ಜಿನಿವಾ: ಜಾಗತಿಕವಾಗಿ ಆರೋಗ್ಯ ವ್ಯವಸ್ಥೆಗಳು ಸಾಕಷ್ಟು ಅಭಿವೃದ್ಧಿ ಹೊಂದಿದರೂ ಕೂಡ ತಾಯಿ- ಶಿಶು ಮರಣ ಪ್ರಕರಣಗಳನ್ನು ತಗ್ಗಿಸಲು ಸಾಧ್ಯವಾಗಿಲ್ಲ. ಪ್ರತಿ ಏಳು ಸೆಕೆಂಡ್ಗೆ ಒಂದು ಸಾವು ಸಂಭವಿಸುತ್ತಿದೆ. ಜಾಗತಿಕವಾಗಿ ಗರ್ಭಾವಸ್ಥೆ, ಪ್ರಸವದ ಬಳಿಕ ಪ್ರತಿ ವರ್ಷ 4.5 ಮಿಲಿಯನ್ಗೂ ಹೆಚ್ಚು ಮಂದಿ ತಾಯಿ ಮತ್ತು ಮಗು ಸಾವನ್ನಪ್ಪುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಹೊಸ ವರದಿ ಬಿಡುಗಡೆ ಮಾಡಿರುವ ವಿಶ್ವಸಂಸ್ಥೆ, ಗರ್ಭಾವಸ್ಥೆ, ಪ್ರಸವ ಅಥವಾ ಮಗುವಿನ ಜನನದ ವಾರದ ಬಳಿಕ ತಡೆಗಟ್ಟಬಹುದಾದ/ಚಿಕಿತ್ಸೆ ನೀಡಬಹುದಾದ ಪ್ರಕರಣಗಳಲ್ಲಿ ತಾಯಂದಿರು ಮತ್ತು ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿಸಿದೆ. 2015ಕ್ಕೆ ಹೋಲಿಕೆ ಮಾಡಿದಾಗ ತಾಯಂದಿರ ಮತ್ತು ನವಜಾತ ಶಿಶುಗಳ ಆರೋಗ್ಯ ಮತ್ತು ಉಳಿಯುವಿಕೆ ಸುಧಾರಣೆ ಸೇರಿದಂತೆ ಇನ್ನಿತರೆ ಕ್ರಮಗಳಿಂದ ತಾಯಂದಿರು, ಶಿಶುಗಳ ಮರಣ ಪ್ರಮಾಣದಲ್ಲಿ ಯಾವುದೇ ರೀತಿಯ ಸುಧಾರಣೆ ಕಂಡಿಲ್ಲ. ಇದು ಸ್ಥಿರವಾಗಿದೆ. ತಾಯಂದಿರ ಮತ್ತು ನವಜಾತ ಶಿಶುಗಳ ಆರೋಗ್ಯದ ಮೇಲೆ ಹೂಡಿಕೆ ಕಡಿಮೆಯಾಗಿದ್ದೇ ಇದಕ್ಕೆ ಕಾರಣ ಎಂದು ವಿಶ್ವಸಂಸ್ಥೆ ಹೇಳಿದೆ.
2015ರಲ್ಲಿ ಪ್ರತಿ ವರ್ಷ ಸುಮಾರು 2,90,00 ತಾಯಂದಿರು ಮತ್ತು ಶಿಶುಗಳು ಮರಣ ಸಂಭವಿಸಿದೆ. ಇದರಲ್ಲಿ 1.9 ಮಿಲಿಯನ್ ಹುಟ್ಟಬೇಕಿದ್ದ ಶಿಶುಗಳು 29 ವಾರದ ಗರ್ಭಾವಸ್ಥೆಯಲ್ಲಿಯೇ ಸಾವನ್ನಪ್ಪಿದ್ದಾರೆ. 2.3 ಮಿಲಿಯನ್ ನವಜಾತ ಶಿಶುಗಳು ಹುಟ್ಟಿದ ಮೊದಲ ತಿಂಗಳಿನಲ್ಲಿಯೇ ಸಾವನ್ನಪ್ಪಿವೆ ಎಂದು ವರದಿ ತಿಳಿಸಿದೆ.
ಕೋವಿಡ್ನಿಂದ ಹಿನ್ನಡೆ: ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಮರಣದ ಸಂಖ್ಯೆ ಅನಿರೀಕ್ಷಿತವಾಗಿ ಪ್ರಪಂಚದಾದ್ಯಂತ ಏರಿಕೆ ಆಗುತ್ತಿದೆ. ಕೋವಿಡ್ ಸಾಂಕ್ರಾಮಿಕತೆ ಕೂಡ ಆರೋಗ್ಯ ವ್ಯವಸ್ಥೆಯ ಅಗತ್ಯತೆಗೆ ದೊಡ್ಡ ಹೊಡೆತ ನೀಡಿತು ಎಂದು ವಿಶ್ವಸಂಸ್ಥೆಯ ಮಕ್ಕಳ ಮತ್ತು ಹರೆಯದವರ ಆರೋಗ್ಯ ತಜ್ಞರಾಗಿರುವ ಡಾ.ಅಂಶು ಬ್ಯಾನರ್ಜಿ ಹೇಳುತ್ತಾರೆ.
ನಾವು ವಿಭಿನ್ನ ಫಲಿತಾಂಶ ಆಸೆಪಟ್ಟರೆ, ವಿಭಿನ್ನವಾಗಿ ಕಾರ್ಯ ನಿರ್ವಹಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಮತ್ತು ಕೌಶಲ್ಯಯುತ ಹೂಡಿಕೆ ಮಾಡಬೇಕು. ಇದರಿಂದ ಯಾವುದೇ ಮೂಲೆಯಲ್ಲಿ ತಾಯಿ ಮತ್ತು ಮಗು ಇದ್ದರೂ ಅವರ ಆರೋಗ್ಯ ಮತ್ತು ಉಳಿಯುವಿಕೆಗೆ ಉತ್ತಮ ಸೌಲಭ್ಯ ನೀಡಬೇಕು.
ಕೋವಿಡ್ ಬಡತನವನ್ನು ಹೆಚ್ಚಿಸಿದ್ದು, ಮಾನವ ಬಿಕ್ಕಟ್ಟು ಎದುರಿಸುವಂತೆ ಮಾಡಿದೆ. ಇದರಿಂದ ಆರೋಗ್ಯ ವ್ಯವಸ್ಥೆಯಲ್ಲಿ ಒತ್ತಡವೂ ಹೆಚ್ಚಾಗಿದೆ. 10ರಲ್ಲಿ ಒಂದು ದೇಶ ಮಾತ್ರ ಪ್ರಸ್ತುತ ಯೋಜನೆ ಅಳವಡಿಕೆಗೆ ಸಾಕಷ್ಟು ಧನಸಹಾಯ ಹೊಂದಿದೆ ಎಂದು ಇದೇ ವೇಳೆ ವರದಿ ವಿವರಿಸಿದೆ.
ಇತ್ತೀಚಿಗಿನ ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ, ಸಾಂಕ್ರಾಮಿಕತೆ ಅಗತ್ಯದ ಆರೋಗ್ಯ ಸೇವೆ ಮೇಲೆ ಪರಿಣಾಮ ಬೀರಿದೆ. ಜಗತ್ತಿನ ಕಾಲುಭಾಗದಷ್ಟು ದೇಶಗಳು ಗರ್ಭವಸ್ಥೆ ಮತ್ತು ಪ್ರಸವಪೂರ್ವ ಆರೈಕೆ ಮತ್ತು ಅನಾರೋಗ್ಯದ ಮಕ್ಕಳಿಗೆ ಸೇವೆ ನೀಡಲು ತೊಂದರೆ ಎದುರಿಸುತ್ತಿದೆ.
ಕೋವಿಡ್ ಸಾಂಕ್ರಾಮಿಕತೆಯಿಂದ ಈಗಾಗಲೇ ತೆರೆದುಕೊಂಡಿರುವ ಶಿಶುಗಳು ಮತ್ತು ಮಕ್ಕಳು, ಮಹಿಳೆಯರು ಇಂದಿಗೂ ಆರೋಗ್ಯ ಭೀತಿ ಎದುರಿಸುತ್ತಿದ್ದಾರೆ. ಅದರಲ್ಲೂ ಬಡ ಮತ್ತು ತುರ್ತು ದೇಶಗಳಲ್ಲಿ ಈ ಸಮಸ್ಯೆ ಹೆಚ್ಚು. ಇಲ್ಲಿ ಆರೋಗ್ಯ ವ್ಯವಸ್ಥೆ ಲಭ್ಯತೆ ಮತ್ತು ಉತ್ತಮ ಗುಣಮಟ್ಟದ ಪ್ರಯತ್ನಗಳ ಸಂಖ್ಯೆ ಕುಸಿದಿದೆ ಎಂದು ಯುನಿಸೆಫ್ ಆರೋಗ್ಯ ನಿರ್ದೇಶಕ ಸ್ಟೀವೆನ್ ಲೌರೆರ್ ತಿಳಿಸಿದ್ದಾರೆ. ಆರೋಗ್ಯ ವ್ಯವಸ್ಥೆ ಮೇಲೆ ಕಡಿಮೆ ಹೂಡಿಕೆ ಮತ್ತು ಕೊರತೆ ಭವಿಷ್ಯದ ಉಳಿಯುವಕೆ ಮೇಲೆ ಕೂಡ
ಇದೀಗ ಜಾಗತಿಕವಾಗಿ ಎಲ್ಲೆಡೆ ಅವಧಿ ಪೂರ್ವ ಹೆರಿಗೆ ಸಾವು ಪ್ರಮುಖವಾಗಿದೆ. ಮೂರನೇ ಒಂದು ದೇಶಗಳು ಹುಟ್ಟಿದ ಮಗುವಿಗೆ ಮತ್ತು ಅನಾರೋಗ್ಯ ಪೀಡಿತ ಮಗುವಿಗೆ ತಕ್ಷಣಕ್ಕೆ ಬೇಕಾಗುವ ನವಜಾತ ಶಿಶು ಆರೈಕೆ ಘಟಕಗಳನ್ನು ಹೊಂದಿಲ್ಲ. ಈ ಉಳಿಯುವಿಕೆ ಪ್ರಮಾಣ ಹೆಚ್ಚಳ ಮಾಡಲು, ಮಹಿಳೆ ಮತ್ತು ಶುಶುಗಳು ಗುಣಮಟ್ಟದ, ಕೈಗೆಟುಗುವ ದರದಲ್ಲಿ ಆರೋಗ್ಯ ಕಾಳಜಿ ಪಡೆಯಬೇಕಿದೆ. ಇದರ ಜೊತೆಗೆ ಕುಟುಂಬ ಯೋಜನೆ ಸೇವೆಯನ್ನೂ ಹೊಂದಬೇಕಿದೆ.
ಹೆಚ್ಚಿನ ಕೌಶಲ್ಯ ಮತ್ತು ಪ್ರೇರಣಾದಾಯಕ ಆರೋಗ್ಯ ಕಾರ್ಯಕರ್ತರು, ವಿಶೇಷವಾಗಿ ದಾದಿಯರ ಅವಶ್ಯಕತೆ ಇದೆ. ಔಷಧಿ ಮತ್ತು ಪೂರೈಕೆ, ಸುರಕ್ಷಿತ ನೀರು ಕೂಡ ಲಭ್ಯವಾಗಬೇಕಿದೆ ಎಂದು ವಿಶ್ವಸಂಸ್ಥೆ ದಕ್ಷಿಣ ಆಫ್ರಿಕಾದ ಕೇಪ್ ಟೌನ್ನಲ್ಲಿ ನಡೆಸಿದ ಜಾಗತಿಕ ಸಮ್ಮೇಳನದಲ್ಲಿ ತಿಳಿಸಿದೆ.
ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಕಾಡುವ ಖಿನ್ನತೆಯಿಂದ ಹೆರಿಗೆ ಬಳಿಕ ಹೃದಯ ಸಮಸ್ಯೆ