ETV Bharat / sukhibhava

ಕೊರೊನಾ ನಿಮ್ಮ ಉಸಿರಾಟದ ವ್ಯವಸ್ಥೆ ಮಾತ್ರ ಕೆಡಿಸಲ್ಲ..ಅಂಗಾಂಗಗಳ ಮೇಲೂ ಪರಿಣಾಮ ಬೀರತ್ತೆ.. - ನರ ಸಂಬಂಧಿತ ಸಮಸ್ಯೆಗಳು

ಕೊರೊನಾ ವೈರಸ್​​ ನಿಮ್ಮ ಉಸಿರಾಟದ ವ್ಯವಸ್ಥೆ ಮೇಲೆ ಮಾತ್ರವಲ್ಲ ಇತರ ಅಂಗಗಳ ಮೇಲೂ ಪರಿಣಾಮ ಬೀರುತ್ತದೆ ಮತ್ತು ನರಗಳ ಹಾನಿಗೂ ಕಾರಣವಾಗಬಹುದು. ಕೋವಿಡ್​ ಸೃಷ್ಟಿಸುವ ನರ ಸಂಬಂಧಿತ ಸಮಸ್ಯೆಗಳ ಬಗ್ಗೆ ಮಾಹಿತಿ ಇಲ್ಲಿದೆ.

Nerve Related Difficulties Due To COVID-19

author img

By

Published : Aug 6, 2021, 5:16 PM IST

ಜಗತ್ತನ್ನೇ ಬೆಚ್ಚಿಬೀಳಿಸುವ ಕೋವಿಡ್ ಮಹಾಮಾರಿ ಬಗ್ಗೆ ಭಯಾನಕ ಸಂಗತಿಗಳನ್ನು ಕೆಲ ತಜ್ಞರು ಹೊರಹಾಕಿದ್ದಾರೆ. ಕೊರೊನಾ ವೈರಸ್​​ ನಿಮ್ಮ ಉಸಿರಾಟದ ವ್ಯವಸ್ಥೆ ಮೇಲೆ ಮಾತ್ರವಲ್ಲ ಇತರ ಅಂಗಗಳ ಮೇಲೂ ಪರಿಣಾಮ ಬೀರುತ್ತದೆ ಮತ್ತು ನರಗಳ ಹಾನಿಗೂ ಕಾರಣವಾಗಬಹುದು. ಇದು ಪಾರ್ಶ್ವವಾಯು, ಮೆದುಳಿನ ಊತ ಮತ್ತು ಕಾಲುಗಳು ಮತ್ತು ತೋಳುಗಳ ದುರ್ಬಲತೆಗೆ ನಿಮ್ಮನ್ನು ದೂಡಬಹುದು. ಸೋಂಕಿನಿಂದ ಬಳಲುತ್ತಿರುವಾಗ ಮಾತ್ರವಲ್ಲ, ಚೇತರಿಕೆಯ ನಂತರವೂ ಇದು ಸಂಭವಿಸಬಹುದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ.

ನರ ಸಂಬಂಧಿತ ಸಮಸ್ಯೆಗಳು

1.ಪಾರ್ಶ್ವವಾಯು

ತೀವ್ರವಾದ ಕೋವಿಡ್‌ನಿಂದ ಬಳಲುತ್ತಿರುವ ಸುಮಾರು ಶೇ.1-2ರಷ್ಟು ಜನರು ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಮೆದುಳಿನ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಅಥವಾ ರಕ್ತಸ್ರಾವವೂ ಸಂಭವಿಸಬಹುದು. ಸಾಮಾನ್ಯವಾಗಿ, ಮದ್ಯಪಾನ, ಅಸಮರ್ಪಕ ದೈಹಿಕ ಚಟುವಟಿಕೆಗಳು ಮತ್ತು ಇತರ ಅಪಾಯಕಾರಿ ಅಂಶಗಳು ಸ್ಥೂಲಕಾಯ, ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಹೃದ್ರೋಗ ಇತ್ಯಾದಿಗಳಿಗೆ ಕಾರಣವಾಗಬಹುದು. ಕೋವಿಡ್ -19 ಚಿಕಿತ್ಸೆಯ ಸಮಯದಲ್ಲಿ, ಕೆಲವರಿಗೆ ರಕ್ತ ತೆಳುವಾಗಲು ಔಷಧ ನೀಡಲಾಗುತ್ತದೆ. ಇದು ಮೆದುಳಿನಲ್ಲಿ ರಕ್ತಸ್ರಾವಕ್ಕೆ, ಪ್ಲೇಟ್‌ಲೆಟ್‌ಗಳ ಇಳಿಕೆಗೆ ಕಾರಣವಾಗಿ ಪಾರ್ಶ್ವವಾಯುವಿಗೆ ದಾರಿಮಾಡಿಕೊಡುತ್ತದೆ. ಗೊಂದಲ, ಅಸ್ಪಷ್ಟ ಮಾತು, ಮಸುಕಾದ ದೃಷ್ಟಿ, ದೇಹದ ಒಂದು ಬದಿಯಲ್ಲಿ ಮರಗಟ್ಟುವಿಕೆ, ದೌರ್ಬಲ್ಯ, ಅಸ್ವಸ್ಥತೆಗೆ ಇದರ ಲಕ್ಷಣಗಳಾಗಿವೆ.

ಚಿಕಿತ್ಸೆ:

ಪಾರ್ಶ್ವವಾಯುವಿನ ಯಾವುದೇ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯಕೀಯ ಸಹಾಯ ಪಡೆಯಿರಿ. ಎಂಆರ್‌ಐ ಸ್ಕ್ಯಾನ್‌ಗಳು ಮೆದುಳಿನ ಯಾವ ಭಾಗವು ಹಾನಿಗೊಳಗಾಗಿದೆ ಎಂಬುದನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಇದಲ್ಲದೇ, ಹೃದಯದ ಕಾರ್ಯಗಳನ್ನು ನಿರ್ಧರಿಸಲು ಗ್ಲೂಕೋಸ್ ಮತ್ತು ಕೊಲೆಸ್ಟ್ರಾಲ್ ಪರೀಕ್ಷೆಗಳನ್ನು ಇಸಿಜಿ ಮತ್ತು 2ಡಿ ಎಕೋ ಪರೀಕ್ಷೆಗಳೊಂದಿಗೆ ಮಾಡಬಹುದು.

ರಕ್ತ ಹೆಪ್ಪುಗಟ್ಟುವಿಕೆಯಿಂದ ಪಾರ್ಶ್ವವಾಯು ಸಂಭವಿಸಿದಲ್ಲಿ, ಮೊದಲ 4-5 ಗಂಟೆಗಳಲ್ಲಿ TPA ಇಂಜೆಕ್ಷನ್ ಅನ್ನು ಅಭಿದಮನಿ ಮೂಲಕ ನೀಡಲಾಗುತ್ತದೆ. ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಯನ್ನೂ ಮಾಡಬಹುದು. ಹೆಮರಾಜಿಕ್ ಸ್ಟ್ರೋಕ್​​ನ ಸಂದರ್ಭದಲ್ಲಿ, ರಕ್ತದೊತ್ತಡವನ್ನು ನಿಯಂತ್ರಿಸುವುದು ಮುಖ್ಯವಾಗಿದೆ. ಅದೇ ರೀತಿ ಪರಿಸ್ಥಿತಿ ಅವಲಂಬಿಸಿ, ಚಿಕಿತ್ಸೆಯನ್ನು ನೀಡಲಾಗುತ್ತದೆ. ಪಾರ್ಶ್ವವಾಯುಗೆ ಸಮಯೋಚಿತ ಚಿಕಿತ್ಸೆಯು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.

ವ್ಯಾಯಾಮ:

ಪಾರ್ಶ್ವವಾಯು ಹೊಂದಿರುವ ಜನರು ಸ್ನಾಯು ದೌರ್ಬಲ್ಯ ಅನುಭವಿಸಬಹುದು, ಸರಿಯಾಗಿ ಮಾತನಾಡಲು ಸಾಧ್ಯವಾಗದಿರಬಹುದು, ಮರೆವು ಮತ್ತು ದೀರ್ಘಕಾಲದ ಯಾತನೆ ಹೊಂದಿರಬಹುದು. ಆದ್ದರಿಂದ, ನಿಯಮಿತವಾಗಿ ವ್ಯಾಯಾಮ ಮಾಡುವುದು ಬಹಳ ಮುಖ್ಯ. ಸ್ನಾಯುಗಳನ್ನು ಬಲಪಡಿಸುವ, ಅವುಗಳನ್ನು ಹಿಗ್ಗಿಸುವ ಮತ್ತು ಇಡೀ ದೇಹವನ್ನು ಚಲಿಸುವಂತೆ ಮಾಡುವ ವ್ಯಾಯಾಮಗಳನ್ನು ಪ್ರತಿದಿನ 30-40 ನಿಮಿಷಗಳ ಕಾಲ ಅಭ್ಯಾಸ ಮಾಡಬೇಕು.

2.ಮೈಯೋಸಿಟಿಸ್

ಸ್ನಾಯುಗಳ ಉರಿಯೂತವನ್ನು ಮೈಯೋಸಿಟಿಸ್ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಗಾಯ, ಸೋಂಕು ಅಥವಾ ಆಟೋಇಮ್ಯೂನ್ ಕಾಯಿಲೆಯಿಂದ ಉಂಟಾಗುತ್ತದೆ. ಈ ಸ್ಥಿತಿಯು ಕೋವಿಡ್​ಗೆ ಒಳಗಾದ ಕೆಲವರಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ ಮತ್ತು ಕೋವಿಡ್ ಚಿಕಿತ್ಸೆಗಾಗಿ ನೀಡಿದ ಕೆಲವು ಔಷಧಿಗಳು ಮೈಯೋಸಿಟಿಸ್‌ಗೆ ಕಾರಣವಾಗಬಹುದು. ಇದರಿಂದಾಗಿ ವ್ಯಕ್ತಿಯು ಸ್ನಾಯುಗಳಲ್ಲಿ ದೌರ್ಬಲ್ಯ, ಉರಿಯೂತ ಮತ್ತು ನೋವನ್ನು ಅನುಭವಿಸಬಹುದು.

ಚಿಕಿತ್ಸೆ:

ಸ್ನಾಯು ಕಿಣ್ವಗಳು ಮತ್ತು ರಕ್ತದಲ್ಲಿನ ಪ್ರತಿಕಾಯಗಳನ್ನು ಪರೀಕ್ಷಿಸಬೇಕಿದೆ. ಸ್ನಾಯುಗಳ ಎಂಆರ್‌ಐ ಪರೀಕ್ಷೆಯು ಯಾವುದಾದರೂ ಬದಲಾವಣೆಗಳು ಇದ್ದರೆ ಬಹಿರಂಗಪಡಿಸಬಹುದು. ಮೈಯೋಸಿಟಿಸ್ ಅನ್ನು ಕಡಿಮೆ ಮಾಡಲು ಪ್ರೆಡ್ನಿಸೋನ್ ನಂತಹ ಸ್ಟೀರಾಯ್ಡ್​​ಗಳನ್ನು ನೀಡಬಹುದು.

3.ಮೂರ್ಛೆ ರೋಗ

ಕೊರೊನಾಗೆ ಒಳಗಾದ ಕೆಲವು ಜನರು ಉಸಿರಾಟದ ತೊಂದರೆ ಅನುಭವಿಸದೇ ಇರಬಹುದು, ಆದರೆ, ಫಿಟ್ಸ್ (ಮೂರ್ಛೆ ರೋಗ)ಗೆ ಒಳಗಾಗುವ ಸಾಧ್ಯತೆಯಿರುತ್ತದೆ. ಸೋಡಿಯಂ ಮಟ್ಟ ಕಡಿಮೆಯಾಗಿದ್ದರೆ, ರಕ್ತದೊತ್ತಡ ಅಥವಾ ಗ್ಲೂಕೋಸ್ ಮಟ್ಟಗಳು ಅಧಿಕವಾಗಿದ್ದರೆ, ಅವುಗಳನ್ನು ನಿಯಂತ್ರಿಸಬಹುದು. ಇದರ ಹೊರತಾಗಿ, ಔಷಧವೂ ಅಗತ್ಯವಾಗಬಹುದು. ಇಸಿಜಿ, ಸಿಟಿ ಸ್ಕ್ಯಾನ್ ಮತ್ತು ಎಂಆರ್‌ಐ ಸಹಾಯದಿಂದ ಫಿಟ್ಸ್ ಪತ್ತೆ ಮಾಡಬಹುದು. ಕೆಲವು ಸಂದರ್ಭಗಳಲ್ಲಿ, ಬೆನ್ನುಮೂಳೆಯಿಂದ ದ್ರವಗಳನ್ನು ಸಂಗ್ರಹಿಸಿ ಪರೀಕ್ಷಿಸಬಹುದು.

4. ರುಚಿ ಮತ್ತು ವಾಸನೆಯ ಸಂವೇದನೆ ಕಡಿಮೆಯಾಗುವುದು

ವಾಸನೆ ಮತ್ತು ರುಚಿ ಕಳೆದುಕೊಳ್ಳುವುದು ಅಥವಾ ಕಡಿಮೆಯಾಗುವುದು ನರವೈಜ್ಞಾನಿಕ ಸಮಸ್ಯೆಗಳು. ಕೋವಿಡ್​ನಿಂದ ಚೇತರಿಸಿಕೊಂಡ ಜನರು ಇನ್ನೂ ಅದರೊಂದಿಗೆ ಹೋರಾಡುತ್ತಿದ್ದಾರೆ. ಸಾಮಾನ್ಯವಾಗಿ, ಇದು ಹಾನಿಗೊಳಗಾದ ನರ ಕೋಶಗಳಿಂದಾಗಿ ರುಚಿ ಮತ್ತು ವಾಸನೆ ಗ್ರಹಿಸುತ್ತದೆ. ಇದು ಮೂಗಿನ ಉರಿಯೂತ ಪ್ರತಿಕ್ರಿಯೆಯಿಂದಲೂ ಆಗಿರಬಹುದು. ಆದರೆ, ಭಯಪಡುವ ಅಗತ್ಯವಿಲ್ಲ, ಇದು ಕ್ರಮೇಣ ಸುಧಾರಿಸುತ್ತದೆ.

5.ತೀವ್ರ ಅನಾರೋಗ್ಯ

ಕೊರೊನಾ ವೈರಸ್​ನ ಹೆಚ್ಚು ಪರಿಣಾಮ ಅನುಭವಿಸಿದ ಜನರು ದೀರ್ಘಕಾಲದವರೆಗೆ ಆಸ್ಪತ್ರೆಗೆ ದಾಖಲಾಗಿ, ಭಾರೀ ಪ್ರಮಾಣದ ಔಷಧಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ವೆಂಟಿಲೇಟರ್‌ನಲ್ಲಿರಬೇಕಾಗುತ್ತದೆ. ಚಿಕಿತ್ಸೆಯ ನಂತರ ಬೆಡ್ ರೆಸ್ಟ್ ಅಗತ್ಯವಿರುತ್ತದೆ.

ದೀರ್ಘಕಾಲದ ವಿಶ್ರಾಂತಿಯು ಕೆಲವು ಮಾನಸಿಕ ಮತ್ತು ನಿದ್ರೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಚಯಾಪಚಯ ಬದಲಾವಣೆಗಳಿಂದಾಗಿ ಸ್ನಾಯು ಹಾನಿಗೊಳಗಾಗಬಹುದು. ವೈದ್ಯಕೀಯ ಆಮ್ಲಜನಕದ ದೀರ್ಘಕಾಲದ ಬಳಕೆಯು ಒತ್ತಡಕ್ಕೆ ಕಾರಣವಾಗಬಹುದು ಮತ್ತು ಕೆಲವು ನರಗಳು ಸಾಯಬಹುದು.

6.ಪರಿಧಮನಿಯ ಹೃದಯ ರೋಗ

ಕೋವಿಡ್ -19 ತೀವ್ರ ಸೋಂಕಿನಲ್ಲಿ, ನೆಕ್ರೋಸಿಸ್ ಫ್ಯಾಕ್ಟರ್, ಇಂಟರ್ಲ್ಯೂಕಿನ್ 6, ಡೈಮರ್, ಫೆರಿಟಿನ್ ಮತ್ತು ಇತರ ಉರಿಯೂತದ ಸೂಚಕಗಳು ಅಗತ್ಯಕ್ಕಿಂತ ಹೆಚ್ಚು ಉತ್ಪಾದಿಸಲ್ಪಡುತ್ತವೆ. ಅವು ಮೆದುಳು, ನರಗಳು ಮತ್ತು ಮೆದುಳಿಗೆ ರಕ್ತವನ್ನು ಪೂರೈಸುವ ರಕ್ತನಾಳಗಳು ಸೇರಿದಂತೆ ದೇಹದ ಯಾವುದೇ ಭಾಗದ ಮೇಲೆ ದಾಳಿ ಮಾಡಬಹುದು. ಇದರ ಪರಿಣಾಮವಾಗಿ ಮೈಯಾಲ್ಜಿಯಾ, ತಲೆನೋವು, ಗೊಂದಲ ಮತ್ತು ತಾತ್ಕಾಲಿಕ ಮರೆವಿನಂತಹ ನರವೈಜ್ಞಾನಿಕ ಸಮಸ್ಯೆಗಳು ಬರುತ್ತವೆ.

ವಯಸ್ಸಾದವರಿಗೆ ಮತ್ತು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಇತರ ಸಮಸ್ಯೆಗಳಿರುವವರಿಗೆ ಹೆಚ್ಚಿನ ಅಪಾಯವಿದೆ. ಈಗಾಗಲಢ ಪಾರ್ಶ್ವವಾಯು ಅಥವಾ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅಪಾಯವು ಇನ್ನೂ ಹೆಚ್ಚಿರುತ್ತದೆ.

ಇತರ ಸಮಸ್ಯೆಗಳು

ಗುಯಿಲಿನ್ ಬಾರ್ ಸಿಂಡ್ರೋಮ್ ನಂತಹ ಕೆಲವು ನರ ಸಂಬಂಧಿತ ಸಮಸ್ಯೆಗಳು ಸಂಭವಿಸಬಹುದು. ಇದರಲ್ಲಿ, ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ತಪ್ಪಾಗಿ ದೇಹದ ನರಮಂಡಲದ ಮೇಲೆ ದಾಳಿ ಮಾಡುತ್ತದೆ, ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದು ಸೋಂಕಿನಿಂದ 5-10 ದಿನಗಳ ನಂತರ ಸಂಭವಿಸುತ್ತದೆ ಮತ್ತು ಮೊದಲು ಕಾಲುಗಳನ್ನು ಮತ್ತು ನಂತರ ತೋಳುಗಳನ್ನು ದುರ್ಬಲಗೊಳಿಸುತ್ತದೆ. ಸಮಸ್ಯೆ ಉಲ್ಬಣಗೊಂಡರೆ, ಆಹಾರ ಸೇವಿಸಲು ಹಾಗೂ ಉಸಿರಾಡಲು ಕಷ್ಟವಾಗಬಹುದು. ಈ ರೋಗಲಕ್ಷಣಗಳು ವಾರಗಳು ಅಥವಾ ತಿಂಗಳುಗಳವರೆಗೆ ಇರಬಹುದು.

ಮಿದುಳನ್ನು ಹೊರತುಪಡಿಸಿ, ಕಣ್ಣಿನ ನರಗಳು ಹಾನಿಗೊಳಗಾದರೆ, ದೃಷ್ಟಿ ಪರಿಣಾಮ ಬೀರುತ್ತದೆ ಮತ್ತು ಮಸುಕಾಗುತ್ತದೆ. ಮುಖದ ನರವು ಹಾನಿಗೊಳಗಾಗಿದ್ದರೆ, ಮುಖದ ಒಂದು ಭಾಗವು ಬದಿಗೆ ಓರೆಯಾಗಿ ಕಾಣಿಸಬಹುದು. ಈ ಸ್ಥಿತಿಯನ್ನು ಬೆಲ್ಸ್ ಪಾಲ್ಸಿ ಎಂದು ಕರೆಯಲಾಗುತ್ತದೆ.

ಪಾಲಿಸಬೇಕಾದ ಅಂಶಗಳು:

  • ವೈದ್ಯರು ಸೂಚಿಸಿದ ಔಷಧಗಳನ್ನು ತಪ್ಪದೇ ತೆಗೆದುಕೊಳ್ಳುವುದು
  • ಫಿಸಿಯೋಥೆರಪಿ ಅಥವಾ ಭೌತ ಚಿಕಿತ್ಸೆ ಮುಂದುವರೆಸುವುದು
  • ರಕ್ತದೊತ್ತಡ, ಗ್ಲೂಕೋಸ್ ಮತ್ತು ತೂಕ ನಿಯಂತ್ರಣದಲ್ಲಿಟ್ಟುಕೊಳ್ಳುವುದು
  • ದೇಹದ ಸಾಮರ್ಥ್ಯಕ್ಕೆ ಅನುಗುಣವಾಗಿ ಮತ್ತು ವೈದ್ಯರ ಸಲಹೆಯಂತೆ ನಿಯಮಿತ ವ್ಯಾಯಾಮ
  • ಕಠಿಣ ವ್ಯಾಯಾಮಗಳನ್ನು ಮಾಡದಿರುವುದು
  • ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಯೋಗ ಮತ್ತು ಧ್ಯಾನವನ್ನು ಅಭ್ಯಾಸ
  • ಹೆಚ್ಚು ಹಣ್ಣು-ತರಕಾರಿಗಳನ್ನು ಸೇವಿಸುವುದು
  • ಆರೋಗ್ಯಕ್ಕೆ ಅನುಗುಣವಾಗಿ ಆಹಾರ ಬದಲಾವಣೆ
  • ಸರಿಯಾದ ನಿದ್ರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.