ETV Bharat / sukhibhava

ಇಂದು ಒಡ ಹುಟ್ಟಿದವರ ದಿನ: ಏನು ಈ ದಿನದ ವಿಶೇಷತೆ? - ಒಡಹುಟ್ಟಿದವರ ನಡುವೆ ಸ್ಪರ್ಧೆಗಳು

ಎಲ್ಲ ಸಂಬಂಧಕ್ಕಿಂತ ಮೀರಿದ ಬಂಧವೊಂದು ಒಡಹುಟ್ಟಿದವರ ಜೊತೆ ಏರ್ಪಡುತ್ತದೆ. ಅವರ ಸ್ನೇಹಿತರು, ಬಂಧುವಾಗಿ, ಶಿಕ್ಷಕರಾಗಿ ಮಾರ್ಗದರ್ಶನ ತೋರುತ್ತಾರೆ

Today is Siblings Day: What is special about this day?

author img

By

Published : Apr 10, 2023, 2:09 PM IST

ಹೈದರಾಬಾದ್​: ಒಡ ಹುಟ್ಟಿದವರು ಉತ್ತಮ ಸ್ನೇಹಿತರ ಜೊತೆಗೆ ಮಾರ್ಗದರ್ಶಕರು ಆಗಿರುತ್ತಾರೆ. ಬಾಲ್ಯವನ್ನು ಒಟ್ಟಿಗೆ ಕಳೆಯುವ ಒಡಹುಟ್ಟಿದವರ ನಡುವೆ ಸ್ಪರ್ಧೆಗಳು, ವಾದಗಳು ಮತ್ತು ಜಗಳಗಳು ನಿರಂತರ. ಇವೆಲ್ಲದರ ಜೊತೆಗೆ ಅಮೂಲ್ಯವಾದ ಅನುಭವಗಳನ್ನು ಹೊಂದಿರುತ್ತೇವೆ. ಅಲ್ಲದೇ ಅವರಿಲ್ಲದ ಬದುಕನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ. ಎಲ್ಲ ವಯೋಮಾನದ ಜನರು ಕೂಡ ಈ ಮಾತನ್ನು ಒಪ್ಪುತ್ತಾರೆ. ಎಷ್ಟೇ ವಯಸ್ಸಾಗಲಿ ಅಥವಾ ಎಷ್ಟೇ ಬ್ಯುಸಿ ಇರಲಿ, ನಿಮ್ಮ ಒಡ ಹುಟ್ಟಿದವರ ಜೊತೆಗಿದ್ದಾಗ ಅದೇ ಬಾಲ್ಯ ಮರಳುವುದು ಸುಳ್ಳಲ್ಲ. ಒಡಹುಟ್ಟಿದವರ ಈ ಬಂಧವನ್ನು ಆಚರಿಸಲು ಇಂದು ಸುದಿನ. ಕಾರಣ ಏಪ್ರಿಲ್​ 10 ಒಡಹುಟ್ಟಿದವರ ದಿನ ಎಂದು ಪರಿಗಣಿಸಲಾಗಿದೆ.

ಒಡಹುಟ್ಟಿದವರ ಬಂಧ
ಒಡಹುಟ್ಟಿದವರ ಬಂಧ

ಒಡಹುಟ್ಟಿದವರ ನೆನಪಿನಾರ್ಥ ಆಚರಣೆ: ತಮ್ಮ ಗತಿಸಿದ ಒಡಹುಟ್ಟಿದವರ ನೆನಪಿನ ಗೌರವರ್ಥವಾಗಿ 1995ರಲ್ಲಿ ನ್ಯೂಯಾರ್ಕ್​ನ ಕ್ಲೌಡಿಯ ಇವರ್ಟ್​ ಈ ದಿನವನ್ನು ಸ್ಥಾಪಿಸಿದರು. ಪ್ರತ್ಯೇಕ ಅಪಘಾತವೊಂದರಲ್ಲಿ ಕ್ಲೌಡಿಯ ತಮ್ಮ ಒಡ ಹುಟ್ಟಿದವರಾದ ಅಲನ್​ ಮತ್ತು ಲಿಸೆಟ್ಟೆ ಅವರನ್ನು ಕಳೆದುಕೊಂಡರು. ಅವರ ನೆನಪಿನಲ್ಲೇ ಈ ದಿನವನ್ನು ಆಚರಿಸಲಾಗುತ್ತದೆ. ಜೊತೆಗೆ ಏಪ್ರಿಲ್​ 10 ಕ್ಲಾಡಿಯಾ ಸಹೋದರಿ ಲಿಸ್ಲೆಟ್​ ಹುಟ್ಟು ಹಬ್ಬ ಕೂಡ.

ಒಡಹುಟ್ಟಿದವರ ಬಂಧ
ಒಡಹುಟ್ಟಿದವರ ಬಂಧ

2023ರಲ್ಲಿ ಈ ಒಡ ಹುಟ್ಟಿದವರ ದಿನವನ್ನು ಒಡಹುಟ್ಟಿದವರ ಶಕ್ತಿ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಈ ಘೋಷವಾಕ್ಯದ ಮೂಲಕ ಒಡಹುಟ್ಟಿದವರ ನಡುವಿನ ಸಂಬಂಧವನ್ನು ಇದು ಪ್ರತಿ ಬಿಂಬಿಸುತ್ತದೆ. ಜೊತೆಗೆ ಈ ಬಲವನ್ನು ಪ್ರಶಂಸೆ ಮಾಡಬೇಕು ಎಂಬುದನ್ನು ಇದು ತಿಳಿಸುತ್ತದೆ. ಒಡಹುಟ್ಟಿದವರ ದಿನವನ್ನು ಆಚರಣೆಗೆ ತಂದ ಮೂರು ವರ್ಷದ ಬಳಿಕ ಇದಕ್ಕೆ ಹೆಚ್ಚಿನ ಮಾನ್ಯತೆ ದೊರಕಿತು. ಅಮೆರಿಕದ ಅಂದಿನ ಅಧ್ಯಕ್ಷರಾಗಿದ್ದ ಬಿಲ್​ ಕ್ಲಿಂಟನ್ 39 ರಾಜ್ಯಗಳಲ್ಲಿ ಇದನ್ನು ವಾರ್ಷಿಕ ದಿನಾಚರಣೆಗೆ ಮುಂದಾದರು. ಇದಾದ ಬಳಿಕ ಜಾಗತಿಕವಾಗಿ ಪ್ರತಿವರ್ಷ ಏಪ್ರಿಲ್​ 10ರಂದು ಒಡಹುಟ್ಟಿದವರ ದಿನ ಆಚರಿಸಲಾಯಿತು.

ಒಡಹುಟ್ಟಿದವರ ಬಂಧ
ಒಡಹುಟ್ಟಿದವರ ಬಂಧ

ಪ್ರೀತಿ ವ್ಯಕ್ತಪಡಿಸಲು ಅವಕಾಶ: ಒಡಹುಟ್ಟಿದವರ ದಿನವು ಒಡಹುಟ್ಟಿದವರ ನಡುವಿನ ಅನನ್ಯ ಬಂಧ ಆಚರಿಸಲಾಗುತ್ತದೆ. ಈ ದಿನ ಜೀವನದಲ್ಲಿ ಒಡಹುಟ್ಟಿದವರ ಪ್ರಾಮುಖ್ಯತೆ ಎತ್ತಿ ತೋರಿಸುತ್ತದೆ. ಈ ದಿನ ಸಹೋದರ ಸಹೋದರಿಯರಿಗೆ ಪ್ರೀತಿ, ಕೃತಜ್ಞತೆ ಮತ್ತು ಮೆಚ್ಚುಗೆ ವ್ಯಕ್ತಪಡಿಸಲು ಇದು ಒಂದು ಅವಕಾಶ. ನಾವು ಅವರೊಂದಿಗೆ ಹಂಚಿಕೊಳ್ಳುವ ಬಲವಾದ ಬಂಧಗಳನ್ನು ಪ್ರತಿಬಿಂಬಿಸಲು ಮತ್ತು ಕುಟುಂಬಗಳ ನಡುವೆ ಬಲವಾದ ಮತ್ತು ಆರೋಗ್ಯಕರ ಸಂಬಂಧಗಳನ್ನು ಪೋಷಿಸಲು ದಿನವು ನಮಗೆ ಸಹಾಯ ಮಾಡುತ್ತದೆ.

ಒಡಹುಟ್ಟಿದವರ ಪರಿಪೂರ್ಣತೆ, ಬೆಂಬಲ ಮತ್ತು ಜೀವನದ ಅರ್ಥೈಸಿಕೊಳ್ಳುವಿಕೆಯ ಆಲೋಚನೆ ನೀಡುತ್ತದೆ. ಜೊತೆಗೆ ಈ ದಿನ ಒಡ ಹುಟ್ಟಿದವರ ನಡುವೆ ಇರುವ ಜಗಳ ಮತ್ತು ಇನ್ನಿತರ ವಿಷಯಗಳ ಸರಿಮಾಡಿಕೊಳ್ಳಲು ಉತ್ತಮ ದಿನವಾಗಿದೆ. ಜೊತೆಗೆ ಇದು ಸಂಬಂಧದ ಮೌಲ್ಯ ಮತ್ತು ಅದನ್ನು ಸಂಭ್ರಮಿಸುವ ದಿನವಾಗಿದೆ. ನಮ್ಮ ನಡುವಿನ ಭಿನ್ನತೆ ಹೊಡೆದೊಡಿಸಿ, ಕ್ಷಮೆ, ಅರ್ಥೈಸಿಕೊಳ್ಳುವಿಕೆ ಮತ್ತು ಸಕಾರಾತ್ಮಕ ಸಂಬಂಧ ವೃದ್ಧಿಗೆ ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ: 3ಗಂಟೆಗಿಂತ ಹೆಚ್ಚು ಸಮಯ ಮೊಬೈಲ್​ ವೀಕ್ಷಣೆ.. ಹದಿ ಹರೆಯದ ಮಕ್ಕಳನ್ನು ಕಾಡುತ್ತದೆ ಬೆನ್ನು ನೋವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.