ಸಾವಿನ ಕದ ತಟ್ಟಿ ಬಂದೆವು: ಬಾಲಸೋರ್ ರೈಲು ಅಪಘಾತದ ಭಯಾನಕತೆ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿಗಳು! - ಸಾವಿರಾರೂ ಮಂದಿ ಗಾಯ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-18662402-thumbnail-16x9-sefedd.jpg)
ಬಾಲಸೋರ್: ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 238ಕ್ಕೆ ಏರಿಕೆಯಾಗಿದ್ದು, ಸಾವಿರಾರೂ ಮಂದಿ ಗಾಯಗೊಂಡಿದ್ದಾರೆ ಎಂದು ಒಡಿಶಾದ ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ ಶನಿವಾರ ದೃಢಪಡಿಸಿದ್ದಾರೆ. ಸಾವಿನ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ ಅಪಘಾತದ ಭೀಕರತೆ ನೋಡಿದರೆ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇನ್ನೂ ಭಯಾನಕದ ಈ ಅಪಘಾತದ ಬಗ್ಗೆ ಪತ್ಯಕ್ಷದರ್ಶಿಗಳು ಪ್ರತಿಕ್ರಿಯಿಸಿದ್ದಾರೆ.
ನಾವು ಕೋಲ್ಕತ್ತಾದಿಂದ ಕೋರಮಂಡಲ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆವು. ರೈಲು ನಿರ್ಗಮಿಸಿ ಕೆಲವೇ ಕ್ಷಣಗಳಲ್ಲಿ ಅಪಘಾತ ಸಂಭವಿಸಿತು. ಬಹುಶಃ ನಾವು ಇವತ್ತು ಬದುಕುಳಿಯುವುದಿಲ್ಲ ಎಂದು ಅನಿಸಿತು. ಅಪಘಾತವಾದಾಗ ಅನೇಕ ಜನರು ನನ್ನ ಮೇಲೆ ಬಿದ್ದರು. ಈ ವೇಳೆ, ನನ್ನ ಕಾಲಿಗೆ ಗಾಯವಾಯಿತು. ನಾನು ಗಾಯಗೊಂಡಿದ್ದರೂ ಸಹಾ ಇತರರಿಗೆ ಸಹಾಯ ಮಾಡಿ ಬದುಕುಳಿಸಿದೆ. ನಾವು ಕೆಲಸಕ್ಕಾಗಿ ಚೆನ್ನೈಗೆ ಹೋಗುತ್ತಿದ್ದೆವು. ಈಗ ಬಾಲಸೂರಿಗೂ ಹೋಗಲು ಸಾಧ್ಯವಾಗುವುದಿಲ್ಲ. ನಾವು ಬಡವರು. ಪ್ರತಿದಿನ ದುಡಿದು ಹೊಟ್ಟೆ ತುಂಬಿಸಿಕೊಳ್ಳಬೇಕು. ಸಂಪಾದನೆ ಇಲ್ಲದಿದ್ದರೆ ಅಂದು ಎಲ್ಲರೂ ಉಪವಾಸವೇ ಗತಿ. ನಮಗೆ ಚೆನ್ನೈಗೆ ಹೋಗಲು ಅನುಕೂಲ ಮಾಡಿಕೊಟ್ಟರೆ ಸಾಕು ಎಂದು ಪ್ರತ್ಯಕ್ಷದರ್ಶಿ ಮೊಹಮ್ಮದ್ ಹೇಳಿದರು.
ಓದಿ: ಒಡಿಶಾ ರೈಲು ದುರಂತ: ಸಹಾಯವಾಣಿ ಆರಂಭ, ಬೆಂಗಳೂರಿನಿಂದ ಹೊರಡುವ ರೈಲುಗಳು ರದ್ದು.. ಹಲವರ ಪರದಾಟ!