ನಿಮ್ಮ ಅಮುಲ್ಯವಾದ ಮತವನ್ನು ಮಾರಿಕೊಳ್ಳಬೇಡಿ: ಸೆಲೆಬ್ರಿಟಿಗಳ ಮನವಿ - ಕರ್ನಾಟಕ ವಿಧಾನಸಭೆ
🎬 Watch Now: Feature Video
ಬೆಂಗಳೂರು: ಮೇ. 10ರಂದು ಕರ್ನಾಟಕ ವಿಧಾನಸಭೆಗೆ ಮತದಾನ ನಡೆಯಲಿದ್ದು, ಮತದಾನ ಮಾಡುವಂತೆ ಸೆಲೆಬ್ರಿಟಿಗಳು ಮತದಾರರಲ್ಲಿ ಮನವಿ ಮಾಡಿದ್ದಾರೆ. 'ಈಟಿವಿ ಭಾರತ'ದ ಜೊತೆ ಮಾತನಾಡಿದ ನಟರಾದ ಸತೀಶ್ ಮನವಿ ಹಾಗೂ ಚೇತನ್ ಚಂದ್ರ ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ.
ನೀನಾಸಂ ಸತೀಶ್: ನನ್ನದೊಂದು ಮತದಿಂದ ಏನಾಗುತ್ತದೆ ಎಂದು ಯಾರು ಕೂಡ ನಿಷ್ಕಾಳಜಿ ಮಾಡಬೇಡಿ. ಪ್ರಶ್ನೆ ಮಾಡುವ ಹಕ್ಕು ನಮ್ಮಲ್ಲಿ ಉಳಿದುಕೊಳ್ಳಬೇಕು ಎಂದರೆ ತಪ್ಪದೇ ಕಡ್ಡಾಯವಾಗಿ ಮತದಾನ ಮಾಡಬೇಕು. ನಾವು - ನೀವೆಲ್ಲರೂ ಮತದಾನ ಮಾಡಬೇಕು. ಜಾತಿ, ಜನಾಂಗ, ಧರ್ಮ, ಭಾಷೆಯನ್ನು ಮೀರಿ ಓರ್ವ ಉತ್ತಮ ನಾಯಕನನ್ನು ನೋಡಿ ವೋಟ್ ಮಾಡೋಣ. ಈ ಮೂಲಕ ನಮ್ಮ ನಾಯಕನನ್ನು ಆರಿಸೋಣ. ನಾನು ಕೂಡ ವೋಟ್ ಮಾಡುವೆ, ನೀವು ಕೂಡ ತಪ್ಪದೇ ವೋಟ್ ಮಾಡಿ ಎಂದು ನೀನಾಸಂ ಸತೀಶ್ ಮನವಿ ಮಾಡಿದ್ದಾರೆ.
ಚೇತನ್ ಚಂದ್ರ: ವಿಧಾನಸಭಾ ಚುನಾವಣೆ ಬಂದಿದೆ. ನಮ್ಮ ಕಷ್ಟಗಳನ್ನು ಆಲಿಸುವ ವ್ಯಕ್ತಿಯನ್ನು ಆರಿಸುವ ಸುದಿನ ಇದು. ಡೆಲ್ಲಿಯಿಂದ ಹಳ್ಳಿವರೆಗೂ ಪ್ರತಿಯೊಂದು ಊರು - ಕೇರಿ ಅಭಿವೃದ್ಧಿಯಾಗಬೇಕು. ಯಾವ ಆಮಿಷಕ್ಕೆ ಒಳಗಾಗದೇ, ಯಾರದೋ ಮಾತನ್ನು ಕೇಳಿ ನಿಮ್ಮ ಅಮುಲ್ಯವಾದ ಮತವನ್ನು ಮಾರಿಕೊಳ್ಳಬೇಡಿ. ಮತದಾನ ಅನ್ನೋದು ನಮ್ಮ ಮನೆಯ ಹೆಣ್ಣು ಮಕ್ಕಳಿಗಿಂತಲೂ ಶ್ರೇಷ್ಠ. ನನಗೇಕೆ ಬೇಕು ಎಂಬ ನಿರ್ಲಕ್ಷೇತನ ಬಿಟ್ಟು, ಆಲೋಚನೆ ಮಾಡಿ ಒಳ್ಳೆಯ ನಾಯಕನನ್ನು ಆರಿಸಿ ಎಂದು ನಟ ಚೇತನ್ ಚಂದ್ರ ಮನವಿ ಮಾಡಿದ್ದಾರೆ.