ನವದೆಹಲಿ: ಶಿಶುಗಳು ತಮ್ಮ ತಾಯಿಯ ಗರ್ಭದಲ್ಲಿರುವಾಗಲೇ 500 ಪದಗಳನ್ನು ಕಲಿಯಬಹುದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಅಂಗಸಂಸ್ಥೆ ಹೇಳಿಕೊಂಡಿದೆ. ಇದರಿಂದ ಗರ್ಭಿಣಿಯರು ಶಿಶುಗಳಲ್ಲಿ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಕಲಿಸಲು 'ಗರ್ಭ ಸಂಸ್ಕಾರ' ಅಭಿಯಾನವನ್ನು ನಡೆಸಲು ಯೋಜಿಸಲಾಗಿದೆ.
ಸಂವರ್ಧಿನಿ ನ್ಯಾಸ್ ಸಂಸ್ಥೆಯಿಂದ ವಿನೂತನ ಕಾರ್ಯಕ್ರಮ: ಆರ್‌ಎಸ್‌ಎಸ್‌ನ ಅಂಗಸಂಸ್ಥೆ ಸಂವರ್ಧಿನಿ ನ್ಯಾಸ್‌ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮಾಧುರಿ ಮರಾಠೆ ಅವರು ಸೋಮವಾರ ಗರ್ಭಿಣಿಯರಿಗಾಗಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಶಿಶುಗಳು ತಮ್ಮ ಗರ್ಭದಲ್ಲಿರುವಾಗಲೇ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಕಲಿಸಲಾಗುವುದು ಎಂದು ಅವರು ಹೇಳಿದರು. ಈ 'ಗರ್ಭ ಸಂಸ್ಕಾರ' ಅಭಿಯಾನದ ಮೂಲಕ ಆರ್‌ಎಸ್‌ಎಸ್ ಹೊಸ ಕಲ್ಪನೆಯತ್ತ ಕೊಂಡೊಯ್ದಿದೆ.
'ಗರ್ಭ ಸಂಸ್ಕಾರ' ಅಭಿಯಾನ ಉದ್ದೇಶವೇನು?: ಈ ಕಾರ್ಯಕ್ರಮವು, ಗರ್ಭಾವಸ್ಥೆಯಲ್ಲಿರುವ ಶಿಶುಗಳಿಗೆ ಎರಡು ವರ್ಷವಾಗುವರೆಗೆ ಪ್ರಾರಂಭವಾಗಲಿದೆ ಎಂದು ಮಾಧುರಿ ಮರಾಠೆ ಹೇಳಿದರು. ರಾಮಾಯಣದ ಗೀತಾ ಶ್ಲೋಕಗಳು ಮತ್ತು ಭಾರತೀಯ ಕಾವ್ಯದ ಚತುರ್ಭುಜ ಪದ್ಯಗಳ ಪಠಣ ಮಾಡುವುದನ್ನು ಶಿಶುಗಳಿಗೆ ಕೇಳಿಸಲಾಗುತ್ತದೆ. ಶಿಶುಗಳು ಗರ್ಭದಿಂದಲೇ ಕಂಠಪಾಠ ಮಾಡಲು ಪ್ರಾರಂಭಿಸಬಹುದು ಎಂದು ಅವರು ನಂಬುತ್ತಾರೆ. ಕಾರ್ಯಕ್ರಮದಲ್ಲಿ ಯೋಗಾಭ್ಯಾಸವನ್ನು ಸಹ ಒಳಗೊಂಡಿರುತ್ತದೆ. ಸ್ತ್ರೀರೋಗ ತಜ್ಞರು, ಆಯುರ್ವೇದ ವೈದ್ಯರು, ಯೋಗ ತರಬೇತುದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿಯಾನವನ್ನು ರೂಪಿಸಲಾಗಿದೆ ಎಂದರು.
ಸಾವಿರ ಮಹಿಳೆಯರನ್ನು ತಲುಪುವ ಯೋಜನೆ: ಈ ಅಭಿಯಾನದ ನಿಮಿತ್ತ ಸಂವರ್ಧಿನಿ ನ್ಯಾಸ್ ಅವರು ಭಾನುವಾರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕಾರ್ಯಾಗಾರವನ್ನು ನಡೆಸಿದರು. ಕಾರ್ಯಾಗಾರದಲ್ಲಿ ಎಐಐಎಂಎಸ್ ದೆಹಲಿಯವರೂ ಸೇರಿದಂತೆ ಅನೇಕ ಸ್ತ್ರೀರೋಗ ತಜ್ಞರು ಭಾಗವಹಿಸಿದ್ದರು. ಆರ್‌ಎಸ್‌ಎಸ್ ಅಂಗಸಂಸ್ಥೆಯು ಈ ವಿಶಿಷ್ಟ ಅಭಿಯಾನದ ಅಡಿಯಲ್ಲಿ ಕನಿಷ್ಠ 1,000 ಮಹಿಳೆಯರನ್ನು ತಲುಪಲು ಯೋಜಿಸಿದೆ ಎಂದು ಎಂದು ಮರಾಠೆ ಹೇಳಿದರು.
ಸಂವರ್ಧಿನಿ ನ್ಯಾಸ್ RSS ಮಹಿಳಾ ಅಂಗವಾದ ರಾಷ್ಟ್ರ ಸೇವಿಕಾ ಸಮಿತಿಯ ಒಂದು ವಿಭಾಗವಾಗಿದೆ. ಆರ್‌ಎಸ್‌ಎಸ್ ಹಿಂದೂ ಬಲಪಂಥೀಯ ಸಂಘಟನೆ ಮತ್ತು ಆಡಳಿತಾರೂಢ ಬಿಜೆಪಿಯ ಸೈದ್ಧಾಂತಿಕ ಪೋಷಕ ಸಂಸ್ಥೆಯಾಗಿದೆ.
ಗರ್ಭದಲ್ಲಿಯೇ ತರಬೇತಿ: ಪ್ರಾಪಂಚಿಕ ಅರಿವು ಇರದ ಆ ಮಗುವಿಗೆ ಗರ್ಭದಲ್ಲಿಯೇ ಸಂಸ್ಕಾರ ನೀಡಲಾಗುತ್ತದೆ. ಆಯುರ್ವೇದದ ಮೂಲಕ ಮಗುವಿನ ಆರೋಗ್ಯಯುತ ಬೆಳವಣಿಗೆಗೆ ಮತ್ತು ಜೀವನಕ್ಕೆ ಬೇಕಾದ ಉತ್ತಮಗುಣಗಳನ್ನು ಗರ್ಭದಲ್ಲಿಯೇ ತರಬೇತಿ ಕೊಡಲಾಗುತ್ತದೆ. ಗರ್ಭ ಸಂಸ್ಕಾರವು ಗರ್ಭಾಶಯದಲ್ಲೇ ಮಗುವಿನ ಪಾತ್ರ ಹಾಗೂ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ನಂಬಿಕೆಯಿದೆ. ಯೋಗ, ಮಂತ್ರ ಪಠಣ, ಧ್ಯಾನ, ಸಂಗೀತ ಆಲಿಸುವಿಕೆ ಇತ್ಯಾದಿಗಳೊಂದಿಗೆ ಗರ್ಭದೊಳಗಿರುವ ಮಗುವಿಗೆ ಗರ್ಭ ಸಂಸ್ಕಾರ ಒದಗಿಸಲಾಗುತ್ತದೆ. ಗರ್ಭ ಸಂಸ್ಕಾರ ತಾಯಿಯ ಗರ್ಭದಲ್ಲಿರುವ ಮಗುವಿಗೆ ಉತ್ತಮ ವಿಷಯಗಳನ್ನು ಕಲಿಸುವ ಮಾರ್ಗವಾಗಿದೆ.
ಆಯುರ್ವೇದ ಶಾಸ್ತ್ರದಲ್ಲಿ ಗರ್ಭ ಸಂಸ್ಕಾರವನ್ನು ‘ಸುಪ್ರಜಾ ಜನಂʼ ಎಂದು ಹೇಳಲಾಗುತ್ತದೆ. ಗರ್ಭಿಣಿಯರು ಮನಸ್ಸನ್ನು ಭಾವನಾತ್ಮಕ, ಆಧ್ಯಾತ್ಮಿಕ ಮತ್ತು ದೈಹಿಕವಾಗಿ ಉತ್ತಮವಾಗಿರಿಸಿಕೊಳ್ಳಲು ಗರ್ಭ ಸಂಸ್ಕಾರ ಕಾರ್ಯಕ್ರಮ ಮಾಡಲಾಗುತ್ತದೆ. ಗರ್ಭದಲ್ಲಿರುವ ಮಗುವಿನ ಮಿದುಳು ಸಾಕಷ್ಟು ಬೆಳವಣಿಗೆ ಆಗಿರುತ್ತದೆ. ಈ ಸಂದರ್ಭದಲ್ಲಿ ತಾಯಿಯ ಚಟುವಟಿಕೆಗಳು ಮಗುವಿನ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ
ಇದನ್ನೂ ಓದಿ: ಫ್ರೈಡ್ ಚಿಪ್ಸ್ಗೆ ಪರ್ಯಾಯವಾಗಿ ಸೇವಿಸಿ ಈ ಆರೋಗ್ಯಕರ ಸ್ನಾಕ್ಸ್