ಹೈದರಾಬಾದ್ ಮರುನಾಮಕರಣ ದೂರದ ಮಾತು: ಯೋಗಿಗೆ ಓವೈಸಿ ತಿರುಗೇಟು - Asaduddin Owaisi latest news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9701280-thumbnail-3x2-aaa.jpg)
ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಹೆಚ್ಎಂಸಿ) ಚುನಾವಣೆಯ ಪ್ರಚಾರ ಜೋರಾಗಿದೆ. ಹೈದರಾಬಾದ್ ಮರುನಾಮಕರಣ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ನನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡಲಾಗುತ್ತದೆ ಎಂದು ಹೇಳಿಕೆ ನೀಡಿದ್ದು, ಇದಕ್ಕೆ ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ. ಹೈದರಾಬಾದ್ನನ್ನು ಮರುನಾಮಕರಣ ಮಾಡಲು ಇಚ್ಛಿಸುತ್ತಿದ್ದಾರೆ. ಅವರು (ಬಿಜೆಪಿ) ಎಲ್ಲಾ ಕಡೆಯೂ ಮರುನಾಮಕರಣ ಮಾಡಲು ಬಯಸುವವರು. ನಿಮ್ಮನ್ನು ಮರು ಹೆಸರಿಸಲಾಗುವುದು, ಆದರೆ ಹೈದರಾಬಾದ್ ಅನ್ನು ಅಲ್ಲವೆಂದು ತಿರುಗೇಟು ನೀಡಿದ್ದಾರೆ.