ಹಾವೇರಿ: ಮಾಜಿ ಶಾಸಕ ಮನೋಹರ ತಹಶೀಲ್ದಾರ್ ಮನೆ ಮೇಲೆ ಎಫ್‌ಎಸ್‌ಟಿ ದಾಳಿ - former mla manohar tahsildar
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-18189951-thumbnail-16x9-lek.jpg)
ಹಾವೇರಿ: ಇತ್ತೀಚೆಗೆ ಜೆಡಿಎಸ್ ಸೇರ್ಪಡೆಯಾದ ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಮಾಜಿ ಶಾಸಕ ಮನೋಹರ ತಹಶೀಲ್ದಾರ್ ನಿವಾಸದ ಮೇಲೆ ಫ್ಲೈಯಿಂಗ್ ಸರ್ವೆಲೆನ್ಸ್ ತಂಡ (ಎಫ್‌ಎಸ್‌ಟಿ) ದಾಳಿ ನಡೆಸಿದೆ. ಮತದಾರರಿಗೆ ನೀಡಲು ಹಣ ಮತ್ತು ಸೀರೆ ತಂದಿದ್ದಾರೆ ಎನ್ನುವ ಮಾಹಿತಿ ಕೇಳಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದರು.
ಮನೆಯ ಮೂಲೆ ಮೂಲೆ ಜಾಲಾಡಿದರೂ ಸಹ ಕಣ್ಗಾವಲು ತಂಡದ ಅಧಿಕಾರಿಗಳಿಗೆ ಯಾವುದೇ ಆಮಿಷ ಒಡ್ಡುವ ವಸ್ತುಗಳು ದೊರೆಯಲಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಖಾಲಿ ಕೈಯಲ್ಲಿ ವಾಪಸ್ ಆಗಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಾಜಿ ಸಚಿವ ಮನೋಹರ್ ತಹಶೀಲ್ದಾರ್, " ಗುಂಡಪಲ್ಲಿ ಎಂಬುವರ ನೇತೃತ್ವದಲ್ಲಿ ನಮ್ಮ ಮನೆ ಮೇಲೆ ಎಫ್‌ಎಸ್‌ಟಿ ತಂಡ ದಾಳಿ ನಡೆಸಿ ತಪಾಸಣೆ ನಡೆಸಿತು. ಆದರೆ, ಯಾವುದೆ ಹಣ, ಸೀರೆ ಸಿಗದೇ ಅಧಿಕಾರಿಗಳು ವಾಪಸ್ ಆಗಿದ್ದಾರೆ. ಬೇರೆ ಪಕ್ಷದವರು ಮಾಹಿತಿ ನೀಡಿರಬೇಕು, ಅದಕ್ಕೆ ದಾಳಿ ನಡೆಸಿದೆ. ಪ್ರಚಾರ ಸಾಮಗ್ರಿಗಳನ್ನು ಬಿಟ್ಟರೆ ಬೇರೆ ಏನೋ ಸಿಕ್ಕಿಲ್ಲ. ಹಾಗಾಗಿ, ಅಧಿಕಾರಿಗಳು ಸಾರಿ ಹೇಳಿ ಹೋದರು" ಎಂದಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ತೊರೆದ ಮಾಜಿ ಸಚಿವ ಮನೋಹರ ತಹಶೀಲ್ದಾರ್ : ಏ.7ಕ್ಕೆ ಜೆಡಿಎಸ್ಗೆ ಸೇರ್ಪಡೆ