ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಟಿ ಜಾಹ್ನವಿ ಕಪೂರ್ - Sri Venkateswara Swami Temple in Tirumala
🎬 Watch Now: Feature Video
Published : Aug 28, 2023, 11:34 AM IST
ತಿರುಪತಿ( ಆಂಧ್ರಪ್ರದೇಶ) : ಬಾಲಿವುಡ್ ನಟಿ ಜಾಹ್ನವಿ ಕಪೂರ್ ಪ್ರಸ್ತುತ ಹೈದರಾಬಾದ್‌ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಜೂನಿಯರ್ ಎನ್‌ಟಿಆರ್ ಮತ್ತು ಸೈಫ್ ಅಲಿ ಖಾನ್ ಸಹ ನಟರಾಗಿ ಕಾಣಿಸಿಕೊಂಡಿರುವ 'ದೇವರ' (Devara) ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಶೂಟಿಂಗ್ ಮಧ್ಯೆಯೇ ಬಿಡುವು ಮಾಡಿಕೊಂಡ ಜಾಹ್ನವಿ, ಸೋಮವಾರ (ಇಂದು) ಬೆಳಗ್ಗೆ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಆಂಧ್ರಪ್ರದೇಶದ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ದೇಶದ ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಒಂದಾಗಿದೆ. ಜಾಹ್ನವಿ ಮಾತ್ರವಲ್ಲದೇ ಆಕೆಯ ತಾಯಿ ಶ್ರೀದೇವಿ ಕೂಡ ವೆಂಕಟೇಶ್ವರನ ಕಟ್ಟಾ ಭಕ್ತರಾಗಿದ್ದಾರೆ.
ಜಾಹ್ನವಿ ಕಪೂರ್ ಸ್ವಾಗತಿಸಿದ ಟಿಟಿಡಿ ದೇವಸ್ಥಾನದ ಅಧಿಕಾರಿಗಳು : ಇಂದು ಬೆಳಗ್ಗೆ ಸಾಂಪ್ರದಾಯಿಕ ಲ್ಯಾವೆಂಡರ್ ಸೀರೆಯನ್ನು ಧರಿಸಿ, ಮೇಕ್ಅಪ್ ಇಲ್ಲದೇ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ನಟಿ ಜಾಹ್ನವಿ ಅವರನ್ನ ಟಿಟಿಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ಸ್ವಾಗತಿಸಿದರು. ದೇವಾಲಯದಲ್ಲಿ ಆಶೀರ್ವಾದ ಪಡೆದ ನಂತರ ಶೀಘ್ರವಾಗಿ ನಿರ್ಗಮಿಸಿದರು.
ಇದನ್ನೂ ಓದಿ : ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಬಾಲಿವುಡ್ ನಟಿ ಜಾಹ್ನವಿ ಕಪೂರ್