ನೋಡಿ: ಮನೆಯಲ್ಲಿ ಅವಿತು ಕುಳಿತಿದ್ದ ಅಪರೂಪದ ಉಗುಳುವ ನಾಗರಹಾವು - ಉಗುಳುವ ನಾಗರಹಾವು ಪತ್ತೆ
🎬 Watch Now: Feature Video
ರಾಮನಗರ(ಉತ್ತರಾಖಂಡ): ಅಪರೂಪ ಎನ್ನಿಸುವ ಉಗುಳುವ ನಾಗರಹಾವು ಉತ್ತರಾಖಂಡ್ನ ರಾಮನಗರದಲ್ಲಿ ಪತ್ತೆಯಾಗಿದೆ. ಮೊನೊಕ್ಲ್ಡ್ (ಉಗುಳುವ) ನಾಗರಹಾವು ತನಗೆ ಅಪಾಯವೆನಿಸಿದಾಗ ಮಾತ್ರ ವಿಷ ಉಗುಳುತ್ತದಂತೆ. ಪಿರುಮದಾರ ಪ್ರದೇಶದ ಶಾಂತಿ ಕುಂಜ್ ನಗರದ ಮನೆಯೊಂದರಲ್ಲಿ ಹಾವು ಪತ್ತೆಯಾಗಿದೆ. ನಂತರ ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಸಮೀಪದ ಕಾಡಿನಲ್ಲಿ ಬಿಡಲಾಗಿದೆ. ಮೊನೊಕ್ಲ್ಡ್ ನಾಗರಹಾವು (monocled cobra) ಅಥವಾ ಭಾರತೀಯ ಉಗುಳುವ ನಾಗರಹಾವು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ್ಯಂತ ವ್ಯಾಪಕವಾಗಿ ಹರಡಿರುವ ವಿಷಪೂರಿತ ನಾಗರ ಜಾತಿಗೆ ಸೇರಿದೆ. ಅತಿ ವಿರಳ ಎನ್ನಿಸುವ ಈ ಪ್ರಭೇದ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಲಿಸ್ಟ್ನಲ್ಲಿ ಕೆಂಪು ಪಟ್ಟಿಯಲ್ಲಿದೆ.