ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ರಾಕ್ಷಸರ ಸಮರ್ಥನೆ ವಿಶೇಷವಲ್ಲ: ಚಕ್ರವರ್ತಿ ಸೂಲಿಬೆಲೆ
🎬 Watch Now: Feature Video
Published : Oct 12, 2023, 3:43 PM IST
ದಾವಣಗೆರೆ: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ರಾಕ್ಷಸರ ಸಮರ್ಥನೆ ಮಾಡೋದು ವಿಶೇಷವೇನಲ್ಲ ಎಂದು ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಟೀಕಿಸಿದರು. ಮಹಿಷ ದಸರಾ ಆಚರಣೆ ವಿಚಾರವಾಗಿ ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಮಹಿಷ ದಸರಾವನ್ನು ಸಮರ್ಥನೆ ಮಾಡುವ ಹೊತ್ತಲ್ಲಿ ಪ್ಯಾಲೆಸ್ಟೀನ್ ಅನ್ನೂ ಸಮರ್ಥನೆ ಮಾಡಿರುವುದು ಕಂಡುಬಂದಿದೆ. ಇಸ್ರೇಲ್‌ನಲ್ಲಿ ರಾಕ್ಷಸಿ ಕೃತ್ಯ ಎಸಗಿದವರನ್ನೇ 'ಇಂಡಿಯಾ' ಒಕ್ಕೂಟ ಸಮರ್ಥಿಸಿಕೊಂಡಿದೆ ಎಂದರು.
ದಾವಣಗೆರೆಯಲ್ಲಿ ಮೋದಿ ಬೈಕ್ ರ್ಯಾಲಿ: ನಗರದ ದುಗ್ಗಮ್ಮ ದೇವಸ್ಥಾನದಿಂದ ನಡೆದ ರ್ಯಾಲಿಗೆ ಚಕ್ರವರ್ತಿ ಸೂಲಿಬೆಲೆ ಚಾಲನೆ ನೀಡಿದರು. ನಗರದ ಶಕ್ತಿ ದೇವತೆ ದುಗ್ಗಮ್ಮಗೆ ವಿಶೇಷ ಪೂಜೆ ಸಲ್ಲಿಸಿ ಛತ್ರಪತಿ ಶಿವಾಜಿಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು. ಕೇಸರಿ ಧ್ವಜ ಕಟ್ಟುವ ವೇಳೆ ಮೃತಪಟ್ಟ ಪೃಥ್ವಿರಾಜ್ ಅವರಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ಬೈಕ್ ರ್ಯಾಲಿಗೆ ಚಾಲನೆ ದೊರೆಯಿತು.
ರಾಜ್ಯಾದ್ಯಂತ ಬೈಕ್ ರ್ಯಾಲಿ ನಡೆದಿದೆ, ನಾವು ಕೊನೇಯ ಹಂತದಲ್ಲಿದ್ದೇವೆ, ಮೂರುವರೆ ಸಾವಿರ ಕಿಲೋಮೀಟರ್ ಬೈಕ್ ರ್ಯಾಲಿ ಮಾಡಿದ್ದೇವೆ, ಕೋಲಾರದಿಂದ ಆರಂಭಿವಾಗಿದ್ದು ಬೆಂಗಳೂರಿನಲ್ಲಿ ಕೊನೆಗೊಳ್ಳಲಿದೆ. ನರೇಂದ್ರ ಮೋದಿಯವರನ್ನು ಮೂರನೇ ಬಾರಿ ಪ್ರಧಾನಿ ಮಾಡಬೇಕು ಎಂಬ ಉದ್ದೇಶದಿಂದ ಈ ರ್ಯಾಲಿ ಕೈಗೊಳ್ಳಲಾಗಿದೆ ಎಂದು ಸೂಲಿಬೆಲೆ ತಿಳಿಸಿದರು.
ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆ ಇಲ್ಲ: ಮಹಿಷಾ ದಸರಾ ಅಧ್ಯಕ್ಷರ ಸ್ಪಷ್ಟನೆ