ದೇಶಾದ್ಯಂತ ನವರಾತ್ರಿ ಆರಾಧನೆ: ಮೋದಿಯಿಂದ 107 ಅಡಿ ಎತ್ತರದ ರಾವಣನ ಪ್ರತಿಮೆ ದಹನ - ಪ್ರಧಾನಿ ನರೇಂದ್ರ ಮೋದಿ
🎬 Watch Now: Feature Video

ದುಷ್ಟ ಸಂಹಾರ ವಿಜಯದಶಮಿ ಸಂಭ್ರಮದ ವಿಶೇಷತೆಗಳಲ್ಲೊಂದು.ಈ ದಿನ ಎಲ್ಲೆಡೆ ಲಂಕಾಧೀಶ ರಾವಣನ ಪ್ರತಿಮೆ ದಹನ ಕಾರ್ಯಕ್ರಮ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ನವದೆಹಲಿಯ ದ್ವಾರಕಾದಲ್ಲಿ 107 ಅಡಿ ಎತ್ತರದ ರಾವಣನ ಪ್ರತಿಮೆಗೆ ಬಾಣ ಬಿಟ್ಟು ದಹನ ಮಾಡಿದ್ರು. ಇದೇ ವೇಳೆ ಮಾತನಾಡಿದ ಅವರು, ತಾಯಿಯನ್ನ ಪೂಜಿಸುವ ಭೂಮಿ ನಮ್ಮದು. ಭಾರತದ ಪ್ರತಿಯೊಬ್ಬ ಮಗಳನ್ನ ಗೌರವಿಸುವುದು ನಮ್ಮ ಜವಾಬ್ದಾರಿ. ಮನ್ ಕೀ ಬಾತ್ ಸಮಯದಲ್ಲೂ ನಾನು ಹೆಣ್ಣು ಮಕ್ಕಳ ಬಗ್ಗೆ ಉಲ್ಲೇಖಿಸಿದ್ದು, ಬರುವ ದೀಪಾವಳಿ ವೇಳೆಗೆ ಅವರ ಸಾಧನೆ ಮೆಚ್ಚಿಕೊಂಡು ಸಂಭ್ರಮಾಚರಣೆ ಮಾಡೋಣ ಎಂದರು.