ಸಮ್ಮೆದ್ ಶಿಖರ್ಜಿ ಪ್ರದೇಶ ಪ್ರವಾಸಿತಾಣಕ್ಕೆ ಜೈನ್ ಸಮಾಜ ವಿರೋಧ: ಪ್ರತಿಭಟನೆ - ಶಿವಮೊಗ್ಗದಲ್ಲಿ ಜೈನ ಸಮುದಾಯ ಪ್ರತಿಭಟನೆ
🎬 Watch Now: Feature Video
ಶಿವಮೊಗ್ಗ: ಜೈನ್ ಸಮಾಜದ ಪವಿತ್ರ ಕ್ಷೇತ್ರವಾದ ಜಾರ್ಖಂಡ್ ರಾಜ್ಯದ ಗಿರಡಿ ಜೆಲ್ಲೆಯ ಸಮ್ಮೆದ್ ಶಿಖರ್ಜಿ ಕ್ಷೇತ್ರವನ್ನು ಪ್ರವಾಸಿ ತಾಣವಾಗಿ ಅಲ್ಲಿಯ ಸರ್ಕಾರ ಘೋಷಣೆ ಮಾಡಿರುವುದನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾ ಜೈನ ಸಮಾಜ ಬೃಹತ್ ಪ್ರತಿಭಟನೆ ನಡೆಸಿದೆ. ಜೈನರ 20 ತೀರ್ಥಂಕರರು ತಪಸ್ಸು ಮಾಡಿ ನೆಲೆಸಿರುವ ತಾಣವನ್ನು ಪ್ರವಾಸಿ ತಾಣವನ್ನಾಗಿ ಘೋಷಿಸಿದೆ. ಈ ರೀತಿಯ ಬೆಳವಣಿಗೆಯಿಂದ ನಮ್ಮ ತಾಣದ ಪಾವಿತ್ರತ್ಯೆಗೆ ಧಕ್ಕೆ ಉಂಟಾಗುತ್ತದೆ. ಆದರಿಂದ ಕೇಂದ್ರ ಮತ್ತು ಜಾರ್ಖಂಡ್ ಸರ್ಕಾರ ಈ ತಾಣವನ್ನು ಜೈನ್ ಸಮಾಜದ ಪವಿತ್ರ ಕ್ಷೇತ್ರ ಎಂದು ಘೋಷಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
Last Updated : Feb 3, 2023, 8:36 PM IST