ಹಳಿ ತಪ್ಪಿ ಹೊತ್ತಿ ಉರಿದ ರೈಲಿನ ಬೋಗಿಗಳು... ಆಗಸದಲ್ಲಿ ಮೂಡಿದ ಕಗ್ಗತ್ತಲು! - ಹೊತ್ತಿ ಉರಿದ ರೈಲಿನ ಬೋಗಿಗಳು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4414569-727-4414569-1568270721780.jpg)
ಅಮೆರಿಕದ ಇಲಿನಾಯಸ್ದ ಸೇಂಟ್ ಲೂಯಿಸ್ನಲ್ಲಿ ಮಂಗಳವಾರ ರೈಲೊಂದು ಹಳಿ ತಪ್ಪಿದ್ದು, ಭಾರೀ ನಷ್ಟ ಸಂಭವಿಸಿದೆ. ಆಯಿಲ್ ತುಂಬಿದ ರೈಲಿನ ಬೋಗಿಗಳು ಹೊತ್ತಿ ಉರಿದಿವೆ. ರೈಲಿನ ಆಯಿಲ್ ಬೋಗಿಗಳಿಗೆ ಬೆಂಕಿ ತಗುಲಿದ್ದು, ದಟ್ಟವಾದ ಹೊಗೆಯಿಂದ ಆಗಸದಲ್ಲಿ ಕಾರ್ಗತ್ತಲು ಆವರಿಸಿತ್ತು. ಮುನ್ನೆಚ್ಚರಿಕೆ ಕ್ರಮ ಹಿನ್ನೆಲೆ ಪೊಲೀಸರು ಅಪಘಾತದ ಬಳಿಯಿದ್ದ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಿದ್ದಾರೆ. ಈ ಘಟನೆ ಬಗ್ಗೆ ರೈಲ್ವೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.