ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಅವಕಾಶ ಕೊಡಬೇಕಿತ್ತು ಮೂಜಗು ಶ್ರೀ
🎬 Watch Now: Feature Video
ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಅವಕಾಶ ಕೊಡಬೇಕಿತ್ತು. ಇನ್ನೂ ಮುಂದಾದರೂ ಅವರಿಗೆ ಸಚಿವ ಸ್ಥಾನ ಕೊಡಬೇಕು ಅನ್ನೋದು ಅವರ ಧರ್ಮ ಎಂದು ಮೂರು ಸಾವಿರ ಮಠದ ಗುರು ಸಿದ್ದರಾಜಯೋಗಿಂದ್ರ ಸ್ವಾಮೀಜಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಒಳ್ಳೆ ಅನುಭವಿ ರಾಜಕಾರಣಿಗಳು. ಸಜ್ಜನ, ಸಾತ್ವಿಕ ರಾಜಕಾರಣಿಗಳು, ಅವರಿಗೆ ಸಚಿವ ಸ್ಥಾನ ಕೊಡಬೇಕಿತ್ತು. ಅವರ ಅನುಭವ ಪಕ್ಷ ಬಳಸಿಕೊಳ್ಳಬೇಕು. ನಾನು ಅವರಿಗೆ ಸಚಿವ ಸ್ಥಾನ ಕೊಡಲು ಒತ್ತಾಯ ಮಾಡ್ತೀನಿ ಎಂದರು.
ಸಚಿವ ಸಂಪುಟದಲ್ಲಿ ಲಿಂಗಾಯತರನ್ನು ಕಡೆಗಣಿಸಿದ ಹಾಗೆ ಕಾಣಲ್ಲ. ಇನ್ನು ಅವಕಾಶ ಇದೆ, ಶೆಟ್ಟರ್ ಹಾಗೂ ಸವದಿಗೆ ಅವಕಾಶ ಮಾಡಿಕೊಡೋದು ಪಕ್ಷಕ್ಕೆ ಒಳ್ಳೆದು. ಶೆಟ್ಟರ್ ಹಾಗೂ ಸವದಿಗೆ ಮಂತ್ರಿ ಸ್ಥಾನ ಕೊಟ್ಟರೆ ಕಾಂಗ್ರೆಸ್ಗೆ ಒಳ್ಳೆದು. ಕಾಂಗ್ರೆಸ್ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡೇ ಮಾಡುತ್ತೆ. ಅದಕ್ಕೆ ಅದರದೇ ಆದ ನೀತಿ ಇರುತ್ತೆ ಅದನ್ನು ಜಾರಿಗೆ ತರಬಹುದು. ತರದೇ ಇರೋಕೆ ಸಾಧ್ಯ ಇಲ್ಲ ಎಂದರು.
ಕಲಘಟಗಿ ಶಾಸಕ ಸಂತೋಷ್ ಲಾಡ್‌ಗೆ ಸಚಿವ ಸ್ಥಾನ ಸಿಕ್ಕ ಹಿನ್ನೆಲೆಯಲ್ಲಿ ಸಂತೋಷ ಲಾಡ್ ಅಭಿಮಾನಿಗಳ ಬಳಗದಿಂದ ವಿಜಯೋತ್ಸವ ಆಚರಣೆ ಮಾಡಲಾಯಿತು. ನಗರದ ಚೆನ್ನಮ್ಮ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದ ಅಭಿಮಾನಿಗಳು, ಸಂತೋಷ್ ಲಾಡ್ ಪರ ಘೋಷಣೆ ಕೂಗಿ ಪಟಾಕಿ ಸಿಡಿಸಿ, ಸಹಿ ಹಂಚಿದರು. ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ದೊರೆತ ಹಿನ್ನಲೆಯಲ್ಲಿ, ಹುಬ್ಬಳ್ಳಿಯ ಗದಗ ರಸ್ತೆಯ ಅಂಬೇಡ್ಕರ್ ಪ್ರತಿಮೆ ಬಳಿ, ಕಾಂಗ್ರೆಸ್ನ ಮಹಿಳಾ ಕಾರ್ಯಕರ್ತರು ಪರಸ್ಪರ ಬಣ್ಣ ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಇದನ್ನೂ ಓದಿ: ಸಿದ್ದು ಸಂಪುಟದ ಖಾತೆ ಹಂಚಿಕೆ: ಪರಮೇಶ್ವರ್ಗೆ ಗೃಹ, ಡಿಕೆಶಿಗೆ ಜಲ, ಜಾರ್ಜ್ಗೆ ಇಂಧನ... ಖರ್ಗೆಗೆ ಯಾವ ಖಾತೆ?