ಮಹಿಳೆ ಹೊಟ್ಟೆ ಬಗೆದು ನೋಡಿದಾಗ ವೈದ್ಯರಿಗೆ ಶಾಕ್... ಕೆಜಿಗಟ್ಟಲೇ ಸಿಕ್ಕವು ಬಂಗಾರ! - ಬಂಗಾರ
🎬 Watch Now: Feature Video

ಮಹಿಳೆಯೊಬ್ಬಳ ದೇಹ ಸೇರಿದ್ದ ಒಂದೂವರೆ ಕಿಲೋ ಆಭರಣ ಹಾಗೂ ಹತ್ತಾರು ನಾಣ್ಯಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಪಶ್ಚಿಮ ಬಂಗಾಳದ ಬಿರ್ಭಮ್ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರೇ ಹೌಹಾರಿದ್ದರು. ಮಹಿಳೆಯ ದೇಹದಲ್ಲಿ ಐದು ಹಾಗೂ ಹತ್ತು ರೂ. ಮೌಲ್ಯದ ಬರೋಬ್ಬರಿ 90 ನಾಣ್ಯಗಳಿದ್ದವು. ಆಪರೇಷನ್ ಮೂಲಕ ನಾಣ್ಯದ ಹೊರತಾಗಿ ಚೈನ್, ಮೂಗುತಿ, ಕಿವಿಯೋಲೆ, ಬಳೆ ಸೇರಿದಂತೆ 1.680 ಕೆ.ಜಿ ಆಭರಣವನ್ನು ಮಹಿಳೆಯ ಹೊಟ್ಟೆಯಿಂದ ಹೊರತೆಗೆಯಲಾಗಿದೆ. ಈ ಮಹಿಳೆ ತನ್ನ ಸೋದರಮಾವನ ಅಂಗಡಿಯಿಂದ ಆಭರಣಗಳು ತೆಗೆದುಕೊಂಡಿದ್ದಳಂತೆ. ಆಭರಣಗಳ ಬಗ್ಗೆ ಆಕೆಯ ಬಳಿ ಕೇಳಿದಾಗ ಅಳುತ್ತಿದ್ದಳಂತೆ. ನಂತರ ಆಕೆಯ ಚಟುವಟಿಕೆಯ ಮೇಲೆ ತೀವ್ರ ನಿಗಾ ವಹಿಸಿದಾಗ ಆಭರಣಗಳನ್ನು ತಿನ್ನುತ್ತಿದ್ದಿದ್ದು ಗಮನಕ್ಕೆ ಬಂದಿತ್ತು. ಹೀಗಾಗಿ ಕಳೆದೆರಡು ತಿಂಗಳಿನಿಂದ ಆಕೆಯ ಆರೋಗ್ಯ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಮಹಿಳೆಯ ತಾಯಿ ಮಾಹಿತಿ ನೀಡಿದ್ದಾರೆ.