ನ್ಯೂಯಾರ್ಕ್: ಹವಾಮಾನ ಬದಲಾವಣೆ ಪರಿಸ್ಥಿತಿ ಹೆಚ್ಚಾದಂತೆ ಕಾಳ್ಗಿಚ್ಚು ಮತ್ತು ಬೆಂಕಿ ಋತುಮಾನಗಳ ವಿಸ್ತರಣೆ ಹೆಚ್ಚಳ ಆಗುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ. ಕಾಳ್ಗಿಚ್ಚು ದೇಶದಲ್ಲಿ ನಡೆಯುವ ದೊಡ್ಡಮಟ್ಟದ ವಿಪ್ಪತ್ತು ಆಗಿದ್ದು, ಇದು ಜೀವ ಬೆದರಿಕೆ ಒಡ್ಡುವ ಜೊತೆಗೆ ನಿರಾಶ್ರಿತರನ್ನಾಗಿ ಮಾಡುತ್ತದೆ. ಮೂಲ ಸೌಕರ್ಯದ ಮೇಲೆ ಪರಿಣಾಮವನ್ನು ಬೀರಿ, ವಾಯು ಮಾಲಿನ್ಯ ಸೃಷ್ಟಿಸುತ್ತದೆ.
ಭವಿಷ್ಯದ ಬೆಚ್ಚಗಿನ ವಾತಾವರಣದಿಂದ ಚಳಿಗಾಲದಲ್ಲೂ ಕೂಡ ಬೆಂಕಿ ಅಪಾಯಗಳು ಅಧಿಕ ಮಟ್ಟದಲ್ಲಿರುವುದನ್ನು ಕಾಣಬಹುದಾಗಿದೆ. ಹವಾಮಾನದ ಬದಲಾವಣೆ ಭೂಮಿಯ ಮೇಲೆ ಹಲವು ರೀತಿಯ ಬದಲಾವಣೆಗೆ ಕಾರಣವಾಗುತ್ತದೆ ಎಂದು ಅಮೆರಿಕದ ನೆವಡಾದ ಡಿಆರ್ಐ ಅಸಿಸ್ಟಂಟ್ ರಿಸರ್ಚ್ ಪ್ರೊ ಮತ್ತು ಪ್ರಮುಖ ಲೇಖಕ ಗುವಾ ಯು ತಿಳಿಸಿದ್ದಾರೆ.
ಈ ಅಧ್ಯಯನವನ್ನು ಅರ್ಥ್ಸ್ ಫ್ಯೂಚರ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. 1984 ರಿಂದ 2019ರ ನಡುವೆ ಉತ್ತರ ಅಮೆರಿಕದಲ್ಲಿ ನಡೆದ ನಾಲ್ಕು ದೊಡ್ಡ ಕಾಳ್ಗಿಚ್ಚನ್ನು ಅಮೆರಿಕ ಸಂಶೋಧಕರು ಗಮನಿಸಿದ್ದಾರೆ. ಈ ವೇಳೆ, ಈ ಕಾಳ್ಗಿಚ್ಚಿನ ಅಪಾಯ ನಿರ್ವಹಣೆ ಕುರಿತು ಅಧ್ಯಯನ ನಡೆಸಲಾಗಿದೆ. ಬಳಿಕ ಅವರು ಕಾಳ್ಗಿಚ್ಚಿನ ಅಪಾಯದ ಬದಲಾವಣೆಯನ್ನು ಭವಿಷ್ಯದ ಹವಾಮಾನ ಯೋಜನೆ ಅಡಿ ಗಮನಿಸಿದ್ದಾರೆ. ಕಾಳ್ಗಿಚ್ಚಿನ ಸಾಮರ್ಥ್ಯ ಮತ್ತು ದೀರ್ಘ ಕಾಳ್ಗಿಚ್ಚಿನ ಋತುಮಾನವೂ ಹವಾಮಾನದ ಬದಲಾವಣೆ ಅಡಿ ಪತ್ತೆ ಮಾಡಲಾಗಿದೆ.
ಕಾಳ್ಗಿಚ್ಚಿನ ಅಪಾಯದಲ್ಲಿ ಹವಾಮಾನದ ಪರಿಸ್ಥಿತಿ ಮತ್ತು ಫ್ಯುಯಲ್ ಮಾಶ್ಚರೈಸರ್ ಅಥವಾ ನೆಲದ ಮೇಲಿನ ಒಣ ಪ್ರದೇಶದ ಮಾಹಿತಿ ಪಡೆಯಲಾಗಿದೆ. ಮೊದಲ ಬಾರಿಗೆ, ವಿಜ್ಞಾನಿಗಳು 1984 ರಿಂದ 2019ರವರೆಗೆ ಕಾಳ್ಗಿಚ್ಚಿನ ಗಾತ್ರವೂ 13,000 ಕಾಳ್ಗಿಚ್ಚಿಗಿಂತ ಹೆಚ್ಚಾಗಿದ್ದು, ಕಾಳ್ಗಿಚ್ಚಿನ ಅಪಾಯವು ಹೆಚ್ಚಾದಾಗ, ಕಾಳ್ಗಿಚ್ಚಿನ ಗಾತ್ರವು ದೊಡ್ಡದಾಗಿರುತ್ತದೆ. ಈ ಸಂಬಂಧವು ದೊಡ್ಡ ಪ್ರದೇಶಗಳಲ್ಲಿ ಬಲವಾಗಿರುತ್ತದೆ ಎಂದು ಅಧ್ಯಯನದಲ್ಲಿ ತಿಳಿಸಿದ್ದಾರೆ
ಕಾಳ್ಗಿಚ್ಚಿನ ಅಪಾಯ ಹೆಚ್ಚಿದೆ. ಕಾಳ್ಗಿಚ್ಚಿನ ಗಾತ್ರ ದೊಡ್ಡದಾಗಿದೆ ಈ ಸಂಬಂಧವೂ ಹೆಚ್ಚಿನ ಪ್ರದೇಶದಲ್ಲಿ ಬಲವಾಗಿದೆ. ಭವಿಷ್ಯದ ಹವಾಮಾನ ಪ್ರದರ್ಶನಗಳಲ್ಲಿ ಬೆಂಕಿ ಅಪಾಯದ ಸೂಚನೆ ಹೊಂದಿದ್ದು, ಅಧ್ಯಯನವೂ ಅಮೆರಿಕ ಖಂಡದಲ್ಲಿ ಈ ಶತಮಾನ ಮುಗಿಯುವ ಹೊತ್ತಿಗೆ ಕಾಳ್ಗಿಚ್ಚಿನ ಅಪಾಯವನ್ನು 10 ದಿನಗಳ ಕಾಲ ಸರಾಸರಿ ಹೆಚ್ಚಿಸಲಿದೆ ಎಂದಿದೆ. ದಕ್ಷಿಣ ಗ್ರೇಟ್ ಪ್ಲೈನ್ಸ್ ಪ್ರದೇಶದಲ್ಲಿ ಈ ಕಾಳ್ಗಿಚ್ಚಿನ ಅಪಾಯ ಹೆಚ್ಚುವರಿಯಾಗಿ 40 ದಿನ ಇರಲಿದೆ.
ಕೆಲವು ಸಣ್ಣ ಪ್ರದೇಶಗಳು ಅಧಿಕ ಮಳೆ ಮತ್ತು ಆದ್ರತೆಯಿಂದಾಗಿ ಮಳೆ ಹೆಚ್ಚು ಪಡೆಯುತ್ತಿದ್ದು, ಕಾಳ್ಗಿಚ್ಚಿನ ಅಪಾಯವನ್ನು ಕಡಿಮೆ ಹೊಂದಿದೆ. ಇದರಲ್ಲಿ ಫೆಸಿಫಿಕ್ ವಾಯವ್ಯ ತೀರದ ಪ್ರದೇಶ ಮತ್ತು ಮಧ್ಯ ಅಟ್ಲಾಂಟಿಕ್ ತೀರಗಳಾಗಿದೆ. ನೈರುತ್ಯ ಪ್ರದೇಶದಲ್ಲಿ ಈ ಕಾಳ್ಗಿಚ್ಚಿನ ಅಪಾಯವೂ 20 ವರ್ಷದಲ್ಲಿ 20 ದಿನಗಳ ಕಾಲ ಹೆಚ್ಚಿರಲಿದೆ. ಇವುಗಳು ಬಹುತೇಕ ವಸಂತ ಮತ್ತು ಬೇಸಿಗೆಯ ತಿಂಗಳಲ್ಲಿ ಸಂಭವಿಸುತ್ತದೆ. ದೀರ್ಘದ ಕಾಳ್ಗಿಚ್ಚು ಋತುಮಾನವೂ ಚಳಿಗಾಲದ ತಿಂಗಳಲ್ಲಿ ಕಂಡು ಬಂದಿದೆ.
ಕಾಳ್ಗಿಚ್ಚಿನ ಸಾಮರ್ಥ್ಯದ ಗಾತ್ರವನ್ನು ನಿರ್ವಹಣೆ ಮಾಡಲು ಇದರಿಂದ ಅದಕ್ಕೆ ಅನುಗುಣವಾಗಿ ಸಿದ್ಧತೆ ನಡೆಸಲು ಮತ್ತು ಇಂತಹವುಗಳನ್ನು ಅರ್ಥ ಮಾಡಿಕೊಳ್ಳಲು ಅಧ್ಯಯನವೂ ಸಹಾಯ ಮಾಡುತ್ತದೆ. (ಐಎಎನ್ಎಸ್)
ಇದನ್ನೂ ಓದಿ: 2023ರಲ್ಲಿ ಭಾರತದಲ್ಲಿ ಶೇ 8.2ರಷ್ಟು ಹೆಚ್ಚಾಗಲಿದೆ ಇಂಗಾಲದ ಹೊರಸೂಸುವಿಕೆ ಪ್ರಮಾಣ; ಅಧ್ಯಯನ