15 ಕೆಜಿ ಸುಧಾರಿತ ಸ್ಫೋಟಕ ಪತ್ತೆ; ಸಂಭಾವ್ಯ ದುರಂತ ತಪ್ಪಿಸಿದ ಭದ್ರತಾ ಪಡೆ - ಈಟಿವಿ ಭಾರತ ಕನ್ನಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17322080-thumbnail-3x2-tha.jpg)
ಉಧಮ್‌ಪುರ (ಜಮ್ಮು ಮತ್ತು ಕಾಶ್ಮೀರ): ಉಧಮ್‌ಪುರ ಜಿಲ್ಲೆಯ ಬಸಂತಗಢ ತಹಸಿಲ್‌ನಲ್ಲಿ ಸುಮಾರು 15 ಕೆಜಿ ತೂಕದ ಐಇಡಿಯನ್ನು(ಸುಧಾರಿತ ಸ್ಫೋಟಕ ವಸ್ತು) ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಪಡಿಸಿಕೊಂಡು ನಾಶಪಡಿಸಿದ್ದಾರೆ. ಬಸಂತಗಢ ತಹಸಿಲ್ ಕೇಂದ್ರ ಕಚೇರಿಯಿಂದ 20 ಕಿ.ಮೀ ದೂರದ ಅರಣ್ಯ ಪ್ರದೇಶದಲ್ಲಿ ಇದು ಪತ್ತೆಯಾಗಿದೆ. ಸ್ಫೋಟಕ ಈಗಿನದ್ದೋ ಅಥವಾ ಹಳೆಯದ್ದೋ ಎಂಬುದು ತಿಳಿದುಬಂದಿಲ್ಲ. ಭದ್ರತಾ ಪಡೆಗಳು ಸಂಭಾವ್ಯ ದುರಂತವನ್ನು ತಪ್ಪಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Last Updated : Feb 3, 2023, 8:37 PM IST