ಮತ್ತೆ ಕಡಬದ ರೆಂಜಿಲಾಡಿಯಲ್ಲಿ 2 ಕಾಡಾನೆಗಳು ಪ್ರತ್ಯಕ್ಷ.. ವಿಡಿಯೋ ವೈರಲ್ - ಕಾಡಾನೆಗಳು ಸಾಗುತ್ತಿರುವ ವೀಡಿಯೋ
🎬 Watch Now: Feature Video
ಕಡಬ(ದಕ್ಷಿಣ ಕನ್ನಡ): ಈ ಹಿಂದೆ ಕಾಡಾನೆಗಳು ಇಬ್ಬರನ್ನು ಬಲಿ ಪಡೆದ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ರೆಂಜಿಲಾಡಿಯ ಸ್ವಲ್ಪ ದೂರದಲ್ಲೇ ಜನವಸತಿ ಪ್ರದೇಶದಲ್ಲಿನ ಅಂಚಿನಲ್ಲಿನ ಅರಣ್ಯ ಭಾಗದಲ್ಲಿ ಎರಡು ಕಾಡಾನೆಗಳು ಮತ್ತೆ ಕಾಣಿಸಿಕೊಂಡಿವೆ.
ರೆಂಜಿಲಾಡಿ ಗ್ರಾಮದ ತುಂಬೆ, ಕಾನದಬಾಗಿಲು ಪ್ರದೇಶದಲ್ಲಿ ರಸ್ತೆ ಬದಿಯ ಅರಣ್ಯ ಪ್ರದೇಶದಲ್ಲಿ ರವಿವಾರ ಸಂಜೆಯಿಂದಲೇ ಮರಿಯೊಂದಿಗೆ ದೊಡ್ಡ ಕಾಡಾನೆಯೊಂದು ಸಂಚರಿಸುತ್ತಿರುವುದನ್ನು ಸ್ಥಳೀಯರು ಕಂಡಿರುವುದಾಗಿ ತಿಳಿಸಿದ್ದಾರೆ. ಎರಡು ದಿನಗಳಿಂದ ಈ ಪ್ರದೇಶಗಳಲ್ಲಿ ಈ ಆನೆಗಳು ಹಲವರಿಗೆ ಕಾಣಸಿಕ್ಕಿವೆ ಎನ್ನಲಾಗಿದೆ. ಕಾಡಾನೆಗಳು ಸಾಗುತ್ತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರು, ಕಾಡಾನೆಗಳ ಸಂಚಾರದ ಬಗೆಗಿನ ಮಾಹಿತಿ ಲಭ್ಯವಾದ ತಕ್ಷಣದಿಂದಲೇ ನಮ್ಮ ಸಿಬ್ಬಂದಿ ಈ ಪ್ರದೇಶಗಳಲ್ಲಿ ಸಂಚರಿಸಿ ಮಾಹಿತಿಗಳನ್ನು ಪಡೆದು ಮುನ್ನೆಚ್ಚರಿಕೆಗಳನ್ನು ಕೈಗೊಂಡಿದ್ದಾರೆ. ನಾಳೆಯಿಂದಲೇ ಎಲಿಫಂಟ್ ಮಿಷನ್ ಆರಂಭಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಜನರು ಭಯಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ವಹಿಸಬೇಕು. ಕಾಡಾನೆಗಳು ಪತ್ತೆಯಾದಲ್ಲಿ ಕೂಡಲೇ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿ ಎಂದು ಹೇಳಿದರು.
ಇದನ್ನೂ ಓದಿ : ಕಾಡಿಗೆ ಬಿಟ್ಟರೂ ಮರಳಿ ನಾಡಿಗೆ ಬರ್ತಿದೆ ಮರಿಯಾನೆ: ಸುಳ್ಯದಲ್ಲಿ ಅರಣ್ಯ ಇಲಾಖೆಗೆ ಫಜೀತಿ- ವಿಡಿಯೋ