ಬುರ್ಕಾ ಧರಿಸಿದ್ದ ಎರಡು ಮಹಿಳೆಯರ ಗುಂಪುಗಳಿಂದ ಕಳ್ಳತನ.. ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆ - ಬುರ್ಕಾ ಧರಿಸಿದ್ದ ಎರಡು ಗುಂಪುಗಳ ಮಹಿಳೆಯರು
🎬 Watch Now: Feature Video

ಸಂಭಾಲ್, ಉತ್ತರಪ್ರದೇಶ: ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನದ ಘಟನೆಗಳು ಬಹಿರಂಗವಾಗಿ ನಡೆಯುತ್ತಿವೆ. ಬುರ್ಕಾ ಧರಿಸಿದ್ದ ಎರಡು ಗುಂಪುಗಳ ಮಹಿಳೆಯರು ಬಟ್ಟೆ ಶಾಪ್ ಸೇರಿದಂತೆ ಇತರ ಶಾಪ್ಗಳಿಗೆ ತೆರಳಿ, ಅವಕಾಶ ಸಿಕ್ಕಾಗಲೆಲ್ಲ ತಮ್ಮ ಕೈಚಳಕ ತೋರಿಸಿದ್ದಾರೆ. ಆ ಮಹಿಳೆಯರ ಗುಂಪು ಎರಡು ಅಂಗಡಿಗಳನ್ನು ದೋಚಿಕೊಂಡಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳ್ಳತನದ ಸಿಸಿಟಿವಿ ದೃಶ್ಯಾವಳಿಯನ್ನು ಶಾಪ್ ಮಾಲೀಕರು ವೈರಲ್ ಮಾಡಿದ್ದಾರೆ. ಈ ಘಟನೆ ಹಯಾತ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸರೈ ತಾರಿನ್ ಪಟ್ಟಣದಲ್ಲಿ ನಡೆದಿದೆ.
ಬುರ್ಕಾ ಧರಿಸಿದ್ದ ಮಹಿಳೆಯರ ಎರಡು ಗುಂಪುಗಳು ಬಟ್ಟೆ ಅಥವಾ ಇನ್ನಿತರ ವಸ್ತುಗಳನ್ನು ಖರೀದಿಸುವ ಗ್ರಾಹಕರಂತೆ ಎರಡು ಶಾಪ್ಗಳಿಗೆ ತೆರಳಿದ್ದಾರೆ. ಶಾಪ್ ಕೆಲಸಗಾರರಿಗೆ ವಸ್ತುಗಳನ್ನು ತೋರಿಸುವಂತೆ ಹೇಳಿದ್ದಾರೆ. ಅಂಗಡಿ ಕೆಲಸಗಾರರ ಗ್ರಾಹಕರ ರೂಪದಲ್ಲಿದ್ದ ಕಳ್ಳರಿಗೆ ವಿವಿಧ ವಸ್ತುಗಳು ತೋರಿಸಿದ್ದಾರೆ. ಕೆಲಸಗಾರರ ಜೊತೆ ಮಾತನಾಡುತ್ತಲೇ ಮತ್ತು ಅವಕಾಶ ಸಿಕ್ಕಾಗಲೆಲ್ಲ ಸೀರೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಲಪಟಾಯಿಸಿದ್ದಾರೆ. ಬಳಿಕ ಅವರು ಅಂಗಡಿಯಲ್ಲಿ ವಸ್ತುಗಳನ್ನು ಖರೀದಿಸದೇ ತಾವು ದೋಚಿದ್ದ ವಸ್ತುಗಳೊಂದಿಗೆ ನಿರ್ಗಮಿಸಿದ್ದರು.
ಇನ್ನು ಅಂಗಡಿ ಮಾಲೀಕರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದ ವೇಳೆ ಈ ಕಳ್ಳತನದ ಘಟನೆ ಹೊರ ಬಿದ್ದಿದೆ. ಕೂಡಲೇ ಅಂಗಡಿ ಮಾಲೀಕರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಬಳಿಕ ಈ ಮಹಿಳೆಯರ ಗುಂಪಿನಿಂದ ಜಾಗೃತವಾಗಿ ಇರುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಘಟನೆಗೆ ಸಂಬಂಧಸಿದಂತೆ ಹಯಾತ್‌ನಗರ ಪೊಲೀಸ್ ಠಾಣೆಯ ಪ್ರಭಾರಿ ಕರ್ಮಪಾಲ್ ಸಿಂಗ್ ಮಾತನಾಡಿ, ಅಂತಹ ಪ್ರಕರಣವು ಇನ್ನೂ ನನ್ನ ಗಮನಕ್ಕೆ ಬಂದಿಲ್ಲ. ವ್ಯಾಪಾರಸ್ಥರಿಂದ ಲಿಖಿತ ದೂರು ನೀಡಿದರೆ ಸಂಪೂರ್ಣ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಕಳ್ಳತನ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗದಿರುವುದು ಗಮನಾರ್ಹ..
ಓದಿ: ಹಗಲು ಪೇಂಟಿಂಗ್ ವೃತ್ತಿ, ರಾತ್ರಿ ದ್ವಿಚಕ್ರ ವಾಹನ ಕಳ್ಳತನ...ಸಹೋದರರ ಬಂಧನ