ಗೋಪಿನಾಥಂನಲ್ಲಿ ಭಕ್ತಿ ಪರಾಕಾಷ್ಠೆ: ಬೆನ್ನಿಗೆ ಸರಳು ಚುಚ್ಚಿಕೊಂಡು ಗಿರಗಿಟ್ಲೆ, ಬಾಯಿಗೆ ಬೀಗ ಹಾಕಿಕೊಂಡು ಹರಕೆ ತೀರಿಸಿದ ಭಕ್ತರು!

By ETV Bharat Karnataka Team

Published : Aug 31, 2023, 1:25 PM IST

thumbnail

ಚಾಮರಾಜನಗರ: ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ಮಾರಿಹಬ್ಬ ನಡೆದಿದೆ. ಹತ್ತಾರು ಭಕ್ತರು ಸರಳು ಚುಚ್ಚಿಕೊಂಡು ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ. ಹಲವರು ಬಾಯಿಗೆ ಬೀಗ ಹಾಕಿಕೊಂಡು ಹರಕೆ ತೀರಿಸಿದರೇ ಯುವಕನೋರ್ವ ಬೆನ್ನಿಗೆ ಸರಳು ಚುಚ್ಚಿಕೊಂಡು ನೇತಾಡಿ ಗಿರಗಿಟ್ಲೆಯಂತೆ ಸುತ್ತಿ ಸೇರಿದ್ದ ಭಕ್ತರ ಮೈನವಿರೇಳುವಂತೆ ಮಾಡಿದ್ದಾನೆ.

ಬಾಯಿಗೆ ಬೀಗ ಹಾಕಿಕೊಂಡು ಹರಕೆ ತೀರಿಸಿದ ಭಕ್ತರು: ಅರಣ್ಯಾಧಿಕಾರಿ ಪಿ. ಶ್ರೀನಿವಾಸ್ ಕಟ್ಟಿಸಿದ ದೇಗುಲ ಇದಾಗಿದ್ದು, ಇಲ್ಲಿ ಪ್ರತಿವರ್ಷ ಮಾರಿಹಬ್ಬ ನಡೆಯುತ್ತದೆ. ಈ ಬಾರಿಯೂ ಹೆಚ್ಚು ಜನರು ತಮ್ಮ ಬಾಯಿಗೆ ಬೀಗ ಹಾಕಿಕೊಂಡು ಹರಕೆ ತೀರಿಸಿದ್ದಾರೆ. ವೀರಪ್ಪನ್​ನ ಊರಾದ ಗೋಪೀನಾಥಂನಲ್ಲಿ ಕಾಡುಗಳ್ಳನ ನೆನಪು ನೇಪಥ್ಯಕ್ಕೆ ಸರಿಯುತ್ತಿದ್ದರೇ ಅರಣ್ಯಾಧಿಕಾರಿ ಪಿ‌. ಶ್ರೀನಿವಾಸ್ ಅವರ ಸೇವಾ ಕಾರ್ಯವು ವರ್ಷದಿಂದ ವರ್ಷಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದೆ. ಮಾರಿಯಮ್ಮ ಹಬ್ಬದ ಆಹ್ವಾನ ಪತ್ರಿಕೆಯಲ್ಲೂ ಶ್ರೀನಿವಾಸ್ ಅವರ ಫೋಟೋವನ್ನು ಗ್ರಾಮಸ್ಥರು ಅಚ್ಚು ಹಾಕಿಸುತ್ತಾರೆ.

ಇದನ್ನೂ ಓದಿ: Raksha Bandhan 2023: ಶಾಲಾ ಮಕ್ಕಳೊಂದಿಗೆ ರಕ್ಷಾ ಬಂಧನ ಆಚರಿಸಿದ ಪ್ರಧಾನಿ ಮೋದಿ

ರಾಹುಲ್ ಗಾಂಧಿಗೆ ಚಾಮುಂಡೇಶ್ವರಿ ವಿಗ್ರಹ, ರಾಖಿ, ಗೌರಿ ಗಣೇಶ ಹಬ್ಬದ ಬಾಗಿನ ನೀಡಿ ಸ್ವಾಗತಿಸಿದ ಕೆಪಿಸಿಸಿ ಮಹಿಳಾ ಘಟಕ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.