ಇದು ಕ್ಯಾನ್ಸರ್ಗಿಂತಲೂ ಮಾರಕ.... ಈ ವೈರಸ್ಗೆ 2 ಸಾವಿರಕ್ಕೂ ಹೆಚ್ಚು ಬಲಿ! - ಎಬೋಲಾ ವೈರಸ್ನಿಂದ 2000 ಜನ ಸಾವು
🎬 Watch Now: Feature Video

ವಿಶ್ವಕ್ಕೆ ಭಯ ಹುಟ್ಟಿಸುತ್ತಿರುವ ಎಬೋಲಾ ದಾಳಿಗೆ ಜನ ತತ್ತರಿಸಿದ್ದಾರೆ. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊದಲ್ಲಿ ಈ ರೋಗಕ್ಕೆ ಎರಡು ಸಾವಿರ ಜನ ಬಲಿಯಾಗಿದ್ದಾರೆ. ಈ ದೇಶದಲ್ಲಿ ಸುಮಾರು 3000ಕ್ಕೂ ಹೆಚ್ಚು ಎಬೋಲಾ ಪ್ರಕರಣಗಳು ದಾಖಲಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಶುಕ್ರವಾರ ಹೊರಡಿಸಿರುವ ಪ್ರಕರಣೆ ಅಚ್ಚರಿಗೆ ಗುರಿಯಾಗಿದೆ. ಕಳೆದ ಆಗಸ್ಟ್ನಿಂದ ಇಲ್ಲಿಯವರೆಗೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಸಾವಿನ್ನಪ್ಪಿದ್ದು, ಮೂರು ಸಾವಿರಕ್ಕೂ ಹೆಚ್ಚು ಎಬೋಲಾ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ. 1976ರಲ್ಲಿ ಬೆಲ್ಜಿಯಂ ಮೈಕ್ರೋಬಯಾಲಜಿಸ್ಟ್ ಪಿಟರ್ ಪಿಯಾಟ್ ಮತ್ತು ಆತನ ತಂಡ ವೈರಸ್ ಕಂಡು ಹಿಡಿದ ಪ್ರದೇಶದಲ್ಲಿ ಎಬೋಲಾ ನದಿ ಹರಿಯುತ್ತಿತ್ತು. ಹೀಗಾಗಿ ಈ ವೈರಸ್ಗೆ ಎಬೋಲಾ ಎಂದು ಹೆಸರು ಬಂತು. 2013 ರಿಂದ 2016ರ ವರ್ಷಗಳ ಮಧ್ಯೆ ಪಶ್ಚಿಮ ಆಫ್ರಿಕಾದಲ್ಲಿ ಎಬೋಲಾ ವೈರಸ್ ತೀವ್ರವಾಗಿ ಹರಡಿದ್ದು, ಸುಮಾರು 11 ಸಾವಿರ ಜನರು ಈ ಮಹಾಮಾರಿಗೆ ತುತ್ತಾಗಿದ್ದರು.