ಹುಟ್ಟಿದ ಕೂಡಲೇ ಎದ್ದೇಳಲು ಹರಸಾಹಸ ಪಡುತ್ತಿರೋ ಆನೆ ಮರಿ... ವಿಡಿಯೋ ವೈರಲ್!
🎬 Watch Now: Feature Video
ಹೈದರಾಬಾದ್: ಆನೆ ಮರಿವೊಂದು ಹುಟ್ಟಿದ ತಕ್ಷಣವೇ ಮೊದಲ ಹೆಜ್ಜೆ ಇಟ್ಟು ನಡೆದಾಡಲು ಪ್ರಾರಂಭಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಪ್ರಾಣಿಪ್ರೀಯರ ಮೆಚ್ಚುಗೆಗೆ ಕಾರಣವಾಗಿದೆ. ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಶುಶಾಂತ್ ನಂದಾ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಹುಟ್ಟಿದ ಕೂಡಲೇ ನವಜಾತ ಆನೆ ಮರಿ ಎದ್ದೇಳಲು ಹರಸಾಹಸ ಪಡುತ್ತಿದ್ದು, ನೋಡಲು ತುಂಬಾ ಮುದ್ದಾಗಿದೆ. 25 ಸೆಕೆಂಡ್ಗಳ ಈ ವಿಡಿಯೋ ಫೆ.6ರಂದು ವೈರಲ್ ಆಗಿದ್ದು, ಅನೇಕರು ಈ ದೃಶ್ಯ ವೀಕ್ಷಣೆ ಮಾಡಿದ್ದಾರೆ. ಈ ವಿಡಿಯೋ ವೀಕ್ಷಣೆ ಮಾಡಿರುವ ಸಾವಿರಾರು ಜನರು ವಿವಿಧ ರೀತಿಯಲ್ಲಿ ಕಮೆಂಟ್ ಸಹ ಮಾಡಿದ್ದಾರೆ.