ರಾಣೇಬೆನ್ನೂರಲ್ಲಿ ದೀಪಾವಳಿ ಖರೀದಿ ಜೋರು... ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ! - ದೀಪಾವಳಿ ಹಬ್ಬಕ್ಕೆ ಖರೀದಿ
🎬 Watch Now: Feature Video

ರಾಣೇಬೆನ್ನೂರು: ನಾಡಿನ ಪ್ರಮುಖ ಹಬ್ಬವಾದ ದೀಪದ ಹಬ್ಬಕ್ಕೆ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿ ಭಾನುವಾರ ಹಬ್ಬದ ಖರೀದಿ ಭರಾಟೆ ಜೋರಾಗಿತ್ತು. ದೀಪಾವಳಿ ಹಬ್ಬದ ಸಮಯದಲ್ಲಿ ಗಡಿಗೆಗೆ ಮಹಾಲಿಂಗನ ಬಳ್ಳಿ ಸುತ್ತಿ ಹಬ್ಬ ಆಚರಿಸುವ ಸಂಪ್ರದಾಯ ಈ ಭಾಗದಲ್ಲಿದೆ. ಆದರೆ ಮಹಾಲಿಂಗನ ಬಳ್ಳಿಯನ್ನು ದುಪ್ಪಟ್ಟು ಬೆಲೆಗೆ ಮಾರುತ್ತಿರುವುದರಿಂದ ಜನರು ಖರೀದಿಸಲು ಹಿಂದೇಟು ಹಾಕುತ್ತಿದ್ದರು. ಅಲ್ಲದೆ ಆಕಾಶ ಬುಟ್ಟಿ, ಹೂ, ಹಣ್ಣುಗಳ ಬೆಲೆಯೂ ಗಗನಕ್ಕೇರಿರುವುದು ಗ್ರಾಹಕರನ್ನು ಕಂಗಾಲಾಗಿಸಿದೆ.