ನವದೆಹಲಿ: ಈ ವರ್ಷಾರಂಭದ ಮೊದಲ ಒಂಭತ್ತು ತಿಂಗಳಲ್ಲಿ ಪ್ರತಿನಿತ್ಯವೂ ಶೀತಗಾಳಿ, ಚಂಡಮಾರುತ, ಗುಡುಗು-ಮಿಂಚಿನಿಂದ ಕೂಡಿದ ಮಳೆ, ಪ್ರವಾಹ, ಭೂ ಕುಸಿತದಂತಹ ಒಂದಲ್ಲೊಂದು ರೀತಿಯ ಹವಾಮಾನ ವೈಪರೀತ್ಯವನ್ನು ಭಾರತ ದೇಶ ಕಂಡಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ ತಿಳಿಸಿದೆ.
ಜನವರಿ 1ರಿಂದ ಸೆಪ್ಟೆಂಬರ್ 30ರವರೆಗೆ ದೇಶದಲ್ಲಿ ಈ ರೀತಿಯ ಘಟನೆಗಳು ಜರುಗಿವೆ. ಇದರಿಂದ ಶೇ 86ರಷ್ಟು ಪರಿಣಾಮ ಕಂಡುಬಂದಿದೆ. ಈ ವಿಪತ್ತುಗಳು 2,923 ಜನರ ಪ್ರಾಣ ಹಾನಿಗೂ ಕಾರಣವಾಗಿವೆ. 1.84 ಮಿಲಿಯನ್ ಹೆಕ್ಟೇರ್ ಬೆಳೆ ಪ್ರದೇಶ ಮತ್ತು 80 ಸಾವಿರ ಮನೆಗಳನ್ನು ನಾಶ ಮಾಡಿವೆ. ಅಷ್ಟೇ ಅಲ್ಲದೇ 92 ಸಾವಿರ ಜಾನುವಾರುಗಳನ್ನು ಆಪೋಷನ ಪಡೆದಿದೆ. ಇದಕ್ಕಿಂತ ಹೆಚ್ಚು ಅಚ್ಚರಿಯ ಅಂಶವೆಂದರೆ ಈ ಎಲ್ಲಾ ಲೆಕ್ಕಾಚಾರ ನಗಣ್ಯವಾಗಿದೆ. ಏಕೆಂದರೆ ಇದರಲ್ಲಿ ಸಾರ್ವಜನಿಕ ಆಸ್ತಿ/ಕೃಷಿ ನಷ್ಟ ಲೆಕ್ಕ ಇಲ್ಲ!.
ಈ ಅಂಕಿಅಂಶಗಳನ್ನು ಸಿಎಸ್‌ಇ ಮತ್ತು ಡೌನ್ ಟು ಅರ್ಥ್ ಮ್ಯಾಗಜೀನ್ ಕಲೆ ಹಾಕಿದೆ. 2023ರಲ್ಲಿ ದೇಶದಲ್ಲಿ ವಿಪರೀತ ಹವಾಮಾನ ಘಟನೆಗಳು ನ್ಯೂ ಪ್ರಿ ಸಿಒಪಿ28 ಮೌಲ್ಯಮಾಪನದ ಭಾಗವಾಗಿದೆ. ಇದನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.
ಇಂಡಿಯಾ 2023: ಆ್ಯನ್ ಅಸೆಸ್ಮೆಂಟ್ ಆಫ್ ಎಕ್ಸಿಟ್ರೀಮ್ ವೆದರ್ ಈವೆಂಟ್ ಲೇಖನ ದೇಶದಲ್ಲಿ ವಿಪರೀತ ಹವಾಮಾನ ಘಟನೆಗಳು ಆವರ್ತನ ಮತ್ತು ಭೌಗೋಳಿಕತೆಯ ಮೇಲೆ ವಿಸ್ತರಿಸುತ್ತಿರುವುದಕ್ಕೆ ಸಾಕ್ಷ್ಯ ನೀಡಿದೆ. ಈ ಮೌಲ್ಯಮಾಪನದಲ್ಲಿ 2023ರಲ್ಲಿ ದೇಶದಲ್ಲಾಗಿರುವ ಘಟನೆಗಳು ಜಾಗತಿಕ ತಾಪಮಾನದಲ್ಲಿ ಹೊಸ ಅಸಹಜ ಬೆಳವಣಿಗೆ ಎಂದು ತೋರಿಸಿದ್ದಾಗಿ ಸಿಎಸ್‌ಇ ಪ್ರಧಾನ ನಿರ್ದೇಶಕ ಸುನೀತ್ ನರೈನ್ ತಿಳಿಸಿದ್ದಾರೆ.
ಭಾರತ 273 ದಿನದಲ್ಲಿ 235 ದಿನಗಳ ಕಾಲ ವಿಪರೀತ ಹವಾಮಾನ ಬದಲಾವಣೆಯನ್ನು ಅನುಭವಿಸಿದೆ. ಮಧ್ಯಪ್ರದೇಶದಲ್ಲಿ ಇದರ ತೀವ್ರತೆ ಹೆಚ್ಚು. ಆದರೆ, ಅತಿ ಹೆಚ್ಚು ಜನ ಸಾವನ್ನಪ್ಪಿರುವುದು (642) ಬಿಹಾರದಲ್ಲಿ. ಹಿಮಾಚಲ ಪ್ರದೇಶದಲ್ಲಿ 365 ಮತ್ತು ಉತ್ತರ ಪ್ರದೇಶದಲ್ಲಿ 341 ಸಾವು ದಾಖಲಾಗಿದೆ.
ಪಂಜಾಬ್ನಲ್ಲಿ ಅತಿ ಹೆಚ್ಚು ಪ್ರಾಣಿಗಳು ಸಾವನ್ನಪ್ಪಿದ್ದು, ಹಿಮಾಚಲ್ ಪ್ರದೇಶದಲ್ಲಿ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಇನ್ನು ದಕ್ಷಿಣದ ರಾಜ್ಯಗಳ ಪೈಕಿ ಕೇರಳದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ವಿಪರೀತ ಹವಾಮಾನದ ದಿನ (67) ದಾಖಲಾಗಿದೆ. ಇದರಲ್ಲಿ 60 ಸಾವು ದಾಖಲಾಗಿದೆ. ತೆಲಂಗಾಣದಲ್ಲಿ 62 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದ್ದು, 645 ಪ್ರಾಣಿಗಳು ಸಾವನ್ನಪ್ಪಿವೆ. 11 ಸಾವಿರ ಮನೆಗಳು ನಾಶವಾಗಿವೆ. ಕರ್ನಾಟಕ ಕೂಡ ಈ ಎಲ್ಲಾ ಘಟನೆಗಳಿಂದ ಹೊರಗುಳಿದಿಲ್ಲ.
ವಾಯುವ್ಯ ಭಾರತದಲ್ಲಿ ಉತ್ತರ ಪ್ರದೇಶ ಅತಿ ಹೆಚ್ಚು ತಾಮಮಾನ (113) ದಿನಕ್ಕೆ ಸಾಕ್ಷಿಯಾಗಿದೆ. ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಉತ್ತರಾಖಂಡ್ ಮತ್ತು ರಾಜಸ್ಥಾನ ಕೂಡ ಕೆಟ್ಟ ಹವಾಮಾನಕ್ಕೆ ಗುರಿಯಾಗಿದೆ.
ಪೂರ್ವ ಮತ್ತು ಈಶಾನ್ಯ ರಾಜ್ಯದಲ್ಲಿ ಅಸ್ಸಾಂನಲ್ಲಿ 102 ಘಟನೆಗಳು ಘಟಿಸಿದ್ದು, 159 ಪ್ರಾಣಿಗಳು ಸಾವನ್ನಪ್ಪಿವೆ. 48 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ನಾಶವಾಗಿದೆ. ನಾಗಾಲ್ಯಾಂಡ್ನಲ್ಲಿ 1,900 ಮನೆಗಳು ನಾಶವಾಗಿವೆ.
ಸರಾಸರಿಗಿಂತ ಜನವರಿ ಕೊಂಚ ಬೆಚ್ಚಗಿನ ತಿಂಗಳಾಗಿದೆ. ಫೆಬ್ರವರಿಯಲ್ಲಿ 122 ವರ್ಷಗಳಲ್ಲಿ ದಾಖಲಾದ ಅತಿ ಬೆಚ್ಚಿಗಿನ ಮಾಸ. ಇದು ಹೆಚ್ಚು ಒಣ ತಿಂಗಳಾಗಿದೆ. ಆಗಸ್ಟ್ ಕೂಡ 122 ವರ್ಷಗಳಲ್ಲೇ ಅತಿ ಹೆಚ್ಚು ಒಣ ಮಾಸವಾಗಿದೆ.
2022ಕ್ಕೆ ಹೋಲಿಸಿದರೆ 2023 ಹೆಚ್ಚು ವಿನಾಶವನ್ನು ಕಂಡಿದೆ ಎಂದು ವರದಿ ತಿಳಿಸಿದೆ. 2023ರಲ್ಲಿ ಇಡೀ ದೇಶದಾದ್ಯಂತ ಕೆಟ್ಟ ಹವಾಮಾನ ವೈಪರೀತ್ಯ ಅನುಭವಕ್ಕೆ ಬಂದಿದೆ. ಕಳೆದ ವರ್ಷ 34 ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ವರ್ಷ ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಪರಿಣಾಮ ಕಂಡಿದೆ ಎಂದು ಸಿಎಸ್ಇಯ ಪರಿಸರ ಸಂಪನ್ಮೂಲ ಘಟಕದ ಯೋಜನಾ ನಿರ್ದೇಶಕ ಕಿರಣ್ ಪಾಂಡೆ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಹವಾಮಾನ ಬದಲಾವಣೆಯಿಂದ ಅಮೆರಿಕದತ್ತ ತೆರಳುತ್ತಿರುವ ವಾಂಪೈರ್ ಬಾವಲಿಗಳು; ರೇಬೀಸ್ ಭೀತಿ