ಬೋರ್​​ವೆಲ್​​​ನೊಳಗೆ ಸಿಲುಕಿದ್ದ ಬಾಲಕಿ.. ಸೇನಾ ತಂಡದಿಂದ ಯಶಸ್ವಿ ಕಾರ್ಯಾಚರಣೆ!

By

Published : Jul 29, 2022, 4:44 PM IST

Updated : Feb 3, 2023, 8:25 PM IST

thumbnail
ಸುರೇಂದ್ರನಗರ(ಗುಜರಾತ್​): ದೃಂಗಧರ ತಾಲೂಕಿನ ಗಜರ್ನವವ್ ಗ್ರಾಮದಲ್ಲಿ ಕೃಷಿ ಕೂಲಿ ಕಾರ್ಮಿಕರೊಬ್ಬರ ಪುತ್ರಿ ಮನಿಷಾ (10ವರ್ಷ) ಬೋರ್‌ ಬಾವಿಯಲ್ಲಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಬಾಲಕಿ 500 ಅಡಿ ಆಳದ ಬಾವಿಯಲ್ಲಿ 70 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಳು. ಬಾಲಕಿ ಬೋರ್‌ನಲ್ಲಿ ಸಿಲುಕಿದ್ದರಿಂದ ಜನರು ಆತಂಕಗೊಂಡಿದ್ದರು. ಸೇನಾ ತಂಡ, ಆರೋಗ್ಯ ಇಲಾಖೆ , ಪೊಲೀಸ್ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿತ್ತು. ಸುದೀರ್ಘ ಕಾರ್ಯಾಚರಣೆ ಬಳಿಕ ಬಾಲಕಿಯನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಎಲ್ಲರ ಪ್ರಯತ್ನದಿಂದ ಬಾಲಕಿ ಬದುಕಿ ಬಂದಿದ್ದಾಳೆ. ಹೀಗಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕೇವಲ 40 ನಿಮಿಷಗಳ ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ರಕ್ಷಣೆ ಮಾಡಿರುವುದು ವಿಶೇಷ.
Last Updated : Feb 3, 2023, 8:25 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.