ಅರುಣಾಚಲ ಪ್ರದೇಶದಲ್ಲಿ ಭಾರಿ ಭೂಕುಸಿತ: 8 ಜನರ ಸಾವು! - massive-landslide-kills-8-people
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7979102-471-7979102-1594434492235.jpg)
ಪಾಪುಮ್ ಪಾರೆ / ಇಟಾನಗರ್ (ಅರುಣಾಚಲ ಪ್ರದೇಶ): ಅರುಣಾಚಲ ಪ್ರದೇಶದ ದೋಯಿಮುಖ್ ಪಟ್ಟಣದ ಟಿಗ್ಡೊ ಗ್ರಾಮದಲ್ಲಿ ಜುಲೈ 10ರಂದು ಸಂಭವಿಸಿದ ಭಾರಿ ಭೂಕುಸಿತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಭಾರಿ ಭೂಕುಸಿತದಲ್ಲಿ ಸಂಕಷ್ಟಕ್ಕೆ ಈಡಾದವರ ನೆರವಿಗೆ ಸ್ಥಳೀಯರು ಧಾವಿಸಿದ್ದರು, ಆದರೆ ಭೂಕುಸಿತದ ಪ್ರಮಾಣ ಭಾರಿ ಪ್ರಮಾಣದಲ್ಲಿ ಇದ್ದುದರಿಂದ ಹಲವರನ್ನ ಕಾಪಾಡಲು ಸಾಧ್ಯವಾಗಲಿಲ್ಲ. ಇಷ್ಟೇ ಅಲ್ಲ ಇಟಾನಗರದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಇದೇ ರೀತಿಯ ಭೂಕುಸಿತದಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ. ಸಿಲುಕಿಕೊಂಡ ಜನರನ್ನು ರಕ್ಷಿಸಲು ಎನ್‌ಡಿಆರ್‌ಎಫ್ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಭಾರಿ ಪ್ರಮಾಣದಲ್ಲಿ ಭೂಮಿ ಕುಸಿತ ಕಂಡಿದ್ದು, ಕೆಸರು ತೆಗೆಯಲು ಜೆಸಿಬಿಗಳನ್ನ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
Last Updated : Jul 11, 2020, 8:31 AM IST