ಗ್ರಾಮದೇವತೆ ಜಾತ್ರೆಯಲ್ಲಿ ಡ್ಯಾನ್ಸ್​ ರಾಜಾ ಡ್ಯಾನ್ಸ್..​ ವಿನೋದ ರಾಜ್​ ಭರ್ಜರಿ ಸ್ಟೆಪ್ಸ್​ - ನಟ ವಿನೋದ್ ರಾಜ್ ಡ್ಯಾನ್ಸ್

🎬 Watch Now: Feature Video

thumbnail

By

Published : Apr 12, 2023, 11:38 AM IST

ನೆಲಮಂಗಲ: ಗ್ರಾಮದೇವತೆ ಜಾತ್ರೆಯಲ್ಲಿ ತಮಟೆ ಸೌಂಡಿಗೆ ಡ್ಯಾನ್ಸ್ ರಾಜಾ ಡ್ಯಾನ್ಸ್​ ನಟ ವಿನೋದ್ ರಾಜ್ ನೃತ್ಯ ಮಾಡಿದ್ದಾರೆ, ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್ ಆಗಿದೆ. ನೆಲಮಂಗಲ ತಾಲೂಕಿನ ಸೊಲದೇವನಹಳ್ಳಿಯ ತೋಟದ ಮನೆಯಲ್ಲಿ ನಟ ವಿನೋದ್ ರಾಜ್ ಅವರು ತಾಯಿ ಲೀಲಾವತಿ ಜೊತೆ ವಾಸವಾಗಿದ್ದಾರೆ. ಗ್ರಾಮದಲ್ಲಿ ಜಾತ್ರೆ ನಡೆಯುತ್ತಿದ್ದು, ದೇವರಿಗೆ ಆರತಿಯನ್ನು ಹೊತ್ತು ತಮಟೆ ವಾದ್ಯದೊಂದಿಗೆ ಮಹಿಳೆಯರು ರಸ್ತೆ ಮೇಲೆ ಬರುತ್ತಿದ್ದರು. ಈ ವೇಳೆ ಕಾರಿನಲ್ಲಿ ಚಲಿಸುತ್ತಿದ್ದ ನಟ ವಿನೋದ್​ ರಾಜ್​ ತಮಟೆ ಸದ್ದು ಕೇಳಿದ ತಕ್ಷಣ ಕಾರನ್ನು ಅಲ್ಲೇ ನಿಲ್ಲಿಸಿ ಕೆಳಗಿಳಿದು ಹೆಜ್ಜೆ ಹಾಕಿದ್ದಾರೆ. ನೆರೆದಿದ್ದ ಜನರು ವಿನೋದ್​ ರಾಜ್​ರ ಡ್ಯಾನ್ಸ್​ಗೆ ಫಿದಾ ಆಗಿದ್ದಾರೆ. ಸ್ಥಳೀಯರೊಬ್ಬರು ಅವರ ನೃತ್ಯದ ವಿಡಿಯೋವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಡ್ಯಾನ್ಸ್ ರಾಜ ಎಂದೇ ಪ್ರಸಿದ್ಧರಾಗಿರುವ ವಿನೋದ್​ ರಾಜ್​ ಅವರು ರಸ್ತೆಯಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.  

ಇದನ್ನೂ ಓದಿ: 'ಕಾಂಗ್ರೆಸ್​​ ಗೆಲ್ಲಬೇಕು, ಧ್ರುವನಾರಾಯಣ್​ ಆತ್ಮಕ್ಕೆ ಶಾಂತಿ ಸಿಗಬೇಕು': ದರ್ಶನ್​ಗೆ ಎಸ್​. ನಾರಾಯಣ್ ಬೆಂಬಲ  

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.