ನವದೆಹಲಿ: 13 ವರ್ಷಕ್ಕಿಂತಲೂ ಮೊದಲೇ ಋತುಚಕ್ರಕ್ಕೆ ಒಳಗಾಗುವ ಹುಡುಗಿಯರಲ್ಲಿ ಟೈಪ್ -2 ಮಧುಮೇಹದ ಅಪಾಯ ಹೆಚ್ಚಿದೆ ಎಂದು ಅಮೆರಿಕನ್ ಸಂಶೋಧನೆ ತಿಳಿಸಿದೆ. 10 ವರ್ಷಕ್ಕಿಂತ ಮೊದಲೇ ಋತುಚಕ್ರಕ್ಕೆ ಒಳಗಾಗುವುದರಿಂದ ಅವರು 65 ವರ್ಷದಲ್ಲಿ ಮಧುಮೇಹ ಮತ್ತು ಪಾರ್ಶ್ವವಾಯುನಂತಹ ದುಪ್ಪಟ್ಟು ಅಪಾಯ ಹೊಂದಿರುತ್ತಾರೆ ಎಂದು ಅಧ್ಯಯನ ತಿಳಿಸಿದೆ.
ಈ ಸಂಶೋಧನೆಗಾಗಿ 20 ರಿಂದ 65 ವರ್ಷದ ನಡುವಿನ 17 ಸಾವಿರ ಯುವತಿಯರು ಮತ್ತು ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಅವಧಿ ಮುನ್ನ ಋತುಚಕ್ರ ಎಂದರೆ ಅವಧಿಗೆ ಮುನ್ನ ಈಸ್ಟ್ರೋಜನ್ ಹಾರ್ಮೋನ್ ಬಿಡುಗಡೆ ಆಗುವುದಾಗಿದೆ. ಇಂತಹ ಯುವತಿಯರಲ್ಲಿ ಸಾಮಾನ್ಯರಿಗಿಂತ ದೀರ್ಘಕಾಲ ಈಸ್ಟ್ರೋಜನ್ ಹಾರ್ಮೋನ್ಗಳಿಗೆ ಒಡ್ಡಿಕೊಳ್ಳುವ ಕಾಲ ಹೆಚ್ಚಿರುತ್ತದೆ. ಈ ಹಿನ್ನೆಲೆ ಅವರಲ್ಲಿ ಮಧುಮೇಹ ಮತ್ತು ಹೃದಯ ರಕ್ತನಾಳದಂತಹ ಸಮಸ್ಯೆಗಳು ಹೆಚ್ಚಿರುತ್ತದೆ. ಇದರ ಜೊತೆಗೆ ಅಧಿಕ ತೂಕ ಇದರ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ಅಂಶಗಳನ್ನು ಪರಿಗಣಿಸಿ, ಮಹಿಳೆಯರಲ್ಲಿ ಚಯಾಪಚಯ ಮತ್ತು ಹೃದಯರಕ್ತನಾಳದ ಕಾಯಿಲೆಗಳಿಗೆ ಸಮಗ್ರ ಚಿಕಿತ್ಸಾ ವಿಧಾನಗಳನ್ನು ವಿನ್ಯಾಸಗೊಳಿಸಬೇಕು.
10ನೇ ವಯಸ್ಸಿನಲ್ಲಿ ಋತುಚಕ್ರಕ್ಕೆ ಒಳಗಾಗುವ ಹುಡುಗಿಯರು ತಮ್ಮ ಮಧ್ಯ ವಯಸ್ಸಿನಲ್ಲಿ ಮಧುಮೇಹದ ಅಪಾಯ ದುಪ್ಪಟ್ಟು ಹೊಂದಿರುತ್ತದೆ. 11ನೇ ವಯಸ್ಸಿಗೆ ಋತುಚಕ್ರಕ್ಕೆ ಒಳಗಾಗುವರಲ್ಲಿ ಈ ಅಪಾಯ ಶೇ 29 ರಷ್ಟಿರುತ್ತದೆ.
ಯುವ ಮತ್ತು ಮಧ್ಯವಯಸ್ಕ ವಯಸ್ಕರಲ್ಲಿ ಮಧುಮೇಹ ಮತ್ತು ಅದರ ಸಮಸ್ಯೆಗಳು ಹೆಚ್ಚುತ್ತಿವೆ. ಇದರ ಜೊತೆಗೆ ಮಹಿಳೆಯರು ಫ್ರೌಢಾವಸ್ಥೆಗೆ ತಲುಪುವ ಸರಾಸರಿ ವಯೋಮಾನ ಕುಸಿಯುತ್ತಿದ್ದು, ಅವಧಿ ಪೂರ್ವಕವಾಗಿ ಅವರು ಋತುಚಕ್ರದ ಬಂಧಕ್ಕೆ ಒಳಗಾಗುತ್ತಿದ್ದಾರೆ.
ಇದೊಂದು ಅವಲೋಕನಾತ್ಮಕ ಅಧ್ಯಯನವಾಗಿದ್ದು, ಇದರ ಜೊತೆಗೆ ಸಾಮಾನ್ಯ ಅಂಶವನ್ನು ಸ್ಥಾಪಿಸಲು ಸಾಧ್ಯವಿಲ್ಲ. ಆದರೆ, ಅವಧಿಗೆ ಮುನ್ನ ಋತುಚಕ್ರಕ್ಕೆ ಒಳಗಾಗುವುದು ಅವರ ಮಧ್ಯವಯಸ್ಸಿನಲ್ಲಿ ಕಾರ್ಡಿಯೋಮೆಟಬೊಲಿಕ್ ರೋಗದ ಸೂಚಕವಾಗಬಹುದು ಎಂದು ಅಮೆರಿಕದ ಟ್ಯುಲನೆ ಯುನಿವರ್ಸಿಟಿಯ ಸೈಲ್ವಿಯಾ ಎಚ್ ಲೇ ತಿಳಿಸಿದ್ದಾರೆ.
ಮೊದಲ ಋತುಚಕ್ರದ ವಯಸ್ಸಿನ ನಡುವಿನ ಸಂಬಂಧಗಳು ಮತ್ತು ತೂಕವನ್ನು ಲೆಕ್ಕಹಾಕಿದಾಗ ಅವರು, ಪಾರ್ಶ್ವವಾಯು ಸಮಸ್ಯೆಗಳಿಂದ ದುರ್ಬಲಗೊಂಡಿದ್ದರೂ, ಇದು ಸಂಖ್ಯಾಶಾಸ್ತ್ರೀಯವಾಗಿ ಮಹತ್ವದ್ದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಈ ಹಿನ್ನೆಲೆ ಕೊಬ್ಬಿನಾಂಶವೂ ಪ್ರಮುಖ ಪಾತ್ರವನ್ನು ಹೊಂದಿದ್ದು, ಇದು ಅವಧಿಪೂರ್ವ ಋತುಚಕ್ರ ಮತ್ತು ಪಾರ್ಶ್ವಾಯು ಸಮಸ್ಯೆಯೊಂದಿಗೆ ಸಂಬಂಧ ಹೊಂದಿದೆ ಎಂದು ಗಮನಿಸಲಾಗಿದೆ. ಬಾಲ್ಯದ ಕೊಬ್ಬಿನಾಂಶವೂ ಅವಧಿ ಪೂರ್ವ ಋತುಚಕ್ರದ ಜೊತೆಗೆ ನಂತರದ ಜೀವನದಲ್ಲಿ ಹೃದಯದ ಸಮಸ್ಯೆಯೊಂದಿಗೆ ಸಮಸ್ಯೆ ಹೊಂದಿದೆ ಎಂದು ಅಧ್ಯಯನ ತಿಳಿಸಿದೆ.
ಇದನ್ನೂ ಓದಿ: ಅವಧಿಗೆ ಮುನ್ನವೇ ಪ್ರೌಢಾವಸ್ಥೆ ತಲುಪುವ ಬಾಲಕರು; ಈ ಬೆಳವಣಿಗೆಗೆ ಕಾರಣ ಇದು!