ಸೂಜಿ ಕಣ್ಣಿನ ಗಾತ್ರದ ಮೋದಿ ಮೈಕ್ರೋ ಆರ್ಟ್​ ರಚಿಸಿದ ಕಲಾವಿದ! - micro art

🎬 Watch Now: Feature Video

thumbnail

By

Published : Sep 17, 2019, 8:13 PM IST

ಪಿಎಂ ಹುಟ್ಟುಹಬ್ಬದ ಹಿನ್ನೆಲೆ ಕಲಾವಿದರೊಬ್ಬರು ಮೋದಿ ಅವರ ಮೈಕ್ರೋ ಆರ್ಟ್​ ವಿನ್ಯಾಸಗೊಳಿಸಿದ್ದಾರೆ. ಈ ಕಿರು ಪ್ರತಿಮೆಯು 0.92 ಇಂಚು ಉದ್ದ ಹಾಗೂ 0.28 ಇಂಚು ಅಗಲವಿದೆ. ಸೂಜಿ ಕಣ್ಣಿನಲ್ಲಿ ಈ ಪ್ರತಿಮೆಯನ್ನು ಇಡಬಹುದಾಗಿದೆ. ತೆಲಂಗಾಣದ ವರಂಗಲ್​ನ ಅಕ್ಕಸಾಲಿಗ ಮಟ್ಟೇವಾಡ ಅಜಯ್​ ಕುಮಾರ್ ಪ್ರತಿಮೆಯನ್ನು ರಚಿಸಿದ್ದಾರೆ. ಈ ಕಿರು ಪ್ರತಿಮೆ ರಚನೆಗಾಗಿ ಅಜಯ್​ ಅವರು 6 ದಿನ ಶ್ರಮ ಪಟ್ಟಿದ್ದರು. ಪ್ರತಿಮೆಯಲ್ಲಿ ಮೋದಿ ಕೇಸರಿ ಹಾಗೂ ಬಿಳಿ ಬಣ್ಣದ ಕುರ್ತಾ -ಪೈಜಾಮ ಧರಿಸಿದ್ದಾರೆ. ಮಹಾತ್ಮಾ ಗಾಂಧೀಜಿ, ಭಗತ್ ಸಿಂಗ್​ ಹಾಗೂ ಇತರರ ಮೈಕ್ರೊ ಆರ್ಟ್​ಗಳನ್ನು ಇವರು ವಿನ್ಯಾಸಗೊಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.