ಹಲವು ತಿಂಗಳ ನಂತರ ಕಾಣಿಸಿಕೊಂಡ ಬ್ಲ್ಯಾಕ್ ಪ್ಯಾಂಥರ್: ಪ್ರವಾಸಿಗರು ದಿಲ್ ಖುಷ್
🎬 Watch Now: Feature Video
ಮೈಸೂರು: ನಾಗರಹೊಳೆಯ ರಾಷ್ಟ್ರೀಯ ಉದ್ಯಾನವನದ ಪ್ರಮುಖ ಆಕರ್ಷಣೆಯಾದ ಬ್ಲ್ಯಾಕ್ ಪ್ಯಾಂಥರ್ (ಕಪ್ಪು ಚಿರತೆ) ಹಲವು ತಿಂಗಳ ಬಳಿಕ ಮತ್ತೆ ಕಾಣಿಸಿಕೊಂಡಿದೆ. ನಾಗರಹೊಳೆಯ ರಾಷ್ಟ್ರೀಯ ಉದ್ಯಾನದ ದಮ್ಮನಕಟ್ಟೆ ಸಫಾರಿ ಕೇಂದ್ರದಿಂದ ಸಫಾರಿಗೆ ಹೋದ ಪ್ರವಾಸಿಗರು ಕಪ್ಪು ಚಿರತೆ ಕಂಡು ಖುಷಿಯಾಗಿದ್ದಾರೆ. ಹಲವು ತಿಂಗಳಿನಿಂದ ಸಫಾರಿಗೆ ಹೋಗುತ್ತಿದ್ದ ಪ್ರವಾಸಿಗರಿಗೆ ಕಪ್ಪು ಚಿರತೆ ಕಾಣಿಸಿಕೊಂಡಿರಲಿಲ್ಲ. ಮಂಗಳವಾರ ಕಪ್ಪು ಚಿರತೆ ಕಾಣಿಸಿಕೊಂಡಿದೆ. ಆದರೆ, ಚಿರತೆ ಮೈ ಮೇಲೆ ಗಾಯಗಳಾಗಿರುವುದು ಕಂಡು ಬೇಸರಗೊಂಡಿದ್ದಾರೆ.
ಕಾದಾಟದಲ್ಲಿ ಗಾಯಗೊಂಡ ಹುಲಿಗೆ ಅರಣ್ಯದಲ್ಲೆ ಚಿಕಿತ್ಸೆ: ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದಲ್ಲಿ ಕೆಲ ದಿನಗಳ ಹಿಂದೆ ಕಾದಾಟದಲ್ಲಿ ಗಾಯಗೊಂಡಿದ್ದ ಹೆಣ್ಣು ಹುಲಿಯನ್ನು ಸೆರೆ ಹಿಡಿದು ಕಾಡಿನಲ್ಲಿಯೇ ಚಿಕಿತ್ಸೆ ನೀಡಿ ಮರಳಿ ಕಾಡಿಗೆ ಬಿಡಲಾಗಿತ್ತು.
ಹೆಚ್.ಡಿ.ಕೋಟೆ ತಾಲ್ಲೂಕಿನ ನಾಗರಹೊಳೆ ವ್ಯಾಪ್ತಿಯ ಡಿ.ಬಿ.ಕುಪ್ಪೆ ವಲಯದಲ್ಲಿ ಕಳೆದ ಕೆಲವು ದಿನಗಳಿಂದ ಕುಂಟುತ್ತಾ ಓಡಾಡುತ್ತಿದ್ದ ಹೆಣ್ಣು ಹುಲಿಯೊಂದನ್ನು ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಗಮನಿಸಿದ್ದರು. ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ ಈ ಹುಲಿಯು ಮತ್ತೆ ಟೂರಿಸಂ ವಲಯದಲ್ಲಿ ಕಾಣಿಸಿಕೊಂಡಿದ್ದು, ಮುಂಗಾಲಿಗೆ ಗಾಯವಾಗಿ ನಡೆಯಲಾಗದೇ ಪರದಾಡುತ್ತಿದ್ದುದು ಗೊತ್ತಾಗಿತ್ತು.
ಗಾಯಗೊಂಡಿದ್ದ ಹುಲಿಯನ್ನು ಸಾಕಾನೆ ಅರ್ಜುನನ ನೇತೃತ್ವದಲ್ಲಿ ಪಶುವೈದ್ಯರ ಸಹಾಯದಿಂದ ಅರಿವಳಿಕೆ ನೀಡಿ ಹುಲಿಯನ್ನು ಸೆರೆ ಹಿಡಿದು ಸೂಕ್ತ ಚಿಕಿತ್ಸೆ ನೀಡಲಾಗಿತ್ತು.
ಇದನ್ನೂ ಓದಿ: ಹುಲಿ - ಕರಡಿ ನಡುವೆ ಕಾದಾಟ: ಪ್ರವಾಸಿಗರ ಮೊಬೈಲ್ನಲ್ಲಿ ರೋಚಕ ದೃಶ್ಯ ಸೆರೆ