ETV Bharat / sukhibhava

ರಣ ಬಿಸಿಲಿನಿಂದ ತ್ವಚೆ ಆರೈಕೆ ಮಾಡುವ ಮುನ್ನ ಈ ಅಂಶ ನೆನಪಿರಲಿ..

author img

By

Published : May 22, 2023, 5:16 PM IST

ಸೂರ್ಯನ ತಾಪ ಮತ್ತು ಯುವಿ ಕಿರಣಗಳು ಬೇಸಿಗೆಯಲ್ಲಿ ತ್ವಚೆಗೆ ಹೆಚ್ಚಿನ ಹಾನಿ ಮಾಡುತ್ತದೆ. ಸೂಕ್ಷ್ಮ ತ್ವಚೆ ಹೊಂದಿರುವವರು ಇದರಿಂದ ಗಂಭೀರ ಸಮಸ್ಯೆಗೆ ಒಳಗಾಗುತ್ತಾರೆ.

Remember this before taking care of your skin from the sun.

ಹೈದರಾಬಾದ್​: ಮತ್ತೆ ಬಿಸಿಲಿನ ತಾಪ ದೇಶದಲ್ಲಿ ಏರುಗತಿ ಕಾಣುತ್ತಿದ್ದು, ಈ ಸಂಬಂಧ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಸುಡು ಬಿಸಿಲಿನ ಹಿನ್ನೆಲೆ ಜನರು ತಮ್ಮ ತ್ವಚೆ ಬಗ್ಗೆ ಕಾಳಜಿ ವಹಿಸುವುದು ಅವಶ್ಯವಾಗುತ್ತದೆ. ಇಲ್ಲದೆ ಹೋದಲ್ಲಿ, ಟ್ಯಾನಿಂಗ್​, ಸನ್​ ಬರ್ನ್​​, ಒಣ ತ್ವಚೆ, ಕಪ್ಪು ವರ್ತುಲ, ದದ್ದು, ಫಂಗಲ್​ ಸೋಂಕಿನಂತಹ ಸಮಸ್ಯೆಗೆ ಕಾರಣವಾಗುತ್ತದೆ. ಈ ಸಮಯದಲ್ಲಿ ಅನೇಕ ಕಾರಣದಿಂದ ಪುರುಷರು ಮತ್ತು ಮಹಿಳೆಯರು ಮನೆಯಿಂದ ಹೊರಗೆ ಇರಬೇಕಾಗುತ್ತದೆ. ಈ ಹೊತ್ತಿನಲ್ಲಿ ಈ ಸಮಸ್ಯೆಗಳಿಂದ ಪರಿಹಾರವನ್ನು ಅವರು ಕಾಣಬೇಕಾಗುತ್ತದೆ. ಇದೇ ಕಾರಣಕ್ಕೆ ಡರ್ಮಾಟಾಲಾಜಿಸ್ಟ್​ (ಚರ್ಮ ರೋಗ ತಜ್ಞರು) ಕೆಲವು ಸರಳ ತ್ವಚೆಯ ಕಾಳಜಿ ವಹಿಸಿ, ಮುನ್ನೆಚ್ಚರಿಕೆ ಆರಂಭಿಸಬೇಕು ಎಂದು ಸಲಹೆ ನೀಡುತ್ತಾರೆ.

ನವದೆಹಲಿಯ ಚರ್ಮ ರೋಗ ತಜ್ಞೆ ಡಾ ಲವಿನ ಬವ ಈ ಕುರಿತು ಮಾಹಿತಿ ನೀಡಿದ್ದಾರೆ. ಸೂರ್ಯನ ತಾಪ ಮತ್ತು ಯುವಿ ಕಿರಣಗಳು ಬೇಸಿಗೆಯಲ್ಲಿ ತ್ವಚೆಗೆ ಹೆಚ್ಚಿನ ಹಾನಿ ಮಾಡುತ್ತವೆ. ಸೂಕ್ಷ್ಮ ತ್ವಚೆ ಹೊಂದಿರುವವರು ಇದರಿಂದ ಗಂಭೀರ ಸಮಸ್ಯೆಗೆ ಒಳಗಾಗುತ್ತಾರೆ. ಎಲ್ಲಾ ವರ್ಗದ ತ್ವಚೆ ಹೊಂದಿರುವವರು ಈ ಸಮಯದಲ್ಲಿ ಹೆಚ್ಚಿನ ತ್ವಚೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎನ್ನುತ್ತಾರೆ. ಅನೇಕ ಮಂದಿಗೆ ಮಾಹಿತಿ ಕೊರತೆ ಅಥವಾ ನಿರ್ಲಕ್ಷ್ಯದಿಂದ ಅವರು ತಮ್ಮ ತ್ವಚೆಯ ರಕ್ಷಣೆಗೆ ಮುಂದಾಗುವುದಿಲ್ಲ ಎಂದಿದ್ದಾರೆ.

ಇನ್ನು ಇಂತಹ ಸಮಸ್ಯೆಗಳಿಗೆ ಸ್ವ ಆರೈಕೆಗಳು ಗಾಯ, ಅಲರ್ಜಿ ಅಥವಾ ಇನ್ನಿತರ ಸಮಸ್ಯೆಗೂ ಕಾರಣವಾಗುತ್ತದೆ. ಇದು ತ್ವಚೆಯಲ್ಲಿ ಮಾಸದ ಕಲೆಗೆ ಕಾರಣವಾಗುತ್ತದೆ. ಸೂರ್ಯನ ಪ್ರಖರ ಬಿಸಿಲು ಮತ್ತು ಯುವಿ ಕಿರಿಣದಿಂದ ತ್ವಚೆ ಹೆಚ್ಚು ಹಾನಿಯಾಗುತ್ತದೆ. ಈ ವೇಳೆ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಅವಶ್ಯವಾಗುತ್ತದೆ.

ಈ ಋತುಮಾನದಲ್ಲಿ ಹೆಚ್ಚಾಗಿ ಕಂಡು ಬರುವ ಸಾಮಾನ್ಯ ಸಮಸ್ಯೆ ಎಂದರೆ ಅದು ಮಾಶ್ಚರೈಸರ್​ ಕೊರತೆ. ಇದು ಈ ತ್ವಚೆಯನ್ನು ಶುಷ್ಕಗೊಳಿಸಿ, ತ್ವಚೆಗೆ ಜೀವಕಾಂತಿ ಇಲ್ಲದಂತೆ ಮಾಡುತ್ತದೆ. ಇದರ ಹೊರತಾಗಿ ಕಾಡುವ ಮತ್ತೊಂದು ಸಮಸ್ಯ ಎಂದರೆ ಡಾರ್ಕ್​ ಸ್ಪಾಟ್​ (ಕಪ್ಪು ಕಲೆ). ಹೆಚ್ಚು ಬೆವರುವಿಕೆ, ಮಾಲಿನ್ಯಗಳು ಶುಷ್ಕ ತ್ವಚೆ, ಮೊಡವೆ ಮತ್ತು ಫಂಗಲ್​ ಸೋಂಕಿಗೆ ಕಾರಣವಾಗುತ್ತದೆ.

ಸರಿಯಾದ ತ್ವಚೆ ಕಾಳಜಿ ತೆಗೆದುಕೊಳ್ಳುವುದು ಆರೋಗ್ಯಕರ ತ್ವಚೆಗೆ ಅತಿ ಮುಖ್ಯವಾಗಿದೆ. ತ್ವಚೆಯ ಮಾಶ್ಚರೈಸರ್​ ಅನ್ನು ಕಾಪಾಡುವುದು ಮತ್ತು ನೇರವಾಗಿ ಸೂರ್ಯನಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕಿದೆ. ಈ ಸಂಬಂದ ಕೆಲವು ಮುನ್ನೆಚ್ಚರಿಕೆಯನ್ನು ಅವರು ನೀಡಿದ್ದಾರೆ.

  • ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯುವುದು ಉತ್ತಮ. ಇದು ದೇಹ ಮತ್ತು ಚರ್ಮವನ್ನು ಹೈಡ್ರೇಟ್​ ಆಗಿ ಇಡುತ್ತದೆ. ನೀರು ದೇಹದಲ್ಲಿನ ವಿಷಯವನ್ನು ಹೊರ ತೆಗೆಯಲು ಮತ್ತು ದೇಹ ನಿರ್ಜಲೀಕರಣದಿಂದ ಬಳಲದಂತೆ ನೋಡಿಕೊಳ್ಳುತ್ತದೆ. ನೀರಿನಾಂಶವಿರುವ ದ್ರವ, ಹಣ್ಣು ಮತ್ತು ತರಕಾರಿಗಳನ್ನು ಸೇವನೆ ಮಾಡುವುದು ಉತ್ತಮ,
  • ಎಸ್​ಪಿಎಫ್​ 30 ಮತ್ತು ಅದಕ್ಕಿಂತ ಹೆಚ್ಚಿನ ಸನ್​ಸ್ಕ್ರೀನ್​ ಅನ್ನು ಮನೆಯಿಂದ ಹೊರ ಹೋಗುವ ಮುನ್ನ ಹಚ್ಚಬೇಕು. ಕೇವಲ ಮುಖಕ್ಕೆ ಮಾತ್ರವಲ್ಲದೇ ಕೈ ಮತ್ತು ದೇಹ ಸೂರ್ಯನಿಗೆ ನೇರವಾಗಿ ಒಡ್ಡಿಕೊಳ್ಳುವ ಇತರೆ ಭಾಗಗಳಿಗೆ ಹಚ್ಚುವುದು ಉತ್ತಮ
  • ಸನ್​ ಸ್ಕ್ರೀನ್​ ಹಚ್ಚಿದ್ದರೂ ಛತ್ರಿ, ಕ್ಯಾಪ್​, ಸನ್​ ಗ್ಲಾಸ್​ ಅಥವಾ ಸ್ಕಾರ್ಫ್​ಗಳನ್ನು ಬಳಕೆ ಮಾಡುವ ಮೂಲಕ ಸೂರ್ಯನ ತಾಪದಿಂದ ತಪ್ಪಿಸಿಕೊಳ್ಳಿ.
  • ಮುಖವನ್ನು ತಣ್ಣೀರಿನಿಂದ ದಿನಕ್ಕೆ 2-3 ಬಾರಿ ಚೆನ್ನಾಗಿ ತೊಳೆಯಿರಿ.
  • ಬಿಸಿಲು ಹೆಚ್ಚಿದ್ದಾಗ ಈಜು ಬೇಡ. ಇದು ತ್ವಚೆ ಮೇಲೆ ಹಾನಿ ಮಾಡುತ್ತದೆ. ಬೆಳಗ್ಗೆ ಮತ್ತು ಸಂಜೆ ಈಜು ಉತ್ತಮ. ಈ ವೇಳೆ ವಾಟರ್​ಪ್ರೂಫ್​​ ಸನ್​ಸ್ಕ್ರೀನ್​ ಹಚ್ಚಿ.
  • ಪ್ರತಿನಿತ್ಯ ಮುಖಕ್ಕೆ ಮಾಶ್ಚರೈಸ್​ ಮಾಡಿ, ಮನೆಯಿಂದ ಹೊರಗೆ ಹೋಗುವವರು ಸಾಧ್ಯವಾದಷ್ಟು ಉದ್ದನೆಯ ಧಿರಿಸುಗಳನ್ನು ಧರಿಸಿ. ಇದು ಸೂರ್ಯನಿಂದ ನಿಮ್ಮನ್ನು ರಕ್ಷಣೆ ಮಾಡುತ್ತದೆ.

ಚರ್ಮದ ಸಮಸ್ಯೆ ಮತ್ತು ಚರ್ಮದ ಹಾನಿ ಅಥವಾ ಸೋಂಕು ಸೂರ್ಯನಿಂದ ಆಗುತ್ತದೆ. ಅನೇಕ ಮಂದಿ ವೈದ್ಯರನ್ನು ಸಂಪರ್ಕಿಸಿ, ಸ್ವತಃ ಚಿಕಿತ್ಸೆ ಪಡೆಯುತ್ತಾರೆ. ಮಾರುಕಟ್ಟೆಯಲ್ಲಿ ಅನೇಕ ಸ್ಕಿನ್​ ಕೇರ್​ ಕ್ರೀಮ್​ಗಳು ಲಭ್ಯವಿವೆ. ಆದರೆ, ಈ ಎಲ್ಲಾ ಕ್ರೀಮ್​ಗಳು ಪರಿಣಾಮಕಾರಿಯಲ್ಲ. ಇವು ಎಲ್ಲದಕ್ಕೂ ಪರಿಹಾರವಲ್ಲ. ವಿವಿಧ ಸಮಸ್ಯೆಗೆ ವಿವಿಧ ಕ್ರೀಮ್​ಗಳ ಅವಶ್ಯಕತೆ ಇದೆ. ಬಹಿತೇಕ ಕ್ರೀಮ್​ಗಳು ಸ್ಟಿರಾಯ್ಡ್​​​, ಆ್ಯಂಟಿಫಂಗಲ್​ ಮತ್ತು ಇತರೆ ಸಂಯೋಜನೆಯಿಂದ ಕೂಡಿದೆ. ಇವುಗಳನ್ನು ತಜ್ಞರ ಸಲಹೆ ಪಡೆದ ಹಚ್ಚಬೇಕು. ಇಲ್ಲವೇ ಸಮಸ್ಯೆ ಉಲ್ಬಣವಾಗುತ್ತದೆ. ಇದರ ಹೊರತಾಗಿ ಅನೇಕ ಮನೆಮದ್ದುಗಳು ಸಹಾಯ ಮಾಡುತ್ತವೆ.

ಇದನ್ನೂ ಓದಿ: ನಯವಾದ ಚರ್ಮಕ್ಕೆ ಬೇಕಿದೆ ಹಾಲಿನ ಪೋಷಣೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.