದ ಮಳೆ ಸುಮಾರು 1 ಗಂಟೆ ಕಾಲ ಸುರಿದಿದೆ. ಮಳೆಯ ಆರ್ಭಟದಿಂದ ಹಳ್ಳ ಕೊಳ್ಳಗಳು ತುಂಬಿ ಹರಿದಿದ್ದು, ಬಿಸಿಲಿನ ಬೇಗೆಗೆ ಕಾದಿದ್ದ ಭುವಿಗೆ ತಂಪೆರೆದಂತಾಗಿದೆ. ಮಳೆ ಸುರಿದಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.