ಕೇರಳದ ಸೆಕ್ರೆಟರಿಯೇಟ್‌ನಲ್ಲಿ ಅಗ್ನಿ ಅವಘಡ: ಸ್ಥಳದಲ್ಲಿ ಬಿಗಿ ಭದ್ರತೆ - ತಿರುವನಂತಪುರಂ ಅಗ್ನಿ ಅವಘಡ

🎬 Watch Now: Feature Video

thumbnail

By

Published : May 9, 2023, 2:10 PM IST

ತಿರುವನಂತಪುರಂ(ಕೇರಳ): ತಿರುವನಂತಪುರಂನಲ್ಲಿರುವ ಕೇರಳದ ಆಡಳಿತ ಕೇಂದ್ರವಾದ ಸೆಕ್ರೆಟರಿಯೇಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಇಂದು ಬೆಳಗ್ಗೆ 7:55ರ ಸುಮಾರಿಗೆ ನಾರ್ತ್ ಸ್ಯಾಂಡ್‌ವಿಚ್ ಬ್ಲಾಕ್‌ನ 3ನೇ ಮಹಡಿಯಲ್ಲಿರುವ ಕೈಗಾರಿಕಾ ಸಚಿವ ಪಿ. ರಾಜೀವ್ ಅವರ ಕಚೇರಿಯ ಪಕ್ಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬೆಳಗ್ಗೆ ಕಟ್ಟಡದಿಂದ ಹೊಗೆ ಏಳುತ್ತಿರುವುದನ್ನು ಕಂಡ ಭದ್ರತಾ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. 8.15ರ ಸುಮಾರಿಗೆ ಸಚಿವಾಲಯಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಎರಡು ಘಟಕಗಳು ಬೆಂಕಿಯನ್ನು ಹತೋಟಿಗೆ ತಂದಿವೆ. ಅವಘಡದಲ್ಲಿ ಕಚೇರಿಯ ಮೇಲ್ಛಾವಣಿ ಮತ್ತು ಪರದೆ ಸುಟ್ಟು ಭಸ್ಮವಾಗಿದೆ. ಕಡತಗಳು ಸುಟ್ಟು ಹೋಗಿಲ್ಲ. ಆದರೆ ಬೆಂಕಿ ನಂದಿಸುವ ಯತ್ನದಲ್ಲಿ ಕಡತಗಳು ಒದ್ದೆಯಾಗಿವೆ ಎಂದು ವರದಿಯಾಗಿದೆ. 

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ಮೂಲಗಳಿಂದ ಮಾಹಿತಿ ಬಂದಿದೆ. ನಾರ್ತ್ ಸ್ಯಾಂಡ್‌ವಿಚ್ ಬ್ಲಾಕ್‌ನಲ್ಲಿ ಪ್ರಸ್ತುತ ವಿದ್ಯುತ್ ಸ್ಥಗಿತಗೊಂಡಿದೆ. ಕಂಟೋನ್ಮೆಂಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಜೆರೊಮಿಕ್ ಜಾರ್ಜ್ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ್ದರು. ಅಗ್ನಿ ಅವಘಡದ ಹಿನ್ನೆಲೆಯಲ್ಲಿ ಸಚಿವಾಲಯಕ್ಕೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಎಲ್ಲಾ ಗೇಟ್‌ಗಳಲ್ಲಿ ಭದ್ರತಾ ಕಾರ್ಯಕ್ಕಾಗಿ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ. ಸಿಬ್ಬಂದಿ ಸೇರಿದಂತೆ ಕಟ್ಟುನಿಟ್ಟಿನ ತಪಾಸಣೆಗೆ ಒಳಗಾದ ನಂತರವೇ ಉದ್ಯೋಗಿಗಳಿಗೆ ಸೆಕ್ರೆಟರಿಯೇಟ್‌ಗೆ ಪ್ರವೇಶ ನೀಡಲಾಗುತ್ತಿದೆ. ಮಾಧ್ಯಮಗಳಿಗೂ ಪ್ರವೇಶ ನಿರಾಕರಿಸಲಾಗಿದೆ.

ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿನ ಎಟಿಎಂಗೆ ಬೆಂಕಿ... ಕ್ಷಣಾರ್ಧದಲ್ಲಿ ಸುಟ್ಟು ಕರಕಲು - VIDEO

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.