ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ನಲ್ಲಿ ಟೂತ್ಪೇಸ್ಟ್ ತುಂಬಿದ್ದ ಲಾರಿ ಪಲ್ಟಿ - ಟೂತ್ ಪೇಸ್ಟ್ ಅನ್ನು ಲಾರಿ
🎬 Watch Now: Feature Video
ಹುಬ್ಬಳ್ಳಿ: ಹರಿಯಾಣದಿಂದ ಹುಬ್ಬಳ್ಳಿಯ ತಾರಿಹಾಳ ಇಂಡಸ್ಟ್ರೀಯಲ್ ಪ್ರದೇಶದತ್ತ ಬರುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ನಡೆದಿದೆ. ಟೂತ್ಪೇಸ್ಟ್ ಅನ್ನು ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕ ಸಾಹುಲ್ ಖಾನ್ ಹಾಗೂ ಕ್ಲೀನರ್ ಮೊಹ್ಮದ ಸಯೀಫ್ ತಕ್ಷಣವೇ ಲಾರಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಲಾರಿ ಪಲ್ಟಿಯಿಂದ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಬಳಿಕ ಲಾರಿಯನ್ನು ಮೇಲೆತ್ತಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.