ETV Bharat / sukhibhava

ಪೂರಕಗಳಿಂದ ಆರೋಗ್ಯ ಪ್ರಯೋಜನವಿಲ್ಲ, ಹಣ್ಣುಗಳನ್ನು ಸೇವಿಸಿ: ವಿಜ್ಞಾನಿಗಳ ಕರೆ

ಜಾಹೀರಾತುಗಳು, ಮಾರುಕಟ್ಟೆಯ ತಂತ್ರಗಾರಿಕೆಗಳು ಪೂರಕಗಳು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ಎಂದು ಬಿಂಬಿಸುತ್ತವೆ ಅಷ್ಟೇ.

supplements-have-no-health-benefits-eat-fruit-instead

author img

By

Published : May 30, 2023, 10:52 AM IST

ಲಂಡನ್​: ಆರೋಗ್ಯ ವೃದ್ಧಿಗೆ ಸಹಾಯವಾಗಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಪೂರಕಗಳು ಯಾವುದೇ ಆರೋಗ್ಯ ಪ್ರಯೋಜನವನ್ನು ನೀಡುವುದಿಲ್ಲ. ಇದು ಔಷಧ ಕಂಪನಿಗಳಿಂದ ಹಣ ಮಾಡುವ ಯೋಜನೆ ಅಷ್ಟೇ ಎಂದು ಯುಕೆ ವಿಜ್ಞಾನಿಗಳು ತಿಳಿಸಿದ್ದಾರೆ. ಜನರು ಇಂತಹ ಪೂರಕಗಳಿಗೆ ಬದಲಾಗಿ ನಿಜವಾದ ಹಣ್ಣು-ಆಹಾರಗಳನ್ನು ತಿನ್ನುವುದರಿಂದ ಆರೋಗ್ಯ ಪ್ರಯೋಜನ ಪಡೆಯಬಹುದು ಎಂದು ಲಂಡನ್​ನ ಕಿಂಗ್​ ಕಾಲೇಜ್​ನ ಜೆನಿಟಿಕ್​ ಎಪಿಟೆಮಿಯೊಲಾಜಿ ತಜ್ಞ ಟಿಮ್​ ಸ್ಪೆಕ್ಟರ್​​ ತಿಳಿಸಿದ್ದಾರೆ ಎಂದು ಡೈಲಿ ಮೇಲ್​ ವರದಿ ಮಾಡಿದೆ.

ಬಹುತೇಕ ಪೂರಕಗಳು ಚೀನಿ ಫ್ಯಾಕ್ಟರಿಗಳಿಂದ ತಯಾರಾಗಿರುತ್ತದೆ. ಇವು ಯಾವುದೇ ಕಾರಣಕ್ಕೂ ಕೆಲಸ ಮಾಡುವುದಿಲ್ಲ. ಈ ಪೂರಕಗಳನ್ನು ಒಂದೇ ಕಂಪನಿ ಉತ್ಪಾದಿಸುತ್ತಿದೆ. ಭವಿಷ್ಯದಲ್ಲಿ ಅವುಗಳು ದೈತ್ಯ ಆಹಾರ ಕಂಪನಿಗಳಾಗಲಿವೆ ಎಂದು ಸೆಕ್ಟರ್​ ಹೇಳಿದರು.

ಬಜೆಟ್​ ದೊಡ್ಡದಿದೆ. ಅವರು ಸಾವಯವ ಪೂರಕಗಳನ್ನು ತಯಾರಿಸುವಂತಹ ಕುಶಲಕರ್ಮಿಗಳಲ್ಲ. ಅವರು ಚೀನಾದಲ್ಲಿ ದೊಡ್ಡ ಫ್ಯಾಕ್ಟರಿ ಮಾಡಿದ್ದು, ಇದರ ಮೇಲೆ ನಿಮಗೆ ಯಾವುದೇ ನಿಯಂತ್ರಣವಿಲ್ಲ. ಶೇ 99 ರಷ್ಟು ಪೂರಕಗಳು ಕೆಲಸ ಮಾಡುವುದಿಲ್ಲ ಎಂದಿದ್ದಾರೆ.

ಪೂರಕಗಳಿಗೆ ನಾವು ಹಾಕುವ ಹಣವನ್ನು ನಿಜವಾದ ಆಹಾರಗಳಿಗೆ ಹಾಕಬೇಕಿದೆ. ಮಾರುಕಟ್ಟೆಯಲ್ಲಿರುವ ಪೂರಕದಲ್ಲಿ ಪ್ರಯೋಜನ ಹೊಂದಿರುವ ಏಕೈಕ ಪೂರಕ ಎಂದರೆ ಅದು ವೀಗನ್​ಗಳಿಗೆ ಇರುವ ಬಿ 12. ವೀಗನ್​ಗಳು (ಹಾಲಿನ ಉತ್ಪನ್ನವನ್ನು ಸೇವಿಸದವರು) ಹೆಚ್ಚಿನ ಮಟ್ಟದ ಕಬ್ಬಿಣ- ಸಮೃದ್ಧ ಆಹಾರ ಸೇವನೆ ಮಾಡದೇ ಇರುವುದರಿಂದ ಅವರಿಗೆ ಇದು ಲಾಭವಾಗುತ್ತದೆ. ಇದೇ ವೇಳೆ ಎಲ್ಲಾ ಅನಾರೋಗ್ಯಕರ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅವುಗಳ ಆಯ್ಕೆ ಕುರಿತು ಶಿಕ್ಷಣ ನೀಡಬೇಕಿದೆ.

ನಿಜವಾದ ಆಹಾರಗಳು ಬಡವರ ಮತ್ತು ನಮ್ಮ ಜೀವಿತಾವಧಿಯನ್ನು ಗಮನಾರ್ಹವಾಗಿ ಹೆಚ್ಚಳ ಮಾಡುತ್ತದೆ. ಸಸ್ಯಾಧರಿತ ಆಹಾರಗಳು ಹೆಚ್ಚು ಪ್ರಯೋಜನ ನೀಡುತ್ತದೆ. ಮಾಂಸಹಾರ ಸೇವನೆ ಮಾಡದಿರುವುದು ಹೆಚ್ಚು ಪ್ರಯೋಜನ ನೀಡುತ್ತದೆ ಎಂದು ಹೇಳುತ್ತಾರೆ.

ಪೂರಕಗಳು ಎಂದರೆ?: ಅಮೆರಿಕ ಸೇರಿದಂತೆ ಜಗತ್ತಿನೆಲ್ಲೆಡೆ ವಯಸ್ಕರು ಮತ್ತು ಮಕ್ಕಳು ತಮ್ಮ ಆಹಾರ ಪದ್ಧತಿ ಜೊತೆಗೆ ವಿಟಮಿನ್​ ಮತ್ತು ಪೂರಕಗಳನ್ನು ಸೇವಿಸುತ್ತಿದ್ದಾರೆ. ಆಹಾರ ಪೂರಕಗಳು ಮಾತ್ರೆ, ಪುಡಿ ಅಥವಾ ಕ್ಯಾಪ್ಸುಲ್​, ಗಮ್ಮಿ ರೂಪದಲ್ಲಿ ಸೇವಿಸಬಹುದು. ಒಟ್ಟಾರೆ ಆರೋಗ್ಯ ಸುಧಾರಣೆಗಾಗಿ ಖನಿಜ, ಕಿಣ್ವ, ಕ್ಯಾಲ್ಸಿಯಂ, ವಿಟಮಿನ್​ ಸಿ, ವಿಟಮಿನ್​ ಡಿ ಸೇರಿದಂತೆ ಹಲವು ಅಂಶಗಳು ಲಭ್ಯವಿರುವ ಪೂರಕಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಕೆಲವು ವಿಟಮಿನ್​ಗಳ ಕೊರತೆ ಹೊಂದಿರುವವರು ಅಥವಾ ಆರೋಗ್ಯ ಸುಧಾರಣೆ ಉದ್ದೇಶದಿಂದಾಗಿ ಜನರು ಇಂತಹ ಪೂರಕಗಳನ್ನು ಆಹಾರದ ಜೊತೆಗೆ ಹೆಚ್ಚುವರಿಯಾಗಿ ಬಳಕೆ ಮಾಡುತ್ತಾರೆ.

ಆರೋಗ್ಯ ಪೂರಕಗಳು ಭಾರತದಲ್ಲೂ ತನ್ನ ಅಧಿಪತ್ಯ ಸಾಧಿಸಿವೆ. ಮಕ್ಕಳು, ವಯಸ್ಕರು ಹಾಲಿನ ಜೊತೆ ಸೇವಿಸುವ ಪೂರಕಗಳು ಹೆಚ್ಚು ಜನಪ್ರಿಯ. ಪೂರಕಗಳ ಗುಣಮಟ್ಟ ಮತ್ತು ಸುರಕ್ಷತೆ ಬಗ್ಗೆ ಹೆಚ್ಚಿನ ಚರ್ಚೆ ಸದಾ ನಡೆಯುತ್ತದೆ. ಆಹಾರ ಸುರಕ್ಷತೆ ಮತ್ತು ಮಾನದಂಡಗಳ ನಿಯಮಗಳನ್ನು ಅನುಸರಿಸದ ಹೆಚ್ಚಿನ ಆರೋಗ್ಯ ಪೂರಕಗಳು ಮಾರುಕಟ್ಟೆಯಲ್ಲಿ ಕೂಡ ಲಭ್ಯವಾಗುತ್ತಿದ್ದು, ಭಾರತೀಯ ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರ ಆಗಿಂದಾಗ್ಗೆ ಪರಿಶೀಲನೆ ನಡೆಸುತ್ತಿರುತ್ತದೆ.

ಇದನ್ನೂ ಓದಿ: ನಿಮ್ಮ ದೇಹ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತವೆ ಈ ಸಿಹಿಯಾದ ಹಣ್ಣುಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.