ಜಿನೆವಾ: ಕಳೆದೆರಡು ದಿನಗಳಲ್ಲಿ ಜಾಗತಿಕ ತಾಪಮಾನ ಗರಿಷ್ಠ ಮಟ್ಟ ದಾಖಲಾಗುತ್ತಿದ್ದು, ಇದು ಎಚ್ಚರಿಕೆ ಗಂಟೆಯಾಗಿದೆ. ಈ ಹವಾಮಾನ ಬದಲಾವಣೆ ಕೈ ಮೀರಿದೆ. ಅದು ನಿಯಂತ್ರಣದಲ್ಲಿಲ್ಲ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ತಿಳಿಸಿದ್ದಾರೆ.
ಕಳೆದೊಂದು ವಾರದಿಂದ ಜಾಗತಿಕವಾಗಿ ತಾಪಮಾನ ದಾಖಲೆ ಮಟ್ಟದಲ್ಲಿ ಏರಿಕೆ ಕಾಣುತ್ತಿದೆ. ಇದೇ ರೀತಿ ನಾವು ಹವಾಮಾನ ಬದಲಾವಣೆ ಕುರಿತು ಕ್ರಮ ಕೈಗೊಳ್ಳಲು ವಿಳಂಬ ನೀರತೊ ಮುಂದುವರೆಸಿದರೆ, ನಾವು ಅತ್ಯಂತ ದುಸ್ಥಿತಿಗೆ ತಲುಪಲಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಹವಾಮಾನ ಬದಲಾವಣೆ, ಕಾಡ್ಬಿಚ್ಚು, ಮಾಲಿನ್ಯ ಸೇರಿದಂತೆಹ ಹಲವು ಕಾರಣದಿಂದ ಹವಾಮಾನ ಬದಲಾವಣೆ ಆಗುತ್ತಿದೆ. ಈ ವಾರದ ಆರಂಭದಲ್ಲಿ ಅಂದರೆ, ಸೋಮವಾರ ಮತ್ತು ಮಂಗಳವಾರ ಜಾಗತಿಕವಾಗಿ ಅತಿ ಹೆಚ್ಚು ಉಷ್ಣಾಂಶವನ್ನು ದಾಖಲಿಸಲಾಗಿದೆ. ಜಾಗತಿಕವಾಗಿ ಮಂಗಳವಾರ ಸರಾಸರಿ ತಾಪಮಾನ 17.18 ಡಿಗ್ರಿ ಸೆಲ್ಸಿಯಸ್ ಆಗಿದೆ. ಅಮೆರಿಕದ ರಾಷ್ಟ್ರೀಯ ಹವಾಮಾನ ಅಂದಾಜು ಕೇಂದ್ರ (ಎನ್ಸಿಇಪಿ) ದತ್ತಾಂಶದ ಅನುಸಾರ ಸೋಮವಾರ 17.01 ಡಿಗ್ರಿ ಉಷ್ಣಾಂಶ ದಾಖಲಾಗಿದೆ.
ಮೈನೆ ವಿಶ್ವವಿದ್ಯಾಲಯದ ಹವಾಮಾನ ಮರುವಿಶ್ಲೇಷಣೆ ದತ್ತಾಂಶದ ಅನುಸಾರ, ಬುಧವಾರಕ್ಕೆ ಏಳು ದಿನದ ಅವಧಿ ಮುಗಿಯಲಿದೆ. ಕಳೆದ 44 ವರ್ಷಗಳಿಗೆ ಹೋಲಿಕೆ ಮಾಡಿದರೆ, ಈ ವಾರದ ಆರಂಭದಲ್ಲಿ ಪ್ರತಿ ದಿನದ ಸರಾಸರಿ ತಾಮಪಾನದ 0.4ರಷ್ಟು ಹೆಚ್ಚಾಗಿದೆ.
ಬುಧವಾರ ಕೂಡ ಭೂಮಿಯ ಸರಾಸರಿ ತಾಪಮಾನದ 17.18 ಡಿಗ್ರಿ ಆಗಿದೆ ಎಂದು ದತ್ತಾಂಶಗಳು ತೋರಿಸಿದೆ. ಅಮೆರಿದ ರಾಷ್ಟ್ರೀಯ ಸಾಗರ ಮತ್ತು ಪರಿಸರ ಆಡಳಿತ (ಎನ್ಒಎಎ) ಹೇಳುವಂತೆ, ಗುರುವರ ಈ ವಿಶ್ಲೇಷಣೆ ಮೌಲ್ಯಯುತವಾಗದೇ ಇರಬಹುದು ಎಂದಿದೆ ಎಂದು ಗಾರ್ಡಿಯನ್ ವರದಿ ಮಾಡಿದೆ.
ಮರುಕಳಿಸಿದ ಎಲ್ ನಿನೋ: ನಾವು ಇದೀಗ ಹವಾಮಾನ ಬದಲಾವಣೆಯಿಂದಾಗಿ ಬಿಸಿಲಿನ ಅವಧಿಯಲ್ಲಿದ್ದಾರೆ. ಇದು ಸಮುದ್ರದ ಬಿಸಿಲಿನ ಪರಿಸ್ಥಿತಿ ಮತ್ತು ಎಲ್ ನಿನೋ ಸಂಯೋಜನೆಯನ್ನು ಹೊಂದಿದೆ. ಜಗತ್ತಿನೆಲ್ಲೆಡೆ ಅನೇಕ ಪ್ರದೇಶದಲ್ಲಿ ಬಿಸಿಲಿನ ಮೇಲ್ಮೈ ತಾಪಮಾನ ದಾಖಲಾಗಿರುವುದು ಕಂಡು ಬಂದಿದೆ ಎಂದು ಎನ್ಒಎಎ ತಿಳಿಸಿದೆ.
ಜಾಗತಿಕವಾಗಿ ಎಲ್ ನಿನೋ ಮರುಕಳಿಸಿದೆ ಎಂದು ವಿಶ್ವ ಸಂಸ್ಥೆ ದೃಢಪಡಿಸಿದೆ. 2016ರಲ್ಲಿ ಎಲ್ ನಿನೋಗೆ ಜಗತ್ತು ಸಾಕ್ಷಿಯಾಗಿತ್ತು. ಆ ವರ್ಷ ಅತ್ಯಂತ ಬಿಸಿಲಿನ ವರ್ಷ ಎಂದು ದಾಖಲಾಗಿತ್ತು. ಜಗತ್ತಿನ ಬಹುತೇಕ ಭಾಗದಲ್ಲಿ ಈಗಾಗಲೇ ಶಾಖದ ಅಲೆಯ ಅನುಭವ ಆಗುತ್ತಿದೆ. ಯುರೋಪಿಯನ್ ಪರಿಸರ ನಿರ್ವಹಣೆ ಸೇವೆ ತಿಳಿಸುವಂತೆ, ಜಾಗತಿಕವಾಗಿ ಜೂನ್ ಹಾಟೆಸ್ಟ್ (ಬಿಸಿಲಿನಿಂದ ಕೂಡಿದ) ತಿಂಗಳು ಆಗಿರಲಿದೆ.
ದಕ್ಷಿಣ ಅಮೆರಿಕ ಕಳೆದ ಕೆಲವು ವಾರದಿಂದ ಅತಿಯಾದ ಬಿಸಿಲಿನಿಂದ ತತ್ತರಿಸುತ್ತಿದೆ. ಚೀನಾದಲ್ಲಿ ಶಾಖದ ಹೊಡೆತಕ್ಕೆ ಜನ ನಲುಗುತ್ತಿದ್ದು, ಇದೇ ರೀತಿ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ. ಇಲ್ಲಿ ಈಗಾಗಲೇ ತಾಪಮಾನ 35 ಡಿಗ್ರಿ ತಲುಪಿದ್ದು, ಜನರಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: Hottest day: ಜುಲೈ 3 ಜಾಗತಿಕವಾಗಿ ಹೆಚ್ಚು ಸರಾಸರಿ ತಾಪಮಾನ ದಾಖಲಾದ ದಿನ