ಧಾನ್ಯಗಳಲ್ಲಿ ಮೂಡಿದ ಗಾಂಧೀಜಿ.. ಕೇರಳ ಕಲಾವಿದನ ಕೈಚಳಕ ಹೇಗಿದೆ ನೋಡಿ - Mahatma Gandhi portrait
🎬 Watch Now: Feature Video
ತ್ರಿಶೂರ್: ಕೇರಳದ ಎರ್ನಾಕುಲಂ ಜಿಲ್ಲೆಯ ಕೊಡುಂಗಲ್ಲೂರಿನ ಶಿಲ್ಪ ಕಲಾವಿದ ಡಾ ವಿನ್ಸಿ ಸುರೇಶ್, ವಿವಿಧ ಬಗೆಯ ಧಾನ್ಯಗಳೊಂದಿಗೆ ಮಹಾತ್ಮ ಗಾಂಧಿ ಭಾವಚಿತ್ರವನ್ನು ರಚಿಸಿದ್ದಾರೆ. ಹೆಸರುಕಾಳು, ಕೊತ್ತಂಬರಿ ಬೀಜ, ಮೆಂತ್ಯ, ಸಾಸಿವೆ, ಹುರುಳಿ ಕಾಳು, ಜೋಳ, ಮೆಣಸಿನ ಕಾಳು ಹಾಗೂ ಕುಂಬಳಕಾಯಿ, ಸೋರೆಕಾಯಿ, ಸೌತೆಕಾಯಿ, ಬೆಂಡೆಕಾಯಿ ಬೀಜಗಳು ಸೇರಿದಂತೆ 19 ರೀತಿಯ ಧಾನ್ಯಗಳನ್ನು ಬಳಸಿಕೊಂಡು ಭಾವಚಿತ್ರ ರಚಿಸಲಾಗಿದೆ. ಇವುಗಳನ್ನು ತ್ರಿಶೂರ್‌ನ ಮನ್ನುತಿ ಕೇರಳ ಕೃಷಿ ವಿಶ್ವವಿದ್ಯಾಲಯದ ಅಡಿ ಬರುವ ಕೃಷಿ ಸಂಶೋಧನಾ ಕೇಂದ್ರ ಮತ್ತು ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದಿಂದ ಸುರೇಶ್ ಪಡೆದಿದ್ದಾರೆ. ಬಾಪುವಿನ 151ನೇ ಜಯಂತಿ ಹಿನ್ನೆಲೆಯಲ್ಲಿ ತಮ್ಮ ವಿಶೇಷ ಕಲೆಯ ಮೂಲಕ ವಿನ್ಸಿ ಸುರೇಶ್ ಗಾಂಧೀಜಿಗೆ ಗೌರವ ಸಲ್ಲಿಸಿದ್ದಾರೆ.