ಬಾಂಬ್ ಪತ್ತೆ ಪ್ರಕರಣ: ಆರೋಪಿ ಆದಿತ್ಯ ರಾವ್ ಮಂಗಳೂರು ಪೊಲೀಸರಿಗೆ ಹಸ್ತಾಂತರ - ಆರೋಪಿ ಆದಿತ್ಯ ರಾವ್ ಮಂಗಳೂರು ಪೊಲೀಸರಿಗೆ ಹಸ್ತಾಂತರ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5802998-thumbnail-3x2-aditya.jpg)
ಬೆಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯ ರಾವ್ನನ್ನು ನೇರವಾಗಿ ಕೆಐಎಎಲ್ ಪೊಲೀಸ್ ಠಾಣೆಗೆ ಕರೆತಂದ ಅಧಿಕಾರಿಗಳು ಮಂಗಳೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಆರೋಪಿ ಆದಿತ್ಯ ಮತ್ತು ಮೂರು ಜನ ಅಧಿಕಾರಿಗಳ ತಂಡ 7:15 ಕ್ಕೆ ಸ್ಪೈಸ್ ಜೆಟ್ ವಿಮಾನದ ಮೂಲಕ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ರಾತ್ರಿ 8:40 ರ ಸುಮಾರಿಗೆ ಮಂಗಳೂರು ತಲುಪಲಿದ್ದಾರೆ. ಉಳಿದ ನಾಲ್ವರು ಅಧಿಕಾರಿಗಳು 9:20 ಕ್ಕೆ ಹೊರಡಲಿರುವ ಎರಡನೇ ಜೆಟ್ ಏರ್ವೇಸ್ ವಿಮಾನದ ಮೂಲಕ ಮಂಗಳೂರಿಗೆ ಪ್ರಯಾಣಿಸಲಿದ್ದಾರೆ. ಸಿಐಎಸ್ಎಫ್ ಭದ್ರತಾ ಸಿಬ್ಬಂದಿಯಿಂದ ದಾಖಲಾತಿಗಳ ಪರಿಶೀಲನೆಯಾದ ಬಳಿಕ ಆರೋಪಿಯನ್ನ ವಿಮಾನದ ಮೂಲಕ ಕರೆದೊಯ್ಯಲು ಅವಕಾಶ ನೀಡಲಾಯಿತು.
TAGGED:
Bomber aditya