ಪದ್ಮನಾಭ ನಗರದಲ್ಲಿ ಮತಗಟ್ಟೆ ಎದುರೇ ಮಾರಾಮಾರಿ.. ಕೈ ಕಾರ್ಯಕರ್ತರ ಮೇಲೆ ಪುಂಡರ ಗ್ಯಾಂಗ್ನಿಂದ ಹಲ್ಲೆ - ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪುಂಡರ ಗ್ಯಾಂಗ್ನಿಂದ ಹಲ್ಲೆ
🎬 Watch Now: Feature Video
ಬೆಂಗಳೂರು: ರಾಜ್ಯದ ವಿಧಾನಸಭಾ ಚುನಾವಣೆಗೆ 224 ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನವಾಗುತ್ತದೆ. ಆದರೆ ಪದ್ಮನಾಭನಗರ ಕ್ಷೇತ್ರದಲ್ಲಿ ಮತಗಟ್ಟೆ ಎದುರೇ ಮಾರಾಮಾರಿ ನಡೆದಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಪದ್ಮನಾಭನಗರ ಕ್ಷೇತ್ರದ ಪಾಪಯ್ಯ ಗಾರ್ಡನ್ 28, 29 ಬೂತ್ ಬಳಿ ಈ ಘಟನೆ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಲಾಗಿದೆ. ಸುಮಾರು 30 ಮಂದಿ ಯುವಕರು ಏಕಾಏಕಿ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದು, ಗಾಂಜಾ ನಶೆಯಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಿಳೆಯರ ಮೇಲೂ ಪುಂಡರ ಗ್ಯಾಂಗ್ ಹಲ್ಲೆ ನಡೆಸಿದೆ. ಮಹಾನಗರ ಪಾಲಿಕೆ ಮಾಜಿ ಸದಸ್ಯೆಯೊಬ್ಬರ ಪತಿ ಕಡೆಯ ಹುಡುಗರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಮೀನಮ್ಮ ಮತ್ತು ಚನ್ನಪ್ಪ ಎಂಬುವರು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಪಡೆದ ಪೊಲೀಸರು, ಹಲ್ಲೆ ನಡೆಸಿದ ವಿಡಿಯೋ ಫುಟೇಜ್ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ನಿನ್ನೆ ಮಧ್ಯರಾತ್ರಿವರೆಗೂ ಸಿಡಿ ಬಿಡ್ತಿನಿ ಅಂತಾ ಡಿಕೆಶಿ ಬ್ಲ್ಯಾಕ್ಮೇಲ್ ಮಾಡ್ತಿದ್ರು: ರಮೇಶ ಜಾರಕಿಹೊಳಿ ಆರೋಪ