ETV Bharat / sukhibhava

ದೈಹಿಕ ಚಟುವಟಿಕೆಗಳು ರೋಗಗಳಿಂದ ದೂರವಿರಲು ಸಹಕಾರಿ - ಮಧುಮೇಹ ಮತ್ತು ಬೊಜ್ಜು ಸೇರಿದಂತೆ ಇತರ ಖಾಯಿಲೆಯಿಂದ ದೂರವಿರಲು ವ್ಯಾಯಾಮ

ಕೋವಿಡ್-19, ಸೋಮಾರಿತನದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯ ಪ್ರವೃತ್ತಿಯಿಂದಾಗಿ ಮಧುಮೇಹ ಮತ್ತು ಬೊಜ್ಜು ಸೇರಿದಂತೆ ಇತರ ಖಾಯಿಲೆಗಳು ಇತ್ತೀಚೆಗೆ ಎಲ್ಲರಲ್ಲಿ ಕಂಡು ಬರುತ್ತಿವೆ. ಇದನ್ನೆಲ್ಲಾ ಹೋಗಲಾಡಿಸಲು ನಿತ್ಯ ವ್ಯಾಯಾಮದಂತಹ ದೈಹಿಕ ಚಟುವಟಿಕೆಗಳನ್ನು ಮಾಡುವುದು ಅಗತ್ಯವಾಗಿದೆ.

ದೈಹಿಕ ಚಟುವಟಿಕೆಗಳು ರೋಗಗಳಿಂದ ದೂರವಿರಲು ಸಹಕಾರಿ

author img

By

Published : Feb 15, 2022, 9:46 PM IST

ದೈನಂದಿನ ದಿನಚರಿ ಅನುಸರಿಸುವುದು ನಿಜವಾಗಿಯೂ ಮುಖ್ಯವಾಗಿದೆ. ನೀವು ಆರೋಗ್ಯಕರವಾದ ಜೀವನ ಶೈಲಿಯನ್ನು ನಡೆಸಬೇಕು ಎಂದರೇ ದೈಹಿಕ ಚಟುವಟಿಕೆ ಅಗತ್ಯವಾಗಿದೆ. ನಮ್ಮ ದಿನಚರಿಯು ಹೆಚ್ಚು ಚಿಂತನಶೀಲವಾಗಿರುತ್ತದೆ, ನಾವು ನಿತ್ಯವೂ ಅವುಗಳ ಮೇಲೆ ಕಡಿಮೆ ಸಮಯ ಕಳೆಯುತ್ತೇವೆ. ಜೊತೆಗೆ, ದೇಹವು ವೇಗವಾಗಿ ಹೊಂದಿಕೊಳ್ಳುತ್ತದೆ. ಕೆಲವು ವಿಷಯಗಳು ಮಾನಸಿಕ ಮತ್ತು ದೈಹಿಕ ಆಯಾಸ ನಿವಾರಿಸಬಲ್ಲವು.

ನೀವು ತುಂಬಾ ದಣಿದಿದ್ದರೂ ಅದನ್ನು ಸುಧಾರಿಸಿಕೊಳ್ಳಲು ನಿಮಗೆ ಬೇಕಾಗಿರುವುದು ಅರ್ಧ ಗಂಟೆ ಮಾತ್ರ. ನೀವು ನಿತ್ಯ ದೈಹಿಕ ಚಟುವಟಿಕೆಯನ್ನು ಮಾಡುತ್ತಿದ್ದರೇ, ರಕ್ತ ಪರಿಚಲನೆ ಮತ್ತು ಹೃದಯದ ಕಾರ್ಯ ಸುಧಾರಿಸುತ್ತದೆ. ಇದರಿಂದ ನೀವು ದೇಹಕ್ಕೆ ಹೆಚ್ಚಿನ ಆಮ್ಲಜನಕದ ಹರಿವು ಒದಗಿಸುವುದಲ್ಲದೇ, ದೈನಂದಿನ ಚಿಂತೆಗಳಿಂದ ಮನಸ್ಸನ್ನು ಮುಕ್ತಗೊಳಿಸಬಹುದಾಗಿದೆ.

ವ್ಯಾಯಾಮ ಮಾಡುವುದರಿಂದ ಮನಸ್ಸನ್ನು ರಿಫ್ರೆಶ್ ಆಗಲಿದ್ದು, ನಿರಂತರ ಆಯಾಸದ ಕಡಿಮೆಯಾಗುತ್ತದೆ. ಅಲ್ಲದೇ ಇದು ಸಕಾರಾತ್ಮಕ ಭಾವನೆಗಳು ಮತ್ತು ಶಕ್ತಿಗೆ ಅವಕಾಶ ನೀಡುತ್ತದೆ. ಬಹುಶಃ ಈ ಕ್ಷಣಗಳಲ್ಲಿ ನೀವು ಸಾಧ್ಯವಾದಷ್ಟು ಕಡಿಮೆ ಆಯಾಸಗೊಳ್ಳಲು ನಿಮ್ಮ ಜೀವನದಲ್ಲಿ ಏನನ್ನು ಬದಲಾಯಿಸಬೇಕು ಎಂದು ಯೋಚಿಸಲು ಪ್ರಾರಂಭಿಸುತ್ತೀರಿ. ಇದಕ್ಕೆ ತಾಜಾ ಗಾಳಿಯಲ್ಲಿ ನಡೆಯಲು, ಸಂಜೆ ಮಲಗುವ ಮುನ್ನ ಮತ್ತು ಊಟದ ಸಮಯದಲ್ಲಿ ಸಮಯ ತೆಗೆದುಕೊಳ್ಳುವುದು ಸೂಕ್ತ.

ದೈಹಿಕ ಚಟುವಟಿಕೆಗಳಿಂದ ನಮ್ಮ ಚಯಾಪಚಯವು ಕ್ರಮೇಣ ನಿಧಾನಗೊಳ್ಳುತ್ತದೆ. ಅರೆನಿದ್ರೆ ಮತ್ತು ಆಲಸ್ಯದ ಭಾವನೆ ಹೋಗುತ್ತದೆ. ಸೇಬು, ದ್ವಿದಳ ಧಾನ್ಯ, ಸಿಟ್ರಸ್ ಹಣ್ಣುಗಳು ಮತ್ತು ದಾಳಿಂಬೆ ನಮ್ಮ ದೇಹಕ್ಕೆ ಉತ್ತಮ ಫೋಷಕಾಂಶಗಳನ್ನು ನೀಡುತ್ತವೆ. ಹಿಟ್ಟು ಮತ್ತು ಸಿಹಿಯಲ್ಲಿ "ವೇಗದ" ಕಾರ್ಬೋಹೈಡ್ರೇಟ್‌ಗಳಿವೆ. ನಿಮ್ಮ ಆಹಾರದಲ್ಲಿ ಕೆಂಪು ಬೀನ್ಸ್, ಅಣಬೆ ಮತ್ತು ಸಮುದ್ರಾಹಾರಗಳನ್ನು ಸೇವಿಸುವುದನ್ನು ಮರೆಯದಿರಿ. ಇದರಲ್ಲಿ ಬಹಳಷ್ಟು ಪ್ರೋಟೀನ್​​​​​​​​ಗಳಿವೆ ಮತ್ತು ಉಪಯುಕ್ತವಾದ ಆಮ್ಲಗಳು, ವಿಟಮಿನ್‌ಗಳು ಮತ್ತು ಖನಿಜಗಳ ಸಂಪೂರ್ಣ ಪಟ್ಟಿ ಇದೆ.

ಇದನ್ನೂ ಓದಿ: ದೂರದ ಸಂಬಂಧ - ವಿರಹ ವೇದನೆ: ವರ್ಚುಯಲ್ ವ್ಯಾಲೆಂಟೈನ್ಸ್ ಡೇ ಆಚರಣೆಗೆ ಇಲ್ಲಿದೆ ಟಿಪ್ಸ್​..

ಮಸಾಜ್, ಧ್ಯಾನ, ಅರೋಮಾಥೆರಪಿ ಇವು ಒತ್ತಡವನ್ನು ನಿವಾರಿಸುತ್ತವೆ. ವೃತ್ತಿಪರ ಆಕ್ಯುಪ್ರೆಶರ್ ಸಲೂನ್‌ಗೆ ಭೇಟಿ ನೀಡುವುದು ಒಳ್ಳೆಯದು, ಆದರೆ, ವಾರದ ದಿನಗಳಲ್ಲಿ ಇದು ಯಾವಾಗಲೂ ಸಾಧ್ಯವಿಲ್ಲ. ಈ ರೀತಿಯ ಸೇವೆಗಳಿಗೆ ಸಾಮಾನ್ಯವಾಗಿ ಸಾಕಷ್ಟು ವೆಚ್ಚವಾಗುತ್ತದೆ. ಆದರೆ, ಶಕ್ತಿಯನ್ನು ಪುನಃಸ್ಥಾಪಿಸಲು ನಾವೇ ಕೆಲವು ಸರಳ ಕುಶಲತೆಯನ್ನು ಮಾಡಬಹುದು.

ಪಾದಗಳು, ಕೈಗಳು, ತಲೆಯ ಹಿಂಭಾಗವನ್ನು ಮಸಾಜ್ ಮಾಡಿ. ಈ ಕಾರ್ಯವಿಧಾನವು ಸುಮಾರು ಹತ್ತು ನಿಮಿಷ ತೆಗೆದುಕೊಳ್ಳುತ್ತದೆ. ಆದರೆ, ಇದರಿಂದ ಆಯಾಸ ಕಡಿಮೆಯಾಗುತ್ತದೆ. ಮನೆಯಲ್ಲಿ ನಿಮ್ಮ ಪಾದಗಳಿಗೆ ಹೈಡ್ರೋಮಾಸೇಜ್ ಇದ್ದರೆ ಒಳ್ಳೆಯದು.

ಒಂದು ದಿನ ರಾತ್ರಿ ನೀವು ನಿದ್ದೆ ಮಾಡಿಲ್ಲ ಎಂದರೇ, ನಿಮ್ಮ ಕಣ್ಣುಗಳು ಉರಿಯುತ್ತಿರುತ್ತವೆ. ಆಗ ನೀವು ಸೌತೆಕಾಯಿಯನ್ನು 20 ನಿಮಿಷಗಳ ತನಕ ಕಣ್ಣಿನ ಮೇಲೆ ಇಟ್ಟುಕೊಂಡರೇ, ಇದರಿಂದ ಕಣ್ಣುಗಳ ಕೆಂಪು ಬಣ್ಣ ನಿವಾರಣೆಯಾಗುತ್ತದೆ. ಅಲ್ಲದೇ ಆರೋಗ್ಯಕರ ನೋಟಕ್ಕೆ ಮರಳಲು ಸಹಾಯ ಮಾಡುತ್ತದೆ.

ಮಾನವನ ದೇಹ ಅತ್ಯಂತ ಸಕ್ರಿಯ ಅಂಗಾಂಗಳೆಂದರೇ ಕೈ ಮತ್ತು ಕಾಲುಗಳು. ನಿಮ್ಮ ಪಾದಗಳನ್ನು ಬೆಚ್ಚಗಿನ ಕ್ರೀಮ್ ಅಥವಾ ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿದರೆ ಆಯಾಸ ಮಾಯವಾಗುತ್ತದೆ. ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವವರ ಕಣ್ಣು ಹೆಚ್ಚು ಆಯಾಸಕ್ಕೆ ಒಳಗಾಗಿರುತ್ತದೆ. ಆಗ ವಿಶ್ರಾಂತಿ ಪಡೆಯುವುದು ಒಳ್ಳೆಯದು. ಇನ್ನೂ ತಲೆನೋವು ಇರುವವರು ನಿಮ್ಮ ಕಣ್ಣುಗಳನ್ನು ಮುಚ್ಚಿ ನಿಮ್ಮ ಹೆಬ್ಬೆರಳಿನಿಂದ ಸುಮಾರು 30 ಸೆಕೆಂಡುಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ. ಇದರಿಂದ ನಿಮಗೆ ಆಹ್ಲಾದಕರ ವಿಶ್ರಾಂತಿ ದೊರೆಯುತ್ತದೆ.

ಸ್ನಾನ ಮಾಡುವ ಮೊದಲು, ನೀವು ಕೆಲವು ವ್ಯಾಯಾಮಗಳನ್ನು ಮಾಡಬಹುದಾಗಿದೆ. ಅವುಗಳೆಂದರೇ ಸ್ಕ್ವಾಟ್‌ಗಳು, ಜಿಗಿತಗಳು, ಪುಷ್-ಅಪ್‌ಗಳು ಇತರೇ ವ್ಯಾಯಾಮ ಮಾಡಬಹುದಾಗಿದೆ. ಇವನ್ನು ಮಾಡಿದ ಬಳಿಕ ಸ್ನಾನ ಮಾಡಿ ನಿಂಬೆ ರಸದಿಂದ ಮಾಡಿದ ಚಹಾವನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಚೈತನ್ಯ ಸಿಗುತ್ತದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.