ರೋಗಿಯನ್ನ ತಳ್ಳುವ ಗಾಡಿಯಲ್ಲೇ 8 ಕಿ.ಮೀ ತಳ್ಳಿಕೊಂಡು ಹೋಗಿ ಆಸ್ಪತ್ರೆ ಸೇರಿಸಿದ್ರು!! - ಮಧ್ಯಪ್ರದೇಶ
🎬 Watch Now: Feature Video

ಲಾಕ್ಡೌನ್ನಿಂದಾಗಿ ಆ್ಯಂಬುಲೆನ್ಸ್ ಸೇವೆ ಸಿಗದೇ ಅನೇಕರು ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ರೋಗಿಗಳನ್ನ ತಳ್ಳುವ ಗಾಡಿ, ಟಾಂಗಾ ಸೇರಿದಂತೆ ಸೈಕಲ್ಗಳ ಮೇಲೆ ಕುಳ್ಳಿರಿಸಿಕೊಂಡು ಹತ್ತಾರು ಕಿಲೋ ಮೀಟರ್ ಕ್ರಮಿಸಿ ಆಸ್ಪತ್ರೆಗೆ ದಾಖಲು ಮಾಡಲಾಗ್ತಿದೆ. ಇದೀಗ ಮಧ್ಯಪ್ರದೇಶದ ಗೋಟೋಗಾಂವ್ನಲ್ಲಿ ಇಂತಹದೊಂದು ಘಟನೆ ನಡೆದಿದ್ದು, ವ್ಯಕ್ತಿಯೊಬ್ಬನನ್ನು ಸರಿಸುಮಾರು 8 ಕಿ.ಮೀಟರ್ ದೂರ ತಳ್ಳುವ ಗಾಡಿಯಲ್ಲಿ ತೆಗೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲು ಮಾಡಿ ಆತನ ಜೀವ ಉಳಿಸಿದ್ದಾರೆ.