ಪೊಲೀಸರ ಭರ್ಜರಿ ಕಾರ್ಯಾಚರಣೆ: 10 ಕೋಟಿ ರೂ. ಮೌಲ್ಯದ ಅಕ್ರಮ ಮದ್ಯ ವಶ
🎬 Watch Now: Feature Video
ಪ್ರತಾಪಗಢ(ಉತ್ತರಪ್ರದೇಶ): ಪ್ರತಾಪಗಢ ಜಿಲ್ಲೆಯ ತೋಟದ ಮನೆಯೊಂದರಲ್ಲಿ ಕನಿಷ್ಠ 10 ಕೋಟಿ ರೂ. ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಳ್ಳುವಲ್ಲಿ ಉತ್ತರ ಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ. ಗುಡ್ಡು ಸಿಂಗ್ ಎಂಬುವರ ತೋಟದ ಮನೆಯಲ್ಲಿ ಮುಚ್ಚಿಡಲಾಗಿದ್ದ ಅಕ್ರಮ ಮದ್ಯವನ್ನ ಜೆಸಿಬಿ ಮೂಲಕ ಪೊಲೀಸರು ಹೊರತೆಗೆದಿದ್ದು, ಇದರಲ್ಲಿ 23,000 ಬಾಟಲಿ ಇದ್ದವು ಎನ್ನಲಾಗ್ತಿದೆ. 96 ಡ್ರಮ್ ರಾಸಾಯನಿಕ ಸಹ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಇದನ್ನ ಅಲ್ಕೋಹಾಲ್ ತಯಾರಿಸಲ ಬಳಕೆ ಮಾಡಲಾಗುತ್ತಿತ್ತು. ಇದರ ಜತೆಗೆ ತೋಟದ ಮನೆಯೊಳಗೆ 1 ಲಕ್ಷದ 23 ಸಾವಿರ ಮದ್ಯದ ಬಾಟಲಿ ಸಿಕ್ಕಿವೆ. ಕಳೆದ ಕೆಲ ತಿಂಗಳಿಂದ ಉತ್ತರ ಪ್ರದೇಶದಲ್ಲಿ ಅಕ್ರಮ ಮದ್ಯ ಸೇವನೆಯಿಂದ ಸಾವನ್ನಪ್ಪುತ್ತಿರುವ ಪ್ರಕರಣ ಹೆಚ್ಚಾಗಿರುವ ಕಾರಣ ಪೊಲೀಸರು ಇದರ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ.