ಹದ್ದು ಮೀರಿ ಭಿಕ್ಷಾಟನೆಗೆ ಬಂದ ಮಂಗಳಮುಖಿಗೆ ಬೆಂಗಳೂರಲ್ಲಿ ಹಿಗ್ಗಾಮುಗ್ಗಾ ಥಳಿತ!
🎬 Watch Now: Feature Video
ಬೆಂಗಳೂರು: ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕುಮಾರಿ ಎಂಬ ಮಂಗಳಮುಖಿ ಬಾರ್ಡರ್ ಕ್ರಾಸ್ ಮಾಡಿ ಹೋಗಿದ್ದಕ್ಕೆ ನಡುರಸ್ತೆಯಲ್ಲೇ
ಆಕೆ ಮೇಲೆ ಹಲ್ಲೆ ಮಾಡಲಾಗಿದೆ. ಅಲ್ಲದೆ, ಇತರೆ ಮಂಗಳಮುಖಿಯರು ಕೂದಲು ಕತ್ತರಿಸಿ, ಒದ್ದಿದ್ದಾರೆ. ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳಮುಖಿಯರ ಎರಡು ತಂಡಗಳಿದ್ದು, ತಮಗೆ ತಾವೇ ಏರಿಯಾ ವ್ಯಾಪ್ತಿಯನ್ನು ಸೀಮಿತಗೊಳಿಸಿಕೊಂಡಿದ್ದರು. ಆದರೆ, ಕುಮಾರಿ ಎಂಬ ಮಂಗಳಮುಖಿ ಬಾರ್ಡರ್ ಕ್ರಾಸ್ ಮಾಡಿದ್ದಕ್ಕೆ ಮತ್ತೊಂದು ಗುಂಪಿನ ಮಂಗಳಮುಖಿಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಘಟನೆ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Last Updated : Feb 18, 2020, 7:40 PM IST