ಆಟೋ - ಲಾರಿ ಮಧ್ಯೆ ಭೀಕರ ಅಪಘಾತ: 6 ಮಂದಿ ಮೃತ, 9 ಜನರ ಸ್ಥಿತಿ ಗಂಭೀರ - ಆಟೋಗೆ ಲಾರಿ ಡಿಕ್ಕಿ
🎬 Watch Now: Feature Video
ಆಂಧ್ರ ಪ್ರದೇಶ : ಪಲ್ನಾಡು ಜಿಲ್ಲೆಯಲ್ಲಿ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ದಾಚೇಪಲ್ಲಿ ಮಂಡಲ್‌ನ ಪೊಂಡುಗುಲಾ ಎಂಬಲ್ಲಿ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಆಟೋಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಆರು ಜನ ಸಾವನ್ನಪ್ಪಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಗಾಯಾಳುಗಳನ್ನು ಪಲ್ನಾಡು ಜಿಲ್ಲೆಯ ಗುರ್ಜಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ : ಸೇತುವೆಯಿಂದ ಬಿದ್ದ ಬಸ್.. 15 ಮಂದಿ ದುರ್ಮರಣ
ಘಟನಾ ಸ್ಥಳದಲ್ಲಿ ಐವರು ಮೃತಪಟ್ಟರೆ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಾಗ ಒಬ್ಬರು ಸಾವನ್ನಪ್ಪಿದ್ದಾರೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ 23 ಕಾರ್ಮಿಕರು ತೆಲಂಗಾಣದ ನಲ್ಗೊಂಡ ಜಿಲ್ಲೆಯ ದಾಮರಚೆರ್ಲಾ ಮಂಡಲದ ನರಸಪುರಂಗೆ ಸೇರಿದವರು ಎಂದು ತಿಳಿದುಬಂದಿದೆ. ಇವರೆಲ್ಲಾ ಗುರ್ಜಾಲ ಮಂಡಲದ ಪುಲಿಪಾಡುವಿಗೆ ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಆಂಧ್ರ ಪ್ರದೇಶದಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿರುವ 3ನೇ ಭೀಕರ ರಸ್ತೆ ಅಪಘಾತ ಇದಾಗಿದ್ದು 18ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ರಸ್ತೆ ಅಪಘಾತ: ಚಾಲಕನ ಮೊಬೈಲ್ ಮಾತು ಅವಘಡಕ್ಕೆ ಕಾರಣವಾಯಿತೇ?
ರಸ್ತೆಯಿಂದ ಕಂದಕಕ್ಕೆ ಜಾರಿ ಅರ್ಧಕ್ಕೆ ನಿಂತ ಬಸ್, ಕೂದಲೆಳೆ ಅಂತರದಲ್ಲಿ ಯಾತ್ರಿಕರು ಪಾರು : ವಿಡಿಯೋ